For Quick Alerts
ALLOW NOTIFICATIONS  
For Daily Alerts
 

IND vs SA: ಈತ ಮುಂದಿನ ಪಂದ್ಯಗಳಲ್ಲಿ ಭಾರತದ ಗೇಮ್ ಚೇಂಜರ್ ಆಗುತ್ತಾನೆ; ಸುನಿಲ್ ಗವಾಸ್ಕರ್

IND vs SA: Hardik Pandya Will Be Indias Game Changer in the Following Matches Says Sunil Gavaskar

ಭಾನುವಾರದಂದು (ಜೂನ್ 12) ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ಕಮ್ ಬ್ಯಾಕ್ ಮಾಡುವ ಉತ್ಸಾಹದಲ್ಲಿ ಭಾರತ ತಂಡವಿದೆ. ಈ ಮೂಲಕ ಸಾಂದರ್ಭಿಕ ನಾಯಕ ರಿಷಭ್ ಪಂತ್ ಅವರು ಆಟಗಾರರಿಂದ ಸುಧಾರಿತ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.

ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಜೋಡಿ ಅತ್ಯಂತ ನಿರಾಯಾಸವಾಗಿ 212 ರನ್ ಬೃಹತ್ ಮೊತ್ತವನ್ನು ಚೇಸ್ ಮಾಡಿದರು ಮತ್ತು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು.

ಹಾರ್ದಿಕ್ ಪಾಂಡ್ಯರನ್ನು ಶ್ಲಾಘಿಸಿದ ಸುನಿಲ್ ಗವಾಸ್ಕರ್

ಹಾರ್ದಿಕ್ ಪಾಂಡ್ಯರನ್ನು ಶ್ಲಾಘಿಸಿದ ಸುನಿಲ್ ಗವಾಸ್ಕರ್

ಇನ್ನು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಶ್ಲಾಘಿಸಿದ್ದು, ಗುಜರಾತ್ ಟೈಟನ್ಸ್ ನಾಯಕ ಭವಿಷ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ ಸ್ಥಿರ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದರು.

ಜೂನ್ 9ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ ಕುರಿತು ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ಹಿಂತಿರುಗಿದ ಹಾರ್ದಿಕ್ ಪಾಂಡ್ಯ, ಕಳೆದ ಪಂದ್ಯದಲ್ಲಿ 12 ಎಸೆತಗಳಲ್ಲಿ ಔಟಾಗದೆ 31 ರನ್ ಗಳಿಸಿ ಭಾರತ 211/4 ಬೃಹತ್ ಮೊತ್ತ ಗಳಿಸಲು ನೆರವಾದರು.

ಹಾರ್ದಿಕ್ ಬೌಲಿಂಗ್ ಸುತ್ತಲೂ ದೊಡ್ಡ ಅನುಮಾನಗಳಿದ್ದವು

ಹಾರ್ದಿಕ್ ಬೌಲಿಂಗ್ ಸುತ್ತಲೂ ದೊಡ್ಡ ಅನುಮಾನಗಳಿದ್ದವು

ಗಮನಾರ್ಹವಾದ ಅಂಶವೆಂದರೆ, 2021ರ ಟಿ20 ವಿಶ್ವಕಪ್‌ ನಂತರ 28 ವರ್ಷ ವಯಸ್ಸಿನ ಆಲ್‌ರೌಂಡರ್ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ ಮತ್ತು ಅವರ ಬೌಲಿಂಗ್ ಸುತ್ತಲೂ ದೊಡ್ಡ ಅನುಮಾನಗಳಿದ್ದವು. ಆದರೆ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಈ ಐಪಿಎಲ್ ಋತುವನ್ನು ಅದ್ಭುತವಾಗಿ ಮುಗಿಸಿದರು.

ಐಪಿಎಲ್ 2022ರ ಐಪಿಎಲ್ ಪಂದ್ಯಾವಳಿಯಲ್ಲಿ 44.27 ಸರಾಸರಿ ಮತ್ತು 131.26 ಸ್ಟ್ರೈಕ್‌ರೇಟ್‌ನಲ್ಲಿ 487 ರನ್‌ ಗಸಿದರು ಮತ್ತು 7.27ರ ಎಕಾನಮಿ ದರದಲ್ಲಿ ಎಂಟು ವಿಕೆಟ್‌ಗಳನ್ನು ಪಡೆದರು. ಹಾರ್ದಿಕ್ ಪಾಂಡ್ಯ ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಬೌಲಿಂಗ್ ಮಾಡದಿದ್ದರೂ, ಅವರು ತಮ್ಮ ವೃತ್ತಿಜೀವನದ-ಅತ್ಯುತ್ತಮ 17/3 ವಿಕೆಟ್‌ಗಳೊಂದಿಗೆ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಪಾಂಡ್ಯ ಭಾರತದ ಆಟವನ್ನು ಬದಲಾಯಿಸುತ್ತಾರೆ

