ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಬಲಿಷ್ಠ ತಂಡಗಳಿಗೆ ಓಪನರ್‌ಗಳೇ ವಿಲನ್, KL ರಾಹುಲ್‌ನಿಂದ ಡೇವಿಡ್ ವಾರ್ನರ್‌ವರೆಗೆ

KL Rahul and David warner

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ ಸೂಪರ್ 12 ಫೈಟ್‌ನಲ್ಲಿ ಬಲಿಷ್ಠ ತಂಡಗಳಿಗೆ ಭಾರೀ ತಲೆನೋವಾಗಿರುವ ವಿಚಾರ ಒಂದು ಮಳೆಯಾದ್ರೆ, ಮತ್ತೊಂದು ತಂಡದ ಓಪನರ್ಸ್‌. ಮಳೆಯು ಪಾಯಿಂಟ್ಸ್ ಟೇಬಲ್‌ ಮೇಲೆ ಪರಿಣಾಮ ಬೀರುತ್ತಿದ್ರೆ, ಬಲಿಷ್ಠ ತಂಡಗಳ ಓಪನರ್ಸ್ ಕೈ ಕೊಡುವ ಮೂಲಕ ತಂಡದ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಬೀರಿದ್ದಾರೆ.

ಇದು ಕೇವಲ ಒಂದು ತಂಡದ ವಿಚಾರವಾಗಿಲ್ಲ. ಗ್ರೂಪ್‌ 1ರಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಒಂದೆಡೆಯಾದ್ರೆ, ಗ್ರೂಪ್ 2ರಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ತಂಡಗಳ ಓಪನರ್ಸ್‌ ಟಿ20 ವಿಶ್ವಕಪ್‌ನಲ್ಲಿ ಸತತ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಶ್ಚರ್ಯಕರ ವಿಚಾರ ಏನಂದ್ರೆ ಈ ಎಲ್ಲಾ ಬ್ಯಾಟರ್‌ಗಳು ಆಯಾ ತಂಡದ ಶ್ರೇಷ್ಟ ಓಪನರ್‌ಗಳಾಗಿದ್ರೂ, ಅತ್ಯಂತ ಪ್ರಮುಖ ಟೂರ್ನಿಯಲ್ಲೇ ತಂಡಕ್ಕೆ ಕೈ ಕೊಟ್ಟಿದ್ದಾರೆ. ಆ ಆಟಗಾರರು ಯಾರು? ಇಲ್ಲಿಯವರೆಗೆ ಎಷ್ಟು ಸ್ಕೋರ್ ಮಾಡಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

ಟೀಂ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ಐಸಿಸಿ ಟೂರ್ನಿಯಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಸಾಕಷ್ಟು ಪೈಪೋಟಿ ಹೊಂದಿರುವ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕನ್ನಡಿಗ ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ರನ್‌ಗಳಿಸಲು ವಿಫಲರಾಗಿದ್ದಾರೆ.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಸಿಡಿಸಿ ಖಾತೆ ತೆರೆದಿದ್ದ ಕೆ.ಎಲ್ ರಾಹುಲ್ ಬಹುಬೇಗನೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ರಾಹುಲ್ 14 ಎಸೆತಗಳಲ್ಲಿ 9ರನ್‌ಗೆ ಔಟಾಗುವ ಮೂಲಕ ಮೂರನೇ ಪಂದ್ಯದಲ್ಲಿ ವಿಫಲಗೊಂಡರು.

ಇದಕ್ಕೂ ಮುನ್ನ ರಾಹುಲ್ ಪಾಕಿಸ್ತಾನ ವಿರುದ್ಧ 8 ಎಸೆತಗಳಲ್ಲಿ 4 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರೆ, ನೆದರ್ಲ್ಯಾಂಡ್ಸ್ ವಿರುದ್ಧ 12 ಎಸೆತಗಳಲ್ಲಿ ಕೇವಲ 9ರನ್ ಕಲೆಹಾಕಿ ತಮ್ಮ ಇನ್ನಿಂಗ್ಸ್ ಮುಗಿಸಿದ್ರು. ರಾಹುಲ್ ಓಪನಿಂಗ್ ಆಟವು ಕಳಪೆಯಾದ ಪರಿಣಾಮ ಟೀಂ ಇಂಡಿಯಾ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದೆ.

ಬಾಬರ್ ಅಜಮ್

ಬಾಬರ್ ಅಜಮ್

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕಳಪೆ ಫಾರ್ಮ್ ಮುಂದುವರಿದಿದ್ದು, ನೆದರ್ಲ್ಯಾಂಡ್ಸ್ ವಿರುದ್ಧ ಕೇವಲ 4 ರನ್‌ಗಳಿಸಿ ರನೌಟ್‌ಗೆ ಬಲಿಯಾಗಿದ್ದಾರೆ.

ಪರ್ತ್‌ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್‌ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೆದರ್ಲ್ಯಾಂಡ್ಸ್ ತಂಡವು ಪಾಕ್ ಬೌಲಿಂಗ್ ದಾಳಿಗೆ ತತ್ತರಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 91ರನ್ ಕಲೆಹಾಕಿತು. ಪಾಕಿಸ್ತಾನ ತಂಡಕ್ಕೆ 92ರನ್‌ಗಳ ಸುಲಭ ಗುರಿ ನೀಡಿತು.

ಆದ್ರೆ ಗುರಿ ಬೆನ್ನತ್ತುವ ವೇಳೆಯಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಪಾಕಿಸ್ತಾನ ವಿಫಲಗೊಂಡಿದೆ. ಓಪನಿಂಗ್ ಬ್ಯಾಟರ್ ಹಾಗೂ ಪಾಕ್ ತಂಡದ ನಾಯಕ ಬಾಬರ್ ಅಜಮ್ 4 ರನ್‌ಗಳಿಸಿದ್ದ ವೇಳೆಯಲ್ಲಿ ಅನಾವಶ್ಯಕ ರನ್‌ ಕದಿಯಲು ಹೋಗಿ ರನೌಟ್‌ಗೆ ಬಲಿಯಾದ್ರು. ವ್ಯಾನ್ ಡೆರ್ ಮರ್ವ್ ಚುರುಕು ಫೀಲ್ಡಿಂಗ್‌ನಿಂದಾಗಿ ಬಾಬರ್ ಅಜಮ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಪ್ರಸ್ತುತ ವಿಶ್ವಕಪ್‌ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಕೇವಲ 8 ರನ್ ದಾಖಲಿಸುವ ಮೂಲಕ ರನ್‌ಗಳಿಸುವಲ್ಲಿ ವಿಫಲಗೊಂಡಿದ್ದಾರೆ. ಈ ಮೂಲಕ ಈಗಾಗಲೇ ಮೊದಲೆರಡು ಪಂದ್ಯ ಸೋಲಿನ ಜೊತೆಗೆ ನಾಯಕನ ಕಳಪೆ ಫಾರ್ಮ್ ಕೂಡ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಗೆದ್ದ ಬಳಿಕ ಪಾಯಿಂಟ್ಸ್‌ ಟೇಬಲ್ ಅಪ್‌ಡೇಟ್

ಟೆಂಬಾ ಬವುಮಾ

ಟೆಂಬಾ ಬವುಮಾ

ಟಿ20 ಫಾರ್ಮೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಕಳಪೆ ಫಾರ್ಮ್ ಮುಂದುವರಿಸಿದ್ದು, ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 10ರನ್‌ಗೆ ಔಟಾಗುವ ಮೂಲಕ ತಮ್ಮ ಕಳಪೆ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.

ಇದಕ್ಕೂ ಮುನ್ನ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಸಿಂಗಲ್ ಡಿಜಿಟ್‌ಗೆ ಬವುಮಾ ಔಟಾಗಿದ್ದು, ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ. ಸಿಡ್ನಿಯಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬವುಮಾ 6 ಎಸೆತಗಳಲ್ಲಿ 2ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಟಸ್ಕಿನ್ ಅಹ್ಮದ್ ಬೌಲಿಂಗ್‌ನಲ್ಲಿ ನುರುಲ್ ಹಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಟೆಂಬಾ ಬವುಮಾ ಎಷ್ಟರ ಮಟ್ಟಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿ ಅವರ ಕಳೆದ ಎಂಟು ಇನ್ನಿಂಗ್ಸ್‌ ನೋಡಬಹುದಾಗಿದೆ. ಟೆಂಬಾ ಕಳೆದ ಎಂಟು ಇನ್ನಿಂಗ್ಸ್‌ನಲ್ಲಿ 8(10), 8(11), 0(4), 0(7), 3(8), 2(2), 2(6), 10(15)ರನ್ ಗಳಿಸಿದ್ದು ಅವರ ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ.

ಟಿ20 ವಿಶ್ವಕಪ್: ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಾದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತಕಾರಿ ಸುದ್ದಿ!

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಪರ ಓಪನರ್ ಡೇವಿಡ್ ವಾರ್ನರ್ ಕೂಡ ಆಡಿರುವ 4 ಪಂದ್ಯಗಳಲ್ಲಿ ತಂಡಕ್ಕೆ ನೆರವಾಗುವಲ್ಲಿ ವಿಫಲಗೊಂಡಿದ್ದಾರೆ. ಸೋಮವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಾರ್ನರ್ 7 ಎಸೆತಗಳಲ್ಲಿ ಕೇವಲ 3ರನ್ ಕಲೆಹಾಕಿ ಔಟಾದರು.

ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ 6 ಎಸೆತಗಳಲ್ಲಿ 5ರನ್, ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 10 ಎಸೆತಗಳಲ್ಲಿ 11ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋದ ಪರಿಣಾಮ ಈ ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಆಡಿರಲಿಲ್ಲ.

ಜಾಸ್ ಬಟ್ಲರ್

ಜಾಸ್ ಬಟ್ಲರ್

ಐಪಿಎಲ್ 2022ರ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಶತಕದ ಮೇಲೆ ಶತಕ ಸಿಡಿಸಿ ಅಬ್ಬರಿಸಿದ್ದ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಟಿ20 ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರೆಸುತ್ತಾರೆ ಎಂದೇ ಯೋಚಿಸಲಾಗಿತ್ತು. ಆದ್ರೆ ಜಾಸ್ ಬಟ್ಲರ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ನೆರವಾಗದೆ ಕಡಿಮೆ ರನ್‌ಗೆ ಔಟಾಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ 18 ಎಸೆತಗಳಲ್ಲಿ 18ರನ್ ಕಲೆಹಾಕಿ ಔಟಾಗಿದ್ದ ಬಟ್ಲರ್, ಐರ್ಲೆಂಡ್ ವಿರುದ್ಧ ಎರಡು ಎಸೆತಗಳನ್ನ ಎದುರಿಸಿ ಶೂನ್ಯಕ್ಕೆ ಔಟಾಗುವ ಮೂಲಕ ತಂಡದ ಸೋಲಿಗೆ ಮುನ್ನುಡಿ ಬರೆದಿದ್ದರು. ಈ ಪಂದ್ಯದಲ್ಲಿ ಐರ್ಲೆಂಡ್ ಡೆಕ್ವರ್ತ್‌ ಲೂಹಿಸ್ ನಿಯಮದಡಿಯಲ್ಲಿ 5ರನ್‌ಗಳಿಂದ ಗೆದ್ದು ಬೀಗಿತು.

ಇನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪಂದ್ಯವು ಒಂದು ಎಸೆತ ಕಾಣದೆ ಮಳೆಯಲ್ಲಿ ಕೊಚ್ಚಿ ಹೋಯಿತು. ಇಂಗ್ಲೆಂಡ್ ಮುಂದಿನ ಪಂದ್ಯದಲ್ಲಿ ಟೇಬಲ್ ಟಾಪರ್ ನ್ಯೂಜಿಲೆಂಡ್ ತಂಡವನ್ನು ಮಂಗಳವಾರ (ನ.1) ಎದುರಿಸಲಿದೆ.

ಒಟ್ಟಿನಲ್ಲಿ ಐಸಿಸಿ ಟೂರ್ನಿಯ ಬಲಿಷ್ಠ ತಂಡಗಳ ಓಪನರ್‌ಗಳು ತಂಡಕ್ಕೆ ಆಧಾರವಾಗುವಲ್ಲಿ ವಿಫಲಗೊಂಡಿದ್ದು, ಮುಂದಿನ ಪಂದ್ಯದಲ್ಲಾದ್ರೂ ಫಾರ್ಮ್‌ಗೆ ಮರಳುತ್ತಾರ ಎಂದು ಕಾದು ನೋಡಬೇಕಿದೆ.

Story first published: Monday, October 31, 2022, 18:56 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X