Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ 3ನೇ ಟೆಸ್ಟ್ ಪಂದ್ಯ ಆಡಿದ್ರೆ, ಈ ಮೂವರಲ್ಲಿ ಒಬ್ಬರಿಗೆ ಕೊಕ್!

Virat kohli
Team India ಆಟಗಾರರ ಕಳಪೆ ಆಟದಿಂದ ಬೇಸತ್ತ Dravid | Oneindia Kannada

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯು 1-1ರಿಂದ ಸಮಬಲಗೊಂಡ ಪರಿಣಾಮ ಸಾಕಷ್ಟು ಅಂತಿಮ ಪಂದ್ಯ ಕುತೂಹಲ ಹಂತಕ್ಕೆ ಹೋಗಿ ತಲುಪಿದೆ. ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ ಪಂದ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಎದುರಾಗಲಿದ್ದು, ಭಾರತವು ಐತಿಹಾಸಿಕ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅತ್ತ ದಕ್ಷಿಣ ಆಫ್ರಿಕಾ ತವರಿನ ಅಂಗಳದಲ್ಲಿ ಗೆಲುವು ಬಿಟ್ಟುಕೊಡದಿರಲು ತಯಾರಿ ನಡೆಸುತ್ತಿದೆ.

ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತದ ಪರ ನಾಯಕ ವಿರಾಟ್ ಕೊಹ್ಲಿ ಬೆನ್ನು ಮೂಳೆಯ ಸೆಳೆತದಿಂದಾಗಿ ಪಂದ್ಯದಿಂದ ಹೊರಗುಳಿದ್ರು. ಪರಿಣಾಮ ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಮುನ್ನಡೆಸಿದ್ರೂ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಒಂದು ದಿನ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಗೆಲುವು ಸಾಧಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಔಟಾದ ರೀತಿಗೆ ಸಾಕಷ್ಟು ಟೀಕೆ ಎದುರಿಸಿದ್ರು. ಎದುರಾಳಿಯ ಎಂಟು ವಿಕೆಟ್ ಪಡೆಯುವಲ್ಲಿ ಭಾರತದ ಬಲಿಷ್ಠ ಬೌಲಿಂಗ್ ಪಡೆಗೆ ಸಾಧ್ಯವಾಗಲಿಲ್ಲ. ಆದ್ರೀಗ ಅಂತಿಮ ಟೆಸ್ಟ್ ಪಂದ್ಯದತ್ತ ಭಾರತದ ಚಿತ್ತ ನೆಟ್ಟಿದ್ದು, ಪಂದ್ಯಕ್ಕೂ ಮೊದಲು ಯಾರನ್ನ ಹೊರಗಿಡಬೇಕು ಎಂದು ಸವಾಲು ಎದುರಾಗಿದೆ.

ಕೊಹ್ಲಿ ಅಂತಿಮ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ

ಕೊಹ್ಲಿ ಅಂತಿಮ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ

ಟೀಮ್ ಇಂಡಿಯಾ ಪರ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಮರಳಿದ್ರೆ ಯಾರನ್ನ ಹೊರಗಿಡಬೇಕು ಎಂಬ ಗೊಂದಲ ಟೀಂ ಇಂಡಿಯಾಗಿದೆ. ಆರು ಬ್ಯಾಟ್ಸ್‌ಮನ್‌ಗಳು ಮತ್ತು ಐವರು ಬೌಲರ್‌ಗಳ ತಂತ್ರವು ವಿದೇಶಿ ಪಿಚ್‌ಗಳಲ್ಲಿ ಭಾರತಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದ್ರೆ ದಕ್ಷಿಣ ಆಫ್ರಿಕಾ ಪಿಚ್‌ನಲ್ಲಿ ಈ ಕಾರ್ಯತಂತ್ರ ಅಷ್ಟು ಯಶಸ್ವಿಯಾಗಿಲ್ಲ. ಹೀಗಾಗಿ ಕೊಹ್ಲಿ ಪ್ಲೇಯಿಂಗ್‌ 11ನಲ್ಲಿ ತಂಡಕ್ಕೆ ಆಗಮಿಸಿದ್ರೆ, ಯಾರು ಹೊರಗುಳಿಯುತ್ತಾರೆ ಎಂಬ ಗೊಂದಲವಿದೆ.

ಈಗಾಗಲೇ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿ ಚೇತರಿಕೆ ಕುರಿತಾಗಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕೊಹ್ಲಿ ವಾಪಸ್ಸಾದ್ರೆ ಈ ಕೆಳಗಿನ ಮೂವರು ಆಟಗಾರರಲ್ಲಿ ಒಬ್ಬರು ಹೊರಗುಳಿಯಲಿದ್ದಾರೆ.

ಕೊರೊನಾ ವಿಪರೀತವಾದ್ರೆ, ಐಪಿಎಲ್‌ನ ಎಲ್ಲಾ ಪಂದ್ಯಗಳು ಮುಂಬೈನಲ್ಲೇ ನಡೆಸಲು BCCI ಪ್ಲ್ಯಾನ್

ಚೇತೇಶ್ವರ ಪೂಜಾರ

ಚೇತೇಶ್ವರ ಪೂಜಾರ

ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಚೇತೇಶ್ವರ ಪೂಜಾರ ಹೆಣಗಾಡುತ್ತಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರನೇ ವಿಕೆಟ್‌ ಶತಕದ ಜೊತೆಯಾಟವಾಡುವ ಈ ಜೋಡಿ ತಮ್ಮ ಭವಿಷ್ಯದ ಕೆರಿಯನ್ ಉಳಿಸಿಕೊಳ್ಳುವುದರ ಜೊತೆಗೆ ತಂಡಕ್ಕೆ ಪ್ರಮುಖ ರನ್‌ಗಳ ಕೊಡುಗೆ ನೀಡಿದ್ರು. ಚೇತೇಶ್ವರ ಪೂಜಾರ ಸ್ವಾಭಾವಿಕವಾಗಿ ಆಟಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ ಬಾಲ್ ಟು ಬಾಲ್ ರನ್ ಕಲೆಹಾಕಿದ್ರು. 86 ಎಸೆತಗಳಲ್ಲಿ 53 ರನ್‌ ಕಲೆಹಾಕಿದ್ದ ಚೇತೇಶ್ವರ ಪೂಜಾರ ಇನ್ನಿಂಗ್ಸ್‌ನಲ್ಲಿ 10 ಆಕರ್ಷಕ ಬೌಂಡರಿಗಳಿದ್ದವು.

ಆದರೆ ಇದಕ್ಕೂ ಮೊದಲು ಚೇತೇಶ್ವರ್ ಪೂಜಾರ ಕಳೆದ 3 ಇನ್ನಿಂಗ್ಸ್‌ಗಳಲ್ಲಿ 0, 16 ಮತ್ತು 3 ರನ್‌ ಕಲೆಹಾಕುವ ಮೂಲಕ ಭಾರೀ ಟೀಕೆ ಎದುರಿಸಿದ್ರು. ಇನ್ನು ಪೂಜಾರ ಶತಕ ಸಿಡಿಸಿ ವರ್ಷಗಳೇ ಕಳೆದು ಹೋಗಿದೆ. ಕಳೆದ ಮೂರು ವರ್ಷಗಳಲ್ಲಿ ಪೂಜಾರ ಅವರ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಕುಸಿದಿದೆ ಮತ್ತು ಆದ್ದರಿಂದ, ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಕೊಹ್ಲಿಗೆ ಅವಕಾಶ ಕಲ್ಪಿಸಲು ಪೂಜಾರನನ್ನ ಕೈಬಿಡಲು ಭಾರತ ಪರಿಗಣಿಸಬಹುದು.

ಹನುಮ ವಿಹಾರಿ

ಹನುಮ ವಿಹಾರಿ

ಕಳೆದ ಟೆಸ್ಟ್‌ನಲ್ಲಿ ಭಾರತದ ಲೀಡ್ ಅನ್ನು 200ರ ಗಡಿದಾಟಿಸುವಲ್ಲಿ ಹನುಮ ವಿಹಾರಿಯ ತಾಳ್ಮೆಯ ಬ್ಯಾಟಿಂಗ್ ನೆರವಾಯಿತು. ಕೊನೆಯವರೆಗೂ ತಾಳ್ಮೆಯ ಆಟವಾಡಿದ ಹನುಮ ವಿಹಾರಿ ಅಜೇಯ 40 ರನ್ ಕಲೆಹಾಕುವ ಮೂಲಕ ಅಮೂಲ್ಯ ಕೊಡುಗೆ ನೀಡಿದ್ರು.

ಕೊಹ್ಲಿ ಅನುಪಸ್ಥಿತಿಯಲ್ಲಿ, ವಿಹಾರಿ ಅಂತಿಮವಾಗಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ರು. 20 ಮತ್ತು ಅಜೇಯ 40 ರನ್‌ಗಳೊಂದಿಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಯೋಗ್ಯವಾಗಿ ಆಡಿದರು. ವಾಂಡರರ್ಸ್‌ನಲ್ಲಿ ಪರಿಸ್ಥಿತಿಗಳು ನಿಜವಾಗಿಯೂ ಕಠಿಣವಾಗಿದ್ದವು ಆದ್ರೂ ಯಶಸ್ವಿಯಾದರು. ಆದ್ರೂ ಕೂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ವಾಪಸ್ಸಾದ್ರೆ, ಭಾರತೀಯ ಮ್ಯಾನೇಜ್‌ಮೆಂಟ್‌ನ ಕರೆಗೆ ಅನುಗುಣವಾಗಿ, ವಿಹಾರಿ ಮತ್ತೆ ಪ್ಲೇಯಿಂಗ್ 11ನಿಂದ ಸ್ಥಾನ ಕಳೆದುಕೊಳ್ಳಬಹುದು.

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ಕಳೆದೊಂದು ದಶಕದಲ್ಲಿ ವಿಶ್ವದ ಬೆಸ್ಟ್ ಸ್ಪಿನ್ನರ್ ಆಗಿರುವುದರಲ್ಲಿ ಅನುಮಾನವಿಲ್ಲ. 2011ರಿಂದ ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದ ಲೀಡಿಂಗ್ ಸ್ಪಿನ್ನರ್ ಆಗಿದ್ದಾರೆ. ಇದರ ಜೊತೆಗೆ ಭಾರತಕ್ಕೆ ಬ್ಯಾಟಿಂಗ್‌ನಲ್ಲೂ ಹಲವು ಬಾರಿ ನೆರವಾಗಿದ್ದಾರೆ. ಇಷ್ಟಾದರೂ ಅವರು ವಿದೇಶಿ ನೆಲದಲ್ಲಿ ಯಶಸ್ವಿಯಾಗಿರುವುದು ತುಂಬಾ ಕಡಿಮೆ. ಏಷ್ಯಾದ ಹೊರಗೆ ಪ್ರವಾಸ ಮಾಡಿದಾಗಲೆಲ್ಲಾ ಅಶ್ವಿನ್ ವಿಕೆಟ್ ಬರ ಎದುರಿಸಿದ್ದಾರೆ.

ಅಶ್ವಿನ್ ಸರಣಿಯಲ್ಲಿ ಇಲ್ಲಿಯವರೆಗೆ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ವಾಂಡರರ್ಸ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ 46 ರನ್ ಗಳಿಸುವುದರೊಂದಿಗೆ ಬ್ಯಾಟ್‌ನಲ್ಲೂ ಪ್ರಭಾವಶಾಲಿಯಾಗಿದ್ದಾರೆ. ಆದಾಗ್ಯೂ, ಭಾರತವು ತನ್ನ ಹಳೆಯ ಸಿದ್ಧಾಂತವನ್ನು ಬದಲಿಸಿ ನಾಲ್ವರು ವೇಗಿಗಳು ಓರ್ವ ವಿಕೆಟ್ ಕೀಪರ್‌ನೊಂದಿಗೆ ಆಡುವುದರ ಜೊತೆಗೆ ಆರು ಬ್ಯಾಟ್ಸ್‌ಮನ್‌ಗಳನ್ನ ಕಣಕ್ಕಿಳಿಸಲು ಎದುರು ನೋಡುತ್ತಿರಬಹುದು. ಹೀಗೆ ಆಗಿದ್ದೇ ಆದಲ್ಲಿ ಅಶ್ವಿನ್ ಪ್ಲೇಯಿಂಗ್ 11ನಿಂದ ಸ್ಥಾನ ಕಳೆದುಕೊಳ್ಳಲಿದ್ದಾರೆ.

Story first published: Saturday, January 8, 2022, 11:13 [IST]
Other articles published on Jan 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+