For Quick Alerts
ALLOW NOTIFICATIONS  
For Daily Alerts
 

IND vs SA: 'ಸೂರ್ಯ'ಕುಮಾರನ ಪ್ರಕಾಶಮಾನಕ್ಕೆ ನೆಟ್ಟಿಗರು ಉಘೇ ಉಘೇ!

IND vs SA: Suryakumar Yadav Was Praised By Netizens For His Good Performance Against South Africa

ಭಾನುವಾರ ರಾತ್ರಿ (ಅಕ್ಟೋಬರ್ 30) ಪರ್ತ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2022ರ ಸೂಪರ್ 12ರ ಹಣಾಹಣಿಯಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಇನ್ನಿಂಗ್ಸ್ ಆಡಿ ಭಾರತ ತಂಡದ ಮಾನ ಕಾಪಾಡಿದರು.

ಇತರ ಭಾರತೀಯ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸುತ್ತಿದ್ದರು ಮತ್ತು ರನ್ ಗಳಿಸಲು ಹೆಣಗಾಡುತ್ತಿದ್ದ ಸಂದರ್ಭವದು. ನಾಯಕ ರೋಹಿತ್ ಶರ್ಮಾರಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ಎಲ್ಲರೂ ಪರ್ತ್ ಟ್ರ್ಯಾಕ್‌ನ ಬೌನ್ಸ್ ಮತ್ತು ವೇಗದ ಬೌಲಿಂಗ್ ದಾಳಿಗೆ ಸಿಲುಕಿ ವಿಫಲರಾದರು.

ಈ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದಾಗ ಭಾರತ ತಂಡವು ಸಂಕಷ್ಟದಲ್ಲಿತ್ತು. ಆದರೆ ಅವರು ಏಕಾಂಗಿಯಾಗಿ ಭಾರತವನ್ನು 20 ಓವರ್‌ಗಳಲ್ಲಿ 133/9 ಸುರಕ್ಷಿತ ಮೊತ್ತಕ್ಕೆ ಕೊಂಡೊಯ್ದರು. ಒಂದು ಹಂತದಲ್ಲಿ ಭಾರತ 49 ರನ್‌ಗೆ 5 ವಿಕೆಟ್ ಕಳೆದುಕೊಂಡು 100 ರನ್ ತಲುಪುವುದು ಕಷ್ಟವೆನಿಸಿತ್ತು. ಆಗ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಸೂರ್ಯಕುಮಾರ್ ಯಾದವ್ ಭಾರತ ಗಳಿಸಿದ ಒಟ್ಟು 133 ರನ್‌ಗಳಲ್ಲಿ ಅವರು 68 ರನ್ ಗಳಿಸಿದರು, ಇದು ಒಟ್ಟು ರನ್‌ಗಳ ಅರ್ಧಕ್ಕಿಂತ ಹೆಚ್ಚು.

ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬ್ಯಾಟರ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಹೊಗಳಿದ್ದಾರೆ. ಟ್ವಿಟ್ಟರ್‌ನಲ್ಲಿಯೂ ಸೂರ್ಯಕುಮಾರ್ ಅವರನ್ನು ಪ್ರಶಂಸಿಸಲಾಯಿತು. ಇದರಲ್ಲಿ ಇರ್ಫಾನ್ ಪಠಾಣ್, ಜಿಮ್ಮಿ ನೀಶನ್ ಸೇರಿದಂತೆ ಇತರ ಮಾಜಿ ಕ್ರಿಕೆಟಿಗರು ಅಭಿಮಾನಿಗಳೊಂದಿಗೆ ಅಭಿನಂದಿಸಿದರು.

ಸೂರ್ಯಕುಮಾರ್ ಯಾದವ್ ಅವರ ಇನ್ನಿಂಗ್ಸ್‌ನಲ್ಲಿ 6 ​​ಬೌಂಡರಿ ಹಾಗೂ 3 ಸಿಕ್ಸರ್‌ಗಳು ಒಳಗೊಂಡಿದ್ದವು. ಟೀಮ್ ಇಂಡಿಯಾ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ತತ್ತರಿಸುತ್ತಿರುವಾಗ ಇದು ಒಂದು ವಿಶೇಷವಾದ ಇನ್ನಿಂಗ್ಸ್ ಆಗಿತ್ತು. ಪರ್ತ್‌ನ ವಿಕೆಟ್‌ನಲ್ಲಿ ವೇಗ ಮತ್ತು ಬೌನ್ಸ್ ಇದ್ದ ಕಾರಣ ಎಲ್ಲಾ ಬ್ಯಾಟರ್‌ಗಳು ವಿಫಲವಾದಾಗ, ಸೂರ್ಯಕುಮಾರ್ ಅದೇ ಪಿಚ್‌ನಲ್ಲಿ ಆ ಹೊಡೆತಗಳನ್ನು ನೋಡುವುದು ಸೊಗಸಾಗಿತ್ತು.

ಇದಕ್ಕೂ ಮೊದಲು, ಭಾರತ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಅವರ ನಿರ್ಧಾರದಿಂದ ಅಭಿಮಾನಿಗಳು ಆಶ್ಚರ್ಯಪಟ್ಟರು ಮತ್ತು ಸೂರ್ಯಕುಮಾರ್ ಹೊರತುಪಡಿಸಿ ಯಾವ ಬ್ಯಾಟ್ಸ್‌ಮನ್‌ಗಳೂ ಸಮರ್ಥಿಸಿಕೊಳ್ಳಲಿಲ್ಲ. ಭಾರತವು ತನ್ನ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಅಕ್ಷರ್ ಪಟೇಲ್ ಬದಲಿಗೆ ದೀಪಕ್ ಹೂಡಾಗೆ ಅವಕಾಶ ನೀಡಲಾಯಿತು. ಆದರೆ ಅವರು ಯಾವುದೇ ರನ್ ಕಲೆಹಾಕದೆ ಸೊನ್ನೆ ಸುತ್ತಿದರು.

IND vs SA: Suryakumar Yadav Was Praised By Netizens For His Good Performance Against South Africa

ಕೆಎಲ್ ರಾಹುಲ್ ಆಡಿದ 14 ಎಸೆತಗಳಲ್ಲಿ ಏಕೈಕ ಸಿಕ್ಸರ್ ಒಳಗೊಂಡಂತೆ ಕೇವಲ 9 ರನ್ ಗಳಿಸಿ ಟೂರ್ನಿಯಲ್ಲಿ ಮತ್ತೊಂದು ಕೆಟ್ಟ ದಿನವನ್ನು ಹೊಂದಿದರು. ಈ ಸಮಯದಲ್ಲಿ ಕೆಎಲ್ ರಾಹುಲ್ ತುಂಬಾ ಕೆಟ್ಟ ಫಾರ್ಮ್‌ನಲ್ಲಿದ್ದಾರೆ, ಅವರು ಈ ಹಿಂದೆ ಕ್ರಮವಾಗಿ ಪಾಕಿಸ್ತಾನ ಮತ್ತು ಜಿಂಬಾಬ್ವೆ ವಿರುದ್ಧ ಕ್ರಮವಾಗಿ ಕಡಿಮೆ ಸ್ಕೋರ್‌ಗಳಿಗೆ ಔಟಾಗಿದ್ದರು. ಮುಂದಿನ ಪಂದ್ಯಗಳಲ್ಲಿ ಅವರನ್ನು ಕೈಬಿಡುವಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

Story first published: Sunday, October 30, 2022, 20:02 [IST]
Other articles published on Oct 30, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+