For Quick Alerts
ALLOW NOTIFICATIONS  
For Daily Alerts
 

Ind vs SA: ವಿರಾಟ್ ಕೊಹ್ಲಿ ಕನಸಿನ ಹಾದಿಯಲ್ಲಿ ಮುಳ್ಳಾಗಬಲ್ಲ ಮೂವರು ದ.ಆಫ್ರಿಕಾ ಬ್ಯಾಟ್ಸ್‌ಮನ್

Virat kohli

ಡಿಸೆಂಬರ್ 26 ರಿಂದ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 2018 ರ ನಂತರ, ಭಾರತ ತಂಡವು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ.

ವಿರಾಟ್ ಕೊಹ್ಲಿ ಪಡೆ ಹರಿಣಗಳ ನಾಡಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದು ಹೇಗಾದ್ರೂ ಮಾಡಿ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲಬೇಕೆಂದು ಪಣತೊಟ್ಟಿದೆ. ಭಾರತ ಕ್ರಿಕೆಟ್ ತಂಡದ ಪ್ರಸ್ತುತ ಫಾರ್ಮ್, ವಿದೇಶಿ ನೆಲದಲ್ಲಿ ಕಳೆದ ಕೆಲವು ವರ್ಷಗಳಿಂದ ತಂಡದ ಪ್ರದರ್ಶನ ಮತ್ತು ಮೊದಲಿಗಿಂತ ದುರ್ಬಲ ದಕ್ಷಿಣ ಆಫ್ರಿಕಾ ತಂಡವು ವಿರಾಟ್ ಕೊಹ್ಲಿಗೆ ಈ ಸುವರ್ಣ ಅವಕಾಶವನ್ನು ತಂದುಕೊಟ್ಟಿದೆ. ವಿರಾಟ್ ಈ ನೆಲದಲ್ಲಿ ಗೆದ್ದಿದ್ದೇ ಆದಲ್ಲಿ, ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಲಿದೆ.

ಭಾರತ ತಂಡವು ಗೆಲುವಿನ ಪ್ರಬಲ ಸ್ಪರ್ಧಿಯಂತೆ ತೋರಬಹುದು, ಆದರೆ ದಕ್ಷಿಣ ಆಫ್ರಿಕಾ ತಂಡವನ್ನು ತವರಿನಲ್ಲಿ ಸೋಲಿಸುವುದು ಸುಲಭವಲ್ಲ. ವಿಶೇಷವಾಗಿ ಡೀನ್ ಎಲ್ಗರ್ ನೇತೃತ್ವದ ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಕಿಯಾ ಅವರು ಟೆಸ್ಟ್ ಸರಣಿಗೆ ಮುಂಚಿತವಾಗಿ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ ಆದರೆ ಡುವಾನ್ ಒಲ್ವಿರ್, ಕಗಿಸೊ ರಬಾಡ, ಬ್ಯೂರಾನ್ ಹೆಂಡ್ರಿಕ್ಸ್ ಮತ್ತು ಲುಂಗಿ ಎನ್‌ಗಿಡಿ ಕೂಡ ಭಾರತ ತಂಡಕ್ಕೆ ಸವಾಲಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದರ ಜೊತೆಗೆ ಈ ಟೆಸ್ಟ್ ಸರಣಿ ಗೆಲ್ಲುವ ಕನಸಿನಲ್ಲಿ ದೊಡ್ಡ ಸಮಸ್ಯೆ ಆಗಿ ಕಾಡಲಿದ್ದಾರೆ ದಕ್ಷಿಣ ಆಫ್ರಿಕಾದ ಈ ಮೂವರು ಬ್ಯಾಟ್ಸ್‌ಮನ್‌ಗಳು.

ಡೀನ್ ಎಲ್ಗರ್ (ನಾಯಕ)

ಡೀನ್ ಎಲ್ಗರ್ (ನಾಯಕ)

ದಕ್ಷಿಣ ಆಫ್ರಿಕಾ ನೆಲದಲ್ಲಿ ಗೆಲ್ಲುವ ಭಾರತ ತಂಡದ ಕನಸನ್ನು ಭಗ್ನಗೊಳಿಸುವಲ್ಲಿ ದೊಡ್ಡ ಅಡೆತಡೆ ಎಂದರೆ ಇನ್ನಿಂಗ್ಸ್ ತೆರೆಯುವ ನಾಯಕ ಡೀನ್ ಎಲ್ಗರ್ . ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಬಾಲ್‌ ಸಾಮಾನ್ಯವಾಗಿಯೇ ಬೌನ್ಸ್ ಆಗುತ್ತದೆ. ಇಲ್ಲಿನ ಪಿಚ್‌ಗಳಲ್ಲಿ ಪೇಸ್ ಮತ್ತು ಬೌನ್ಸ್‌ ಹೆಚ್ಚಿರುವುದರಿಂದ ಯಾವುದೇ ಪ್ರವಾಸಿ ತಂಡಕ್ಕೆ ಇಲ್ಲಿ ರನ್ ಗಳಿಸುವುದು ಸುಲಭವಲ್ಲ.

ಈ ಪಿಚ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗಿಂತ ಸಾಕಷ್ಟು