Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs SA 2nd ODI: ದಕ್ಷಿಣ ಆಫ್ರಿಕಾಗೆ 288 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

Team india

ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಕಲೆಹಾಕಿದ್ದು, ದಕ್ಷಿಣ ಆಫ್ರಿಕಾಗೆ 288 ರನ್‌ಗಳ ಗುರಿ ನೀಡಿದೆ.

ಮೊದಲ ಏಕದಿನ ಪಂದ್ಯವನ್ನಾಡಿದ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಅರ್ಧಶತಕದ ಜೊತೆಯಾಟದ ಬಳಿಕ, ಕಳೆದ ಪಂದ್ಯದ ಗರಿಷ್ಠ ಸ್ಕೋರರ್ ಶಿಖರ್ ಧವನ್ 29 ರನ್‌ಗಳಿಸಿದ್ದಾಗ ಪಾರ್ಟ್‌ ಟೈಮ್ ಸ್ಪಿನ್ನರ್ ಏಡನ್ ಮಕ್ರಾಮ್‌ಗೆ ವಿಕೆಟ್ ಒಪ್ಪಿಸಿದ್ರು.

ಇದ್ರ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಯಿತು. ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ವಿರಾಟ್ ಕೊಹ್ಲಿ ಶೂನ್ಯಕ್ಕೆ ಕೇಶವ್ ಮಹಾರಾಜಗೆ ವಿಕೆಟ್ ಒಪ್ಪಿಸಿದ್ರು. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಸ್ಪಿನ್ನರ್‌ಗೆ ವಿಕೆಟ್ ನೀಡಿದ್ರು. ಇದ್ರಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಆಧಾರವಾಗಿದ್ದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಕೆ.ಎಲ್ ರಾಹುಲ್.

ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ದಕ್ಷಿಣ ಆಫ್ರಿಕಾದ ದಾಳಿಯನ್ನ ಹಿಮ್ಮೆಟ್ಟಿಸಿತು. ಟೀಂ ಇಂಡಿಯಾ 200ರ ಗಡಿ ದಾಟಲು ನೆರವಾದ್ರು. ಅದ್ರಲ್ಲೂ ತನ್ನ ಅಗ್ರೆಸ್ಸಿವ್ ಇನ್ನಿಂಗ್ಸ್‌ ಆಡಿದ ಪಂತ್ 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು.

ಉತ್ತಮ ಜೊತೆಯಾಟ ಸಾಗುತ್ತಿದ್ದಾಗ ದಕ್ಷಿಣ ಆಫ್ರಿಕಾದ ಬೌಲರ್ ಸಿಸಂದ ಮಗಲಾ ಜೊತೆಯಾಟ ಬ್ರೇಕ್ ಮಾಡುವಲ್ಲಿ ಯಶಸ್ವಿಯಾದ್ರು. 55 ರನ್‌ಗಳಿಸಿದ್ದ ಕೆ.ಎಲ್ ರಾಹುಲ್ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಆದ್ರೆ ತನ್ನ ಸ್ವಾಭಾವಿಕ ಆಕ್ರಮಣಾಕಾರಿ ಆಟ ಪ್ರದರ್ಶಿಸಿದ ರಿಷಭ್ ಪಂತ್ 10 ಬೌಂಡರಿ ಮತ್ತು 2 ಅಮೋಘ ಸಿಕ್ಸರ್‌ಗಳಿಂದ 71 ಎಸೆತಗಳಲ್ಲಿ 85 ರನ್ ಕಲೆಹಾಕಿ ಮಿಂಚಿದ್ರು. ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕದತ್ತ ಹೆಜ್ಜೆ ಹಾಕಿದ್ದ ಪಂತ್‌ಗೆ ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ ತಡೆಯೊಡ್ಡಿದ್ರು.

33ನೇ ಓವರ್‌ನಲ್ಲಿ ಎಡಗೈ ಚೈನಾಮೆನ್ ಬೌಲರ್ ಶಮ್ಸಿ ರಿಷಭ್‌ ಪಂತ್‌ರನ್ನ ತನ್ನ ಬಲೆಯಲ್ಲಿ ಕೆಡವುವಲ್ಲಿ ಯಶಸ್ವಿಯಾದ್ರು. ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿದ ಪಂತ್ ಏಡನ್ ಮಕ್ರಾಮ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದ್ರು.

ಪಂತ್ ಔಟಾದ ಬಳಿಕ ಶ್ರೇಯಸ್ ಅಯ್ಯರ್ 11ರನ್‌ಗೆ ಶಮ್ಸಿಯ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಉತ್ತಮವಾಗಿ ಇನ್ನಿಂಗ್ಸ್‌ ಕಟ್ಟುತ್ತಿದ್ದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 22 ರನ್‌ಗಳಿಸಿದ್ದಾಗ ಆಂಡಿಲೆ ಫೆಹ್ಲುಕ್ವಾಯೊಗೆ ವಿಕೆಟ್ ಒಪ್ಪಿಸಿದ್ರು.

ಇದಾದ ಬಳಿಕ ಏಳನೇ ವಿಕೆಟ್‌ಗೆ 48ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಶಾರ್ದೂಲ್ ಠಾಕೂರ್ ಮತ್ತು ಆರ್. ಅಶ್ವಿನ್ ತಂಡದ ಮೊತ್ತವನ್ನ 280ರ ಗಡಿದಾಟಿಸಿದ್ರು. ಶಾರ್ದೂಲ್ 38 ಎಸೆತಗಳಲ್ಲಿ ಅಜೇಯ 40 ರನ್ ಕಲೆಹಾಕಿದ್ರೆ, ಅಶ್ವಿನ್ 24 ಎಸೆತಗಳಲ್ಲಿ ಅಜೇಯ 25 ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು. ಅಂತಿಮವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 287 ರನ್ ಕಲೆಹಾಕಿ ಸವಾಲಿನ ಮೊತ್ತ ಕಲೆಹಾಕಿದೆ. ದಕ್ಷಿಣ ಆಫ್ರಿಕಾ ಪರ ಶಮ್ಸಿ 2, ಸಿಸಂದ ಮಗಲಾ, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಏಡನ್ ಮಕ್ರಾಮ್ ತಲಾ 1 ವಿಕೆಟ್ ಮಿಂಚಿದ್ದಾರೆ.

ಭಾರತ ಪ್ಲೇಯಿಂಗ್ 11
ಕೆ.ಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಹಾಲ್

ಬೆಂಚ್: ದೀಪಕ್ ಚಹಾರ್, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್, ನವದೀಪ್ ಸೈನಿ, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ರುತುರಾಜ್ ಗಾಯಕ್ವಾಡ್

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್, ಜನ್ನೆಮನ್ ಮಲನ್, ಟೆಂಬಾ ಬವುಮಾ (ಸಿ), ಏಡನ್ ಮಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಸಿಸಂದ ಮಗಲಾ, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ

ಬೆಂಚ್‌: ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಜುಬೇರ್ ಹಮ್ಜಾ, ಕೈಲ್ ವೆರ್ರೆನ್ನೆ, ಜಾರ್ಜ್ ಲಿಂಡೆ, ಮಾರ್ಕೊ ಯಾನ್ಸೆನ್

Story first published: Friday, January 21, 2022, 18:18 [IST]
Other articles published on Jan 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+