ದಕ್ಷಿಣ ಆಫ್ರಿಕಾ 229ರನ್‌ಗಳಿಗೆ ಆಲೌಟ್: 7 ವಿಕೆಟ್ ಉರುಳಿಸಿದ ಶಾರ್ದೂಲ್ ಠಾಕೂರ್

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ದಾಳಿಗೆ ನಲುಗಿದ ಹರಿಣಗಳು 229 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಭಾರತ ನೀಡಿದ 202ರನ್‌ಗಳಿಗೆ ಉತ್ತರವಾಗಿ ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ 27 ರನ್‌ಗಳ ಲೀಡ್‌ನೊಂದಿಗೆ ಮೊದಲ ಇನ್ನಿಂಗ್ಸ್‌ಗೆ ಮುಕ್ತಾಯ ಹಾಡಿದೆ.
ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ ಪರ ನಾಯಕ ಡೀನ್ ಎಲ್ಗರ್ ಅಜೇಯ 11 ರನ್ ಕಲೆಹಾಕಿದ್ದು, ಕೀಗನ್ ಪೀಟರ್ಸನ್ ಅಜೇಯ 14ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಭಾರತದ 202ರನ್ ಬೆನ್ನತ್ತಲು ಇನ್ನೂ 167ರನ್ ಬಾಕಿ ಉಳಿದಿತ್ತು. ಎರಡನೇ ದಿನದಾಟದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಶಿದ ಉಭಯ ಆಟಗಾರರು ಮೊದಲ ಸೆಷನ್‌ನ ಕೊನೆಯವರೆಗೂ ಕಾಡಿದರು.
ಶಾರ್ದೂಲ್ ಠಾಕೂರ್ ದಾಳಿಗೆ ಇಳಿಯುವವರೆಗೂ ದಕ್ಷಿಣ ಆಫ್ರಿಕಾ ವಿಕೆಟ್ ನಷ್ಟವಿಲ್ಲದೆ ರನ್ ಕಲೆಹಾಕುತ್ತಿತ್ತು. ಕೀಗನ್ ಪೀಟರ್ಸನ್ ಅರ್ಧಶತಕ ಗಡಿದಾಟಿದ್ರೆ, ಡೀನ್ ಎಲ್ಗರ್ 120 ಎಸೆತಗಳಲ್ಲಿ 28 ರನ್ ಕಲೆಹಾಕಿದ್ರು. ಹರಿಣಗಳ ಓಟಕ್ಕೆ ಬ್ರೇಕ್ ಹಾಕುವ ಮೂಲಕ ಶಾರ್ದೂಲ್ ಠಾಕೂರ್ ಮೊದಲಿಗೆ ಡೀನ್ ಎಲ್ಗರ್ ವಿಕೆಟ್ ಕಬಳಿಸಿದ್ರು. ಇದ್ರ ಬೆನ್ನಲ್ಲೇ ಕೀಗನ್ ಪೀಟರ್ಸನ್ 62 ರನ್‌ಗಳಿಸಿದ್ದಾಗ ಸ್ಲಿಪ್‌ನಲ್ಲಿದ್ದ ಮಯಾಂಕ್ ಅಗರ್ವಾಲ್‌ಗೆ ಕ್ಯಾಚಿತ್ತು ಶಾರ್ದೂಲ್‌ಗೆ ವಿಕೆಟ್ ಒಪ್ಪಿಸಿದ್ರು.

ಅಬ್ಬರದ ದಾಳಿ ನಡೆಸಿದ ಶಾರ್ದೂಲ್ ಠಾಕೂರ್
ಮೊದಲೆರಡು ವಿಕೆಟ್ ಪಡೆದ ಶಾರ್ದೂಲ್ ವಿಕೆಟ್ ದಾಹ ಕಡಿಮೆಯಾಗಿದ್ದೇ ಇಲ್ಲ. ಪ್ರತಿಯೊಬ್ಬ ಆಟಗಾರನ ವಿಕೆಟ್ ಬೇಟೆಯಾಡಿದ ಶಾರ್ದೂಲ್ ಠಾಕೂರ್ ಒಂದೊಂದೆ ವಿಕೆಟ್ ಪಡೆಯುತ್ತಾ ಹೋದರು. ವ್ಯಾನ್ ಡರ್ ಡುಸ್ಸೆನ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಕೈಲ್ ವೆರ್ರೆನ್ನೆ 21 ರನ್‌ಗಳಿಸಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಟೆಂಬಾ ಬವುಮಾ ಕೂಡ ಅರ್ಧಶತಕ ದಾಖಲಿಸಿ ಠಾಕೂರ್‌ಗೆ ವಿಕೆಟ್ ಒಪ್ಪಿಸಿದ್ರು.
ಇದರ ನಡುವೆ ಶೂನ್ಯಕ್ಕೆ ಕಗಿಸೊ ರಬಾಡಗೆ ಮೊಹಮ್ಮದ್ ಶಮಿ ಪೆವಿಲಿಯನ್ ಹಾದಿ ತೋರಿಸಿದ್ರೆ, 21ರನ್ ಕಲೆಹಾಕಿದ ಕೇಶವ್ ಮಹಾರಾಜ ಬುಮ್ರಾ ಬೌಲಿಂಗ್‌ನಲ್ಲಿ ಬೌಲ್ಡ್ ಆದ್ರು.

229ರನ್‌ಗಳಿಗೆ ಆಲೌಟ್ , 27ರನ್ ಲೀಡ್
ಶಾರ್ದೂಲ್ ಠಾಕೂರ್‌ನ ಅಪ್ರತಿಮ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ 229 ರನ್‌ಗಳಿಗೆ ನೆಲಕಚ್ಚಿದೆ. ಭಾರತದ 202ರನ್‌ಗೆ ಉತ್ತರವಾಗಿ ದೊಡ್ಡ ಮಟ್ಟಿನ ಲೀಡ್ ಪಡೆಯುವಲ್ಲಿ ವಿಫಲಗೊಂಡಿದ್ದು 27 ರನ್‌ಗಳ ಮುನ್ನಡೆ ಕಂಡಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಬೌಲರ್‌ನ ಬೆಸ್ಟ್ ಬೌಲಿಂಗ್
61ರನ್‌ಗೆ 7 ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಬೌಲರ್ ಓರ್ವನ ಬೆಸ್ಟ್ ಬೌಲಿಂಗ್ ಫಿಗರ್ ಇದಾಗಿದೆ. ಇನ್ನಿಂಗ್ಸ್‌ವೊಂದರಲ್ಲಿ ಈ ಹಿಂದೆ ಹರ್ಭಜನ್ ಸಿಂಗ್ ಏಳು ವಿಕೆಟ್ ಕಬಸಿದ್ದರು. ಹರಿಣಗಳ ನಾಡಲ್ಲಿ ಯಾವೆಲ್ಲಾ ಬೌಲರ್‌ಗಳು ಬೆಸ್ಟ್ ಬೌಲಿಂಗ್ ಮಾಡಿದ್ದಾರೆ ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.
ಶಾದೂಲ್ ಠಾಕೂರ್ 7/61 (2021/22)
ಹರ್ಭಜನ್ ಸಿಂಗ್ 7/120 (2010/11)
ಅನಿಲ್ ಕುಂಬ್ಳೆ 6/53 (1992/93)
ಜಾವಗಲ್ ಶ್ರೀನಾಥ್ 6/76 (2001/02)
ರವೀಂದ್ರ ಜಡೇಜಾ 6/138 (2013/14)

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಬೆಸ್ಟ್ ಬೌಲಿಂಗ್ ಫಿಗರ್
ದಕ್ಷಿಣ ಆಫ್ರಿಕಾ ನೆಲದಲ್ಲಷ್ಟೇ ಶಾರ್ದೂಲ್ ಠಾಕೂರ್ ಸಾಧನೆ ಇದಾಗಿಲ್ಲ, ಬದಲಾಗಿ ಇಡೀ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ವೊಂದರಲ್ಲಿ ಭಾರತದ ಪರ ಬೆಸ್ಟ್ ಬೌಲಿಂಗ್ ಫಿಗರ್ ಇದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಬೌಲರ್‌ನ ಬೆಸ್ಟ್ ಬೌಲಿಂಗ್ ಈ ಕೆಳಗಿದೆ.
ಶಾದೂಲ್ ಠಾಕೂರ್ 7/61 (2021/22)
ರವಿಚಂದ್ರನ್ ಅಶ್ವಿನ್ 7/66 (2015/16)
ಹರ್ಭಜನ್ ಸಿಂಗ್ 7/87 (2004/05)
ಹರ್ಭಜನ್ ಸಿಂಗ್ 7/120 (2010/11)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications