Ind vs SA ಸರಣಿ; ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಕಂಡುಕೊಂಡ 5 ಪ್ರಮುಖ ಅಂಶಗಳು

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ನಿರ್ಣಾಯಕ ಟಿ20 ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದ್ದರಿಂದ ನಿರಾಶಾದಾಯಕ ಅಂತ್ಯವನ್ನು ಕಂಡಿತು. ಆದರೆ ಸರಣಿಯು ಪ್ರವಾಸಿ ಮತ್ತು ಆತಿಥೇಯ ತಂಡಗಳ ನಡುವೆ ನೆಕ್-ಟು-ನೆಕ್ ಪೈಪೋಟಿಗೆ ಸಾಕ್ಷಿಯಾಗಿದ್ದು, ಸರಣಿ 2-2ರಲ್ಲಿ ಸಮಬಲಗೊಂಡಿತ್ತು.
ಮೊದಲೆರಡು ಪಂದ್ಯಗಳಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಪ್ರಬಲವಾಗಿ ಸರಣಿ ಆರಂಭಿಸಿತು. ನಂತರ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದಿಂದ ಸ್ಮರಣೀಯ ಪುನರಾಗಮನ ಮಾಡಿತು. ಬೆಂಗಳೂರಿನಲ್ಲಿ ಅಂತಿಮ ಪಂದ್ಯವು ನಡೆಯಲು ಸಾಧ್ಯವಾಗದಿದ್ದರೂ, ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಈ ಸರಣಿಯು ಉಭಯ ತಂಡಗಳಿಗೆ ಉತ್ತಮ ಅವಕಾಶವನ್ನು ನೀಡಿತು.
ಗಮನಿಸಬೇಕಾದ ಸಂಗತಿಯೆಂದರೆ, ಭಾರತ ತಂಡವು ತನ್ನ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ಸರಣಿಯಲ್ಲಿ ಕಳೆದುಕೊಂಡಿತ್ತು. ಇದರಿಂದಾಗಿ ಭಾರತ ತಂಡಕ್ಕೆ ತನ್ನ ಬೆಂಚ್ ಬಲವನ್ನು ಪರೀಕ್ಷಿಸಲು ಇದು ಉತ್ತಮ ಅವಕಾಶ ಒದಗಿಸಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೆಲವು ಆಟಗಾರರು ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಂಡರೆ, ಮತ್ತೆ ಕೆಲವರು ನಿರೀಕ್ಷೆಗೆ ತಕ್ಕಂತೆ ಆಟವಾಡಲು ವಿಫಲರಾದರು. ಭಾರತದ ತಂಡದ ದೃಷ್ಟಿಕೋನದಿಂದ ನೋಡುವುದಾದರೆ ಸರಣಿಯಲ್ಲಿ ಕಂಡುಕೊಂಡ ಐದು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

1. ಇಶಾನ್ ಕಿಶನ್ ಆರಂಭಿಕ ಬ್ಯಾಟಿಂಗ್
ಮುಂಬೈನ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದರು. ಕಿಶನ್ ಐದು ಪಂದ್ಯಗಳಲ್ಲಿ 41.20 ಸರಾಸರಿ ಮತ್ತು 150.36 ಸ್ಟ್ರೈಕ್ ರೇಟ್‌ನಲ್ಲಿ 206 ರನ್ ಗಳಿಸಿದರು. ಅವರು ಸರಣಿಯಲ್ಲಿ ಎರಡು ಅರ್ಧ ಶತಕಗಳನ್ನು ಬಾರಿಸಿದರು ಮತ್ತು ಅವರ ಬ್ಯಾಟಿಂಗ್‌ನಲ್ಲಿ ವಿಶ್ವಾಸವು ಮುಂಚೂಣಿಯಲ್ಲಿತ್ತು. ಮುಂದಿನ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಕಷ್ಟವೆನಿಸಿದೆ.

