IND vs SA: ಭಾರತಕ್ಕೆ ದಿನೇಶ್ ಕಾರ್ತಿಕ್‌ಗಿಂತ ರಿಷಭ್ ಪಂತ್‌ನ ಅಗತ್ಯವಿದೆ; ಕಪಿಲ್ ದೇವ್

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಬದಲಾಗಿ ಭಾರತ ತಂಡಕ್ಕೆ ರಿಷಭ್ ಪಂತ್ ಅವರನ್ನು ಆಡಿಸಬೇಕು ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಭಾನುವಾರ, ಅಕ್ಟೋಬರ್ 30ರಂದು ಪರ್ತ್‌ನಲ್ಲಿ ನಡೆಯಲಿರುವ ತಮ್ಮ ಮೂರನೇ ಸೂಪರ್-12 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಟೀಂ ಇಂಡಿಯಾ ಸಜ್ಜಾಗಿದ್ದು, ಇಲ್ಲಿ ಗೆದ್ದ ತಂಡ ತನ್ನ ಸೆಮಿಫೈನಲ್ ಸ್ಥಾನವನ್ನು ಮುಕ್ಕಾಲು ಭಾಗ ಖಚಿತಪಡಿಸಿಕೊಳ್ಳಲಿದೆ.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತದ ಪಂದ್ಯದ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಯ್ಕೆಯನ್ನು ಒದಗಿಸುವ ಕಾರಣ ಭಾರತಕ್ಕೆ ರಿಷಭ್ ಪಂತ್ ಅಗತ್ಯವಿದೆ ಎಂದು ಹೇಳಿದರು.

ಎಡಗೈ ಆಟಗಾರನನ್ನು ತಂಡದಲ್ಲಿ ಆಯ್ಕೆ ಮಾಡಬೇಕು
"ನಮ್ಮಲ್ಲಿ ರಿಷಭ್ ಪಂತ್ ಇರುವುದರಿಂದ, ಈಗ ಭಾರತ ತಂಡಕ್ಕೆ ಅವರ ಅಗತ್ಯವಿರುವ ಸಮಯ ಎಂದು ನಾನು ಹೇಳಲು ಬಯಸುತ್ತೇನೆ. ದಿನೇಶ್ ಕಾರ್ತಿಕ್ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಆದರೆ ವಿಕೆಟ್ ಕೀಪಿಂಗ್‌ನಲ್ಲಿಯೂ ಸಹ, ಭಾರತಕ್ಕೆ ಆ ಎಡಗೈ ಆಟಗಾರನನ್ನು ತಂಡದಲ್ಲಿ ಆಯ್ಕೆ ಮಾಡಿದರೆ, ತಂಡವು ಸಂಪೂರ್ಣವಾಗಿ ಕಾಣುತ್ತದೆ ಎಂದು ನನು ಭಾವಿಸುತ್ತೇನೆ," ಎಂದು ಕಪಿಲ್ ದೇವ್ ಹೇಳಿದರು.
ಟಿ20 ವಿಶ್ವಕಪ್‌ನಲ್ಲಿ ರನ್ ಗಳಿಸಲು ವಿಫಲರಾಗಿರುವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಸಮರ್ಥಿಸಿಕೊಂಡರು. ಕೆಎಲ್ ರಾಹುಲ್ ಅತ್ಯಂತ ಅಚ್ಚುಕಟ್ಟಾದ ಕ್ರಿಕೆಟಿಗ ಎಂದು ಕರೆದ ಅವರು, ರಾಹುಲ್ ತಾಳ್ಮೆಯಿಂದ ಆಡಬೇಕೆಂದು ಬಯಸುತ್ತಾರೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆದ ಭಾರತ
"ಕೆಎಲ್ ರಾಹುಲ್ ತುಂಬಾ ಅಚ್ಚುಕಟ್ಟಾದ ಕ್ರಿಕೆಟಿಗ. ನೀವು ಅವರ ಬ್ಯಾಟಿಂಗ್ ಅನ್ನು ನೋಡಿದರೆ, ಅವರು ಹೆಣಗಾಡುತ್ತಿರುವಂತೆ ಕಂಡುಬರುವುದಿಲ್ಲ. ಅವರು ರನ್ ಗಳಿಸಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಅದು ನಿಜವಾಗಿಯೂ ಮುಖ್ಯವಾಗಿದೆ. ಕೆಲವು ಆಟಗಾರರು ವೇಗವಾಗಿ ಆಡಬಾರದು ಎಂದು ಹೇಳಲಾಗುತ್ತದೆ. ಅವರು ಆರಂಭದಲ್ಲಿ ಸಮಯ ತೆಗೆದುಕೊಳ್ಳಬಹುದು. ಅವರು ಸುಲಭವಾಗಿ ಮತ್ತು ಅಗತ್ಯವಿದ್ದಾಗ ವೇಗವನ್ನು ಹೆಚ್ಚಿಸಬಹುದು. ಕೆಎಲ್ ರಾಹುಲ್ ತಾಳ್ಮೆಯಿಂದ ಆಡಬೇಕೆಂದು ನಾನು ಬಯಸುತ್ತೇನೆ. ಮೊದಲ 8-10 ಓವರ್‌ಗಳನ್ನು ಆಡಬೇಕು ಮತ್ತು ನಂತರ ವೇಗ ಹೆಚ್ಚಿಸಿಕೊಳ್ಳಬೇಕು," ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದರು.
ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆದ ಭಾರತ, ಗುಂಪಿನಲ್ಲಿ ಅಗ್ರ ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಾಡಲಿದೆ. ಇತ್ತೀಚೆಗೆ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿತ್ತು. ಆದರೆ ದಕ್ಷಿಣ ಆಫ್ರಿಕಾ ಈ ಟಿ20 ವಿಶ್ವಕಪ್‌ನಲ್ಲಿ ತಮ್ಮ ಲಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ರೋಚಕದಿಂದ ಕೂಡಿರಲಿದೆ.

ಭಾರತ vs ದಕ್ಷಿಣ ಆಫ್ರಿಕಾ ಸಂಭಾವ್ಯ ಅಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್/ರಿಷಭ್ ಪಂತ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್/ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ರಿಲೀ ರೊಸೊವ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕ್ವಿಂಟನ್ ಡಿ ಕಾಕ್, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications