IND vs SA 2022: ರಾಹುಲ್ ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿದ್ದಾರೆ, ಸುಮ್ಮನೆ ಟೀಕಿಸಬೇಡಿ ಎಂದ ಆಕಾಶ್ ಚೋಪ್ರಾ

ಸೆಪ್ಟೆಂಬರ್ 28ರಂದು ಬುಧವಾರ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅರ್ಧಶತಕ ಗಳಿಸಿದರು. ಅಜೇಯರಾಗಿ 51 ರನ್ ಗಳಿಸಿದ ಕೆಎಲ್ ರಾಹುಲ್ ಭಾರತ ತಂಡದ ಗೆಲುವಿಗೆ ಕಾರಣರಾದರು.
ಅರ್ಧಶತಕ ಗಳಿಸಿದ ಹೊರತಾಗಿಯೂ ಕೆಎಲ್ ರಾಹುಲ್ ಟೀಕೆಗಳನ್ನು ಎದುರಿಸಬೇಕಾಯಿತು. 51 ರನ್ ಗಳಿಸಲು ಕೆಎಲ್ ರಾಹುಲ್ 56 ಎಸೆತಗಳನ್ನು ಎದುರಿಸಿದರು. ಅವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಟೀಕೆ ಮಾಡಿದ್ದಾರೆ.
ಅಭಿಮಾನಿಗಳು ರಾಹುಲ್ ಅವರ ವರ್ತನೆಗೆ ಸಂತಸಗೊಂಡಿರಲಿಲ್ಲ. ವಿಕೆಟ್‌ಕೀಪರ್ ಬ್ಯಾಟರ್ ಪವರ್‌ಪ್ಲೇನಲ್ಲಿ 26 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿದ್ದರು. ಕೆಎಲ್ ರಾಹುಲ್ ಆರಂಭದಲ್ಲಿ ರನ್ ಗಳಿಸಲು ಪರದಾಡಿದರು ಕೂಡ ನಂತರ ಉತ್ತಮವಾಗಿ ಆಡಿದರು, ಸೂರ್ಯಕುಮಾರ್ ಯಾದವ್ ಜೊತೆ ಉತ್ತಮ ಜೊತೆಯಾಟ ಆಡಿದ ರಾಹುಲ್ ಕೊನೆಯವರೆಗೂ ಅಜೇಯರಾಗಿ ಉಳಿದರು. ಭಾರತ ತಂಡದ ಗೆಲುವು ಖಚಿತಪಡಿಸಿದರು.
ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಕೆಎಲ್ ರಾಹುಲ್ ಬೆಂಬಲಕ್ಕೆ ಬಂದಿದ್ದು, ಜನರು ಅದ್ಯಾಕೆ ಟೀಕೆ ಮಾಡ್ತಿದ್ದಾರೋ ಅರ್ಥವಾಗ್ತಿಲ್ಲ ಎಂದು ಹೇಳಿದ್ದಾರೆ.

ಕಠಿಣ ಸಂದರ್ಭಗಳಲ್ಲಿ ರಾಹುಲ್ ಆಡಿದ್ದು ಸರಿಯಾಗಿದೆ
ಪರಿಸ್ಥಿತಿಯನ್ನು ನಿರ್ಣಯಿಸುವ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುವ ಮೂಲಕ ರಾಹುಲ್ ಆದರ್ಶಪ್ರಾಯವಾದ ಕೆಲಸವನ್ನು ಮಾಡಿದ್ದಾರೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
"ರಾಹುಲ್ ಅವರ ಬ್ಯಾಟಿಂಗ್‌ಗಾಗಿ ಜನರು ಟೀಕಿಸುತ್ತಿದ್ದಾರೆ, ಏಕೆಂದು ನನಗೆ ಅರ್ಥವಾಗುತ್ತಿಲ್ಲ. ನೀವು ಕೇವಲ 107 ರನ್‌ಗಳನ್ನು ಚೇಸ್ ಮಾಡುತ್ತಿರುವಾಗ ಮತ್ತು ಪರಿಸ್ಥಿತಿಗಳು ಕಷ್ಟಕರವಾಗಿದ್ದರೆ, ಬ್ಯಾಟರ್ ಏಕೆ ಹೊಡೆಯಲು ನೋಡುತ್ತಾನೆ? ಇಂತಹ ಸಂದರ್ಭಗಳಲ್ಲಿ ವಿಕೆಟ್ ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
Ind Vs SA T20: ಟಾಸ್ ಗೆದ್ದಿದ್ದು ನಮಗೆ ತುಂಬಾ ಪ್ರಯೋಜನಕಾರಿಯಾಯಿತು ಎಂದ ಅರ್ಶ್‌ದೀಪ್ ಸಿಂಗ್

ಔಟ್ ಆಗಿದ್ದರೆ ಅದು ಬೇಜವಾಬ್ದಾರಿಯಾಗುತ್ತಿತ್ತು
ಆರಂಭದಲ್ಲೇ ಕೆಎಲ್ ರಾಹುಲ್ ವೇಗವಾಗಿ ರನ್ ಗಳಿಸಲು ಆರಂಭಿಸಿದ್ದರೆ, ಅವರು ಸೆಟ್ಲ್ ಆಗುವ ಬದಲು ಬೇಗನೆ ಔಟಾಗಿದ್ದರೆ ಅದು ಬೇಜವಾಬ್ದಾರಿಯಾಗುತ್ತಿತ್ತು. ರಾಹುಲ್ ನಿಜವಾಗಿಯೂ ಚೆನ್ನಾಗಿ ಬ್ಯಾಟ್ ಮಾಡಿದರು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಪರಿಸ್ಥಿತಿಗಳನ್ನು ಗೌರವಿಸಿ ಅದಕ್ಕೆ ತಕ್ಕಂತೆ ರಾಹುಲ್ ಜವಾಬ್ದಾರಿಯುತವಾಗಿ ಆಡಿದ್ದಾರೆ. ಆದ್ದರಿಂದ ಅವರನ್ನು ಟೀಕಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲಾ ಬ್ಯಾಟರ್ ಗಳು ರನ್ ಗಳಿಸಲು ವಿಫಲರಾಗಿದ್ದಾರೆ. ಅವರಿಬ್ಬರೂ ಮಾತ್ರ ಉತ್ತಮವಾಗಿ ಆಡಿದರು ಎಂದು ಹೇಳಿದರು.

ಉತ್ತಮ ಜೊತೆಯಾಟ ಆಡಿದ ರಾಹುಲ್-ಸೂರ್ಯಕುಮಾರ್
ಒಂದು ಬದಿಯಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿಗಳೊಂದಿಗೆ ರನ್ ಗಳಿಸುತ್ತಿರುವಾಗ. ರಾಹುಲ್ ಯಾಂಕರ್ ಪಾತ್ರವನ್ನು ನಿರ್ವಹಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ ಅಜೇಯ 93 ರನ್‌ಗಳ ಜೊತೆಯಾಟ ಆಡಿದರು. ಭಾರತ ಸರಣಿಯ ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿತು. ರಾಹುಲ್ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು, ಜೊತೆಗೆ 19ನೇ ಅರ್ಧಶತಕವನ್ನು ಪೂರೈಸಿದರು.
ಆರಂಭದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ರಾಹುಲ್ ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಿದರು.

ಅತ್ಯುತ್ತಮ ಆಟವಾಡಿದ ಸೂರ್ಯಕುಮಾರ್
ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಆಗಮಿಸಿದಾಗ ಭಾರತ ಏಳನೇ ಓವರ್‌ನಲ್ಲಿ 17-2 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಇನ್-ಫಾರ್ಮ್ ಬ್ಯಾಟರ್ ತ್ವರಿತವಾಗಿ ರನ್ ಗಳಿಸಲು ಆರಂಭಿಸಿದರು. ಸತತವಾಗಿ ಎರಡು ಸಿಕ್ಸರ್ ಬಾರಿಸುವ ಮೂಲಕ ಆತಂಕವನ್ನು ದೂರ ಮಾಡಿದರು.
ಸಾಕಷ್ಟು ಸೀಮ್ ಚಲನೆ ಮತ್ತು ಬೌನ್ಸ್ ಅನ್ನು ಹೊಂದಿರುವ ಹಸಿರು ಪಿಚ್‌ನಲ್ಲಿ, ಸೂರ್ಯಕುಮಾರ್ ಸುಲಭವಾಗಿ ಬ್ಯಾಟಿಂಗ್ ಮಾಡಿದರು, ಕೇವಲ 33 ಎಸೆತಗಳಲ್ಲಿ 8ನೇ ಅರ್ಧಶತಕವನ್ನು ಪೂರೈಸಿದರು.
"ಸೂರ್ಯಕುಮಾರ್ ಯಾದವ್ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅವರು ಸಂಪೂರ್ಣವಾಗಿ ವಿಭಿನ್ನ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರ ವಿಧಾನವೆಂದರೆ ಪ್ರತಿದಾಳಿ ಮಾಡುವುದು; ಅವರು ಸುತ್ತಲೂ ಕಾಯಲು ಹೋಗುವುದಿಲ್ಲ. ಅವರು ಬಯಸಿದ ಬೌಂಡರಿಗಳನ್ನು ಗಳಿಸಿದರೆ ಬೌಲರ್‌ಗಳು ಕೆಳಗಿಳಿಯುತ್ತಾರೆ ಎಂಬುದು ಅವರ ನಂಬಿಕೆ." ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಭಾನುವಾರ (ಅಕ್ಟೋಬರ್ 2) ಗುವಾಹಟಿಯಲ್ಲಿ ಸರಣಿಯ ಎರಡನೇ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications