Ind Vs SA T20: ಟಾಸ್‌ ಗೆದ್ದಿದ್ದು ನಮಗೆ ತುಂಬಾ ಪ್ರಯೋಜನಕಾರಿಯಾಯಿತು ಎಂದ ಅರ್ಶ್‌ದೀಪ್ ಸಿಂಗ್

ತಿರುವನಂತಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಭಾರತದ ವೇಗದ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರಿಸಿ ಹೋಯಿತು, ಅರ್ಶ್‌ದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ಮಾರಕ ಬೌಲಿಂಗ್ ದಾಳಿ ನಡೆಸಿದರು.

Ind vs SA 1st T20I: ಬೌಲಿಂಗ್ ವೇಳೆ ಅರ್ಷ್‌ದೀಪ್‌ಗೆ ಅಂಪೈರ್ ವಾರ್ನಿಂಗ್‌Ind vs SA 1st T20I: ಬೌಲಿಂಗ್ ವೇಳೆ ಅರ್ಷ್‌ದೀಪ್‌ಗೆ ಅಂಪೈರ್ ವಾರ್ನಿಂಗ್‌

ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿರುವ ಅರ್ಶ್‌ದೀಪ್ ಸಿಂಗ್, ತಮ್ಮ ಸ್ವಿಂಗ್‌ ಬೌಲಿಂಗ್ ಬಗ್ಗೆ ಮಾತನಾಡಿದ್ದಾರೆ. ಪಂದ್ಯಕ್ಕೂ ಮುನ್ನ ಪಿಚ್ ಹೇಗಿದೆ ಎನ್ನುವುದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಅರ್ಶ್‌ದೀಪ್ ಸಿಂಗ್ 4 ಓವರ್ ಗಳಲ್ಲಿ 32 ರನ್ ನೀಡಿ 3 ವಿಕೆಟ್‌ಗಳನ್ನು ಪಡೆಯುವ ಮೂಲ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಪಡೆದರು. ಎಡಗೈ ವೇಗಿ ಅರ್ಶ್‌ದೀಪ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿ ಕಾಕ್, ರಿಲೀ ರೊಸೊವ್ ಮತ್ತು ಡೇವಿಡ್ ಮಿಲ್ಲರ್ ವಿಕೆಟ್‌ಗಳನ್ನು ಪಡೆದರು ಮತ್ತು ಚಹರ್ ಎರಡು ವಿಕೆಟ್ ಪಡೆಯುವುದರೊಂದಿಗೆ ದಕ್ಷಿಣ ಆಫ್ರಿಕಾ 2.3 ಓವರ್‌ಗಳಲ್ಲಿ 9 ರನ್‌ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆರಂಭದಲ್ಲಿ ಪಿಚ್‌ನಲ್ಲಿ ಸ್ವಲ್ಪ ತೇವಾಂಶ ಇತ್ತು

ಆರಂಭದಲ್ಲಿ ಪಿಚ್‌ನಲ್ಲಿ ಸ್ವಲ್ಪ ತೇವಾಂಶ ಇತ್ತು

ಆಟದ ನಂತರ ಚರ್ಚೆಯಲ್ಲಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆಯೊಂದಿಗೆ ಮಾತನಾಡುತ್ತಾ, ಟಾಸ್ ಗೆಲ್ಲುವುದು ಎಷ್ಟು ನಿರ್ಣಾಯಕ ಎಂದು ಅರ್ಶ್‌ದೀಪ್ ತಿಳಿಸಿದರು. ಅರ್ಶ್‌ದೀಪ್ ಸಿಂಗ್ ಚಹಾರ್ ನಡೆಯನ್ನು ಅನುಸರಿಸಲು ಪ್ರಯತ್ನಿಸಿದರು, ವಿಕೆಟ್ ಪಡೆಯಲು ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡಿದರು.

"ಆರಂಭದಿಂದಲೂ ನನಗೆ ವಿಕೆಟ್ ನೋಡುವ ಅಭ್ಯಾಸವಿಲ್ಲ, ನಾನು ನನ್ನ ಬೌಲಿಂಗ್ ಕೋಚ್ ಬಳಿಗೆ ಹೋಗಿ ಪಿಚ್‌ ಹೇಗಿದೆ ಎಂದು ಕೇಳಿದೆ. ಅವರು, ಪಿಚ್‌ನಲ್ಲಿ ಸ್ವಲ್ಪ ತೇವಾಂಶ ಇರುವುದರಿಂದ ಆರಂಭದಲ್ಲಿ ಬೌಲಿಂಗ್ ಮಾಡುವವರಿಗೆ ಅನುಕೂಲಕರವಾಗಲಿದೆ ಎಂದು ಪರಾಸ್ ಮಾಂಬ್ರೆ ಹೇಳಿದರು" ಎಂದು ಅರ್ಶ್‌ದೀಪ್ ತಿಳಿಸಿದ್ದಾರೆ.

ದ.ಆಫ್ರಿಕಾ ವಿರುದ್ಧದ T20 ಪಂದ್ಯದಿಂದ ಹೊರಗುಳಿದ ಬುಮ್ರಾ: ಫ್ಯಾನ್ಸ್‌ ಅಸಮಾಧಾನ

 ಟಾಸ್‌ ಮುಖ್ಯ ಪಾತ್ರ ವಹಿಸಿತು ಎಂದ ಅರ್ಶ್‌ದೀಪ್

ಟಾಸ್‌ ಮುಖ್ಯ ಪಾತ್ರ ವಹಿಸಿತು ಎಂದ ಅರ್ಶ್‌ದೀಪ್

"ಟಾಸ್ ಗೆದ್ದಿದ್ದು ನಮಗೆ ತುಂಬಾ ಪ್ರಯೋಜನಕಾರಿಯಾಯಿತು. ಚಹಾರ್ ಉತ್ತಮವಾಗಿ ಜೊತೆಯಾದರು, ನಾನು ಅವರನ್ನು ಅನುಸರಿಸಿದೆ. ಚೆಂಡು ಸ್ವಿಂಗ್ ಆಗುತ್ತದೆ ಎಂದು ನಾವು ಅರಿತುಕೊಂಡೆವು. ನಾನು ಅದನ್ನೇ ಮಾಡಲು ಪ್ರಯತ್ನಿಸಿದೆ. ಸರಿಯಾದ ಜಾಗದಲ್ಲಿ ಬೌಲ್ ಮಾಡಿ ಸ್ವಿಂಗ್ ಮಾಡಿದ್ದರಿಂದ ವಿಕೆಟ್ ಪಡೆಯುವುದು ಸುಲಭವಾಯಿತು" ಎಂದು ಅವರು ಹೇಳಿದ್ದಾರೆ/

ಚೆಂಡು ಈ ರೀತಿ ಸ್ವಿಂಗ್ ಆಗುತ್ತದೆ ಎಂದು ನೀವು ಮೊದಲೇ ನಿರೀಕ್ಷಿಸಿದ್ದಿರಾ ಎಂದು ಕೇಳಿದಾಗ, ಅವರು ಇಲ್ಲ ಎಂದು ಹೇಳಿದರು. ಮತ್ತು ನನಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಲು ಪ್ರಯತ್ನ ಮಾಡಿದೆ ಎಂದು ಅರ್ಶ್‌ದೀಪ್ ಹೇಳಿದರು.