ಪಾಂಡ್ಯ ಭಾರತದ ಆಟವನ್ನು ಬದಲಾಯಿಸುತ್ತಾರೆ

"ನನಗೆ ಹಾರ್ದಿಕ್ ಪಾಂಡ್ಯ ಭಾರತದ ಆಟವನ್ನು ಬದಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ಬರಲಿರುವ ಮುಂದಿನ ಎಲ್ಲಾ ಪಂದ್ಯಗಳಲ್ಲಿ, ವಿಶ್ವಕಪ್ ಮಾತ್ರವಲ್ಲದೆ ಭಾರತ ಆಡುವ ಪ್ರತಿಯೊಂದು ಪಂದ್ಯಗಳಲ್ಲಿ ಅವರು ನಂ. 5ರಲ್ಲಿ ಬ್ಯಾಟ್ ಮಾಡಬೇಕು. ಮುಂದಿನ ಪಂದ್ಯಗಳಲ್ಲಿ ಭಾರತದ ಗೇಮ್ ಚೇಂಜರ್ ಆಗುತ್ತಾನೆ. ಕೆಲವೊಮ್ಮೆ ನಾನು ಅವನನ್ನು ಹೊಸ ಚೆಂಡಿನೊಂದಿಗೆ ನೋಡಲು ಬಯಸುತ್ತೇನೆ," ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತಿಳಿಸಿದ್ದಾರೆ.

ಪ್ರತಿದಿನ ಬಹಳಷ್ಟು ತ್ಯಾಗಗಳನ್ನು ಮಾಡಿದ್ದೇನೆ

ಪ್ರತಿದಿನ ಬಹಳಷ್ಟು ತ್ಯಾಗಗಳನ್ನು ಮಾಡಿದ್ದೇನೆ

"ನಾನು ತಂಡಕ್ಕೆ ಹಿಂತಿರುಗುವ ಮೊದಲು ನನ್ನ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಲಾಗಿದೆ. ನಾನು ಅನುಸರಿಸಿದ ಪ್ರಕ್ರಿಯೆಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಆರು ತಿಂಗಳ ಅವಧಿಯಲ್ಲಿ ನಾನು ಏನನ್ನು ಅನುಭವಿಸಿದೆ ಎಂಬುದು ಯಾರಿಗೂ ತಿಳಿದಿಲ್ಲ. ನಾನು ದೇಶಕ್ಕಾಗಿ ಆಡುತ್ತಿರುವುದು ಸಂತೋಷದ ಸಂಗತಿ," ಎಂದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದರು.

"ನಾನು ಬೆಳಿಗ್ಗೆ 5 ಗಂಟೆಗೆ ಎದ್ದು ನಾನು ತರಬೇತಿ ಪಡೆದಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಮತ್ತೆ ಸಂಜೆ 4 ಗಂಟೆಗೆ ತರಬೇತಿ ಪಡೆದಿದ್ದೇನೆ. ನಾನು ರಾತ್ರಿ 9 ಗಂಟೆಗೆ ಮಲಗುತ್ತಿದ್ದೆ. ಸುಮಾರು 4 ತಿಂಗಳುಗಳ ಕಾಲ ಪ್ರತಿದಿನ ಬಹಳಷ್ಟು ತ್ಯಾಗಗಳನ್ನು ಮಾಡಿದ್ದೇನೆ. ನಾನು ಐಪಿಎಲ್ ಆಡುವ ಮೊದಲು ನನಗೆ ಯುದ್ಧದಂತಿತ್ತು. ಆದರೆ ನಂತರದ ಫಲಿತಾಂಶಗಳನ್ನು ನೋಡಿದ ಮೇಲೆ ನನಗೆ ತುಂಬಾ ತೃಪ್ತಿಯಾಯಿತು," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.

Story first published: Sunday, June 12, 2022, 17:50 [IST]
Other articles published on Jun 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+