2. ಬ್ಯಾಟಿಂಗ್‌ನಲ್ಲಿ ಶ್ರೇಯಸ್ ಅಯ್ಯರ್ ಪರದಾಟ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಒಂದೆರಡು ಉತ್ತಮ ಆರಂಭಗಳನ್ನು ಪಡೆದರೂ, ಶ್ರೇಯಸ್ ಅಯ್ಯರ್ ತಮ್ಮ ಬ್ಯಾಟಿಂಗ್ ಇನ್ನಿಂಗ್ಸ್ ಅನ್ನು ಅತ್ಯುತ್ತಮ ಪಡಿಸಿಕೊಳ್ಳಲು ವಿಫಲರಾದರು. ಬಲಗೈ ಬ್ಯಾಟರ್ ನಾಲ್ಕು ಪಂದ್ಯಗಳಲ್ಲಿ 23.50 ಸರಾಸರಿಯಲ್ಲಿ 94 ರನ್ ಗಳಿಸಿದರು. ಸರಣಿಯಲ್ಲಿ ಅವರ ಗರಿಷ್ಠ ಸ್ಕೋರ್ 40 ಆಗಿತ್ತು. ಆದರೂ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುತ್ತಾರೆ ಮತ್ತು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

3. ಮತ್ತೆ ಫಿನಿಶರ್ ಪಾತ್ರದಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ
ಐಪಿಎಲ್ 2022ರಲ್ಲಿ ಬ್ಯಾಟಿಂಗ್‌ನಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದರು. ಅದೇ ರೀತಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಫಾರ್ಮ್ ಮುಂದುವರೆಸಿದರು. ಆದರೆ ಬೌಲಿಂಗ್‌ನಲ್ಲಿ ಅವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಹಾರ್ದಿಕ್ ಪಾಂಡ್ಯ ಅವರು 58.50ರ ಸರಾಸರಿಯಲ್ಲಿ ಮತ್ತು 153.94ರ ಸ್ಟ್ರೈಕ್ ರೇಟ್‌ನಲ್ಲಿ 117 ರನ್ ಗಳಿಸಿದರು. ಪಾಂಡ್ಯ ಫಾರ್ಮ್‌ನಲ್ಲಿರುವುದು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಆಟಗಾರರಾಗುತ್ತಾರೆ.

4. ಕೊಟ್ಟ ಅವಕಾಶ ಬಾಚಿಕೊಂಡ ದಿನೇಶ್ ಕಾರ್ತಿಕ್
ಅದು ಐಪಿಎಲ್ 2022 ಆಗಿರಲಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್ ಆಗಿರಲಿ ದಿನೇಶ್ ಕಾರ್ತಿಕ್ ಅವರನ್ನು ತಡೆಯುವ ಯಾವುದೇ ಅಂಶಗಳಿಲ್ಲ. ದೀರ್ಘಕಾಲದವರೆಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿರುವ ದಿನೇಶ್ ಕಾರ್ತಿಕ್ ತನ್ನ ಮೊದಲ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡನು. ಅವರು 158.62 ಸ್ಟ್ರೈಕ್ ರೇಟ್‌ನೊಂದಿಗೆ ಸರಣಿಯಲ್ಲಿ ಭಾರತಕ್ಕಾಗಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದರು. ನಾಲ್ಕನೇ ಟಿ20 ಪಂದ್ಯದಲ್ಲಿ ಅವರು 27 ಎಸೆತಗಳಲ್ಲಿ 55 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ತಮ್ಮ ಸ್ಥಾನವನ್ನು ಖಾಯಂಗೊಳಿಸುವ ಪ್ರಯತ್ನದಲ್ಲಿದ್ದಾರೆ.

5. ಭಾರತದ ಬೌಲಿಂಗ್ ಅಸ್ತ್ರ ಭುವನೇಶ್ವರ್ ಕುಮಾರ್
ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಪ್ರತಿ ಓವರ್‌ಗೆ ಸುಮಾರು 11 ರನ್ ನೀಡಿದರೆ (ನಾಲ್ಕು ಓವರ್‌ಗಳಲ್ಲಿ 43/1), ಉಳಿದ ಮೂರು ಪಂದ್ಯಗಳಲ್ಲಿ ಅವರು ಆರು ರನ್‌ಗಳಿಗಿಂತ ಕಡಿಮೆ ಎಕಾನಮಿ ದರದಲ್ಲಿ ರನ್ ನೀಡಿದರು. ಒಟ್ಟಾರೆ ಭುವನೇಶ್ವರ್ ಕುಮಾರ್ 6.07 ಎಕಾನಮಿ ದರದಲ್ಲಿ ಆರು ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications