ಸಾಯಿ ಬಾಬಾ ನೀವು ನೋಡುತ್ತಿದ್ದೀರ ಎಂದು ನಂಬಿದ್ದೇನೆ!
ಟೀಂ ಇಂಡಿಯಾ ಸ್ಕ್ವಾಡ್ ಹೊರಬೀಳುತ್ತಿದ್ದಂತೆ ಪೃಥ್ವಿ ಶಾ ಇನ್‌ಸ್ಟಾಗ್ರಾಮ್‌ನಲ್ಲಿ ನಿಗೂಢ ರೀತಿಯಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸಾಯಿ ಬಾಬಾ ಫೋಟೋಗೆ ಶೀರ್ಷಿಕೆ ನೀಡಿದ್ದು, ಸಾಯಿ ಬಾಬಾ ನೀವು ಎಲ್ಲವನ್ನೂ ನೋಡುತ್ತಿದ್ದೀರ ಎಂದು ಭಾವಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಆಯ್ಕೆಗಾರರು ತನ್ನ ನಿರ್ಲಕ್ಷಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸೈಯದ್ ಮುಷ್ತಾಕ್ ಟಿ20 ಟೂರ್ನಿಯಲ್ಲಿ ಪೃಥ್ವಿ ಶಾ 7 ಪಂದ್ಯಗಳಲ್ಲಿ 191 ಸ್ಟ್ರೈಕ್‌ರೇಟ್‌ನಲ್ಲಿ 285ರನ್ ಸಿಡಿಸಿದ್ದಾರೆ.

ನಿಷೇಧಿತ ಪದಾರ್ಥ ಸೇವನೆಯಿಂದ ತಂಡದಿಂದ ಹೊರಬಿದ್ದಿದ್ದ ಮುಂಬೈ ಬ್ಯಾಟರ್
ಪೃಥ್ವಿ ತನ್ನ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಬಹಳ ನಿರೀಕ್ಷೆಗಳೊಂದಿಗೆ ಪ್ರಾರಂಭಿಸಿದರೂ ನಿಷೇಧಿತ ಪದಾರ್ಥಗಳ ಸೇವನೆಯಿಂದಾಗಿ ದೀರ್ಘಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿಯಬೇಕಾಯಿತು. ಅಂದಿನಿಂದ ಈ ಯುವ ಪ್ರತಿಭಾವಂತ ಕ್ರಿಕೆಟಿಗ ಇಲ್ಲಿಯವರೆಗೆ ಭಾರತ ತಂಡದಿಂದ ಹೊರಗುಳಿದಿದ್ದಾರೆ.
ಪೃಥ್ವಿ ಭಾರತ ಪರ ಐದು ಟೆಸ್ಟ್ ಪಂದ್ಯಗಳು, ಆರು ಏಕದಿನ ಪಂದ್ಯಗಳು ಮತ್ತು ಕೇವಲ ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಪೃಥ್ವಿ ಅವರ ಗರಿಷ್ಠ ಸ್ಕೋರ್ 49. ಈ ಮುಂಬೈ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ನೂರು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕೈಕ ಟಿ20 ಪಂದ್ಯದಲ್ಲಿ ಪೃಥ್ವಿ ಶಾ 0 ರನ್‌ಗೆ ಔಟಾದರು.
ಟಿ20 ವಿಶ್ವಕಪ್: ಬಲಿಷ್ಠ ತಂಡಗಳಿಗೆ ಓಪನರ್‌ಗಳೇ ವಿಲನ್, KL ರಾಹುಲ್‌ನಿಂದ ಡೇವಿಡ್ ವಾರ್ನರ್‌ವರೆಗೆ

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್
ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ), ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಭುನ್ನೇಶ್ವರ್ ಕುಮಾರ್ ಪಟೇಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಇಶಾನ್ ಕಿಶನ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜಾ , ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಶಿಖರ್ ಧವನ್, ರಿಷಭ್ ಪಂತ್
ಧೋನಿ ಜಗತ್ತಿಗೆ ಹೇಳಿಕೊಟ್ಟ ತಂತ್ರ ಭಾರತಕ್ಕೆ ತಿರುಗುಬಾಣವಾಗಿದೆ! ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್


Click it and Unblock the Notifications