ಪರಿಸ್ಥಿತಿಗೆ ಹೊಂದಿಕೊಳ್ಳುವುದು ಮುಖ್ಯ

ಪರಿಸ್ಥಿತಿಗೆ ಹೊಂದಿಕೊಳ್ಳುವುದು ಮುಖ್ಯ

"ನಾನು ಆಡಿದ ಇತ್ತೀಚಿನ ಪಂದ್ಯಗಳಲ್ಲಿ, ನಾನು ಯಾವುದೇ ಸ್ವಿಂಗ್ ಅನ್ನು ಪಡೆಯಲಿಲ್ಲ. ಸ್ವಿಂಗ್ ಬಗ್ಗೆ ಹೆಚ್ಚು ನಿರೀಕ್ಷೆ ಮಾಡುವುದಿಲ್ಲ, ಆದರೆ ಸ್ವಿಂಗ್‌ಗೆ ಅನುಕೂಲವಾದರೆ ಒಳ್ಳೆಯದು. ಚೆಂಡು ಇಷ್ಟೊಂದು ಚಲಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪರಿಸ್ಥಿತಿ ಏನೇ ಇರಲಿ ಹೊಂದಿಕೊಳ್ಳುವುದು ಮುಖ್ಯವಾಗಿದೆ." ಎಂದು ಹೇಳಿದ್ದಾರೆ.

"ನಾನು ಆರಂಭದಲ್ಲಿ ಮೂರು ಓವರ್‌ಗಳನ್ನು ಬೌಲ್ ಮಾಡಿದ್ದೇನೆ, ಅದನ್ನು ತಂಡವು ನನ್ನಿಂದ ಬಯಸಿದೆ ಮತ್ತು ಆ ನಿರೀಕ್ಷೆಗಳ ಮೇಲೆ ಆಟಗಾರರು ಅಭಿವೃದ್ಧಿ ಹೊಂದುವುದು ಅತ್ಯಗತ್ಯ. ನಾನು ಮುಂದೆಯೂ ಅದೇ ರೀತಿ ಮಾಡಲು ಆಶಿಸುತ್ತೇನೆ." ಎಂದು ಹೇಳಿದರು.

ವಿಶ್ರಾಂತಿ ಪಡೆದದ್ದು ಅನುಕೂಲವಾಯಿತು

ವಿಶ್ರಾಂತಿ ಪಡೆದದ್ದು ಅನುಕೂಲವಾಯಿತು

ಆಟದಿಂದ ದೂರವಿರುವ ಸಮಯವನ್ನು ಅವರು ಹೇಗೆ ಬಳಸಿಕೊಂಡರು ಎಂದು ಕೇಳಿದಾಗ, ಅರ್ಶ್ದೀಪ್ ಹೇಳಿದರು. "ನಾನು ಶಕ್ತಿ ಮತ್ತು ಕಂಡೀಷನಿಂಗ್ ತರಬೇತುದಾರರೊಂದಿಗೆ ಮಾತನಾಡಿದಂತೆಯೇ ತಯಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಆಟದಿಂದ ದೂರವಿರುವ ಮೂಲಕ ನನ್ನ ಫಿಟ್‌ನೆಸ್‌ನಲ್ಲಿ ಕೆಲಸ ಮಾಡುವುದು ಬೌಲಿಂಗ್ ಕೋಚ್ ಅವರ ಯೋಜಯೆಯಾಗಿತ್ತು, ಅದು ನನಗೆ ಬಹಳಷ್ಟು ಸಹಾಯ ಮಾಡಿದೆ. ನಾನು ಬಹಳ ಉಲ್ಲಾಸದಿಂದ ಇದ್ದೇನೆ. ನನ್ನ ಯಶಸ್ಸಿನ ಕ್ರೆಡಿಟ್ ಬೌಲಿಂಗ್ ಕೋಚ್‌ ಪರಾಸ್ ಮಾಂಬ್ರೆಯವರಿಗೆ ಸಲ್ಲುತ್ತದೆ" ಎಂದರು.

107 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಅರ್ಧಶತಕಗಳ ನೆರವಿನಿಂದ ಭಾರತ ಸುಲಭವಾಗಿ ಜಯ ಗಳಿಸಿತು. ಎರಡನೇ ಟಿ20 ಪಂದ್ಯ ಗುವಾಹಟಿಯಲ್ಲಿ ಅಕ್ಟೋಬರ್ 2ರಂದು ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, September 29, 2022, 8:30 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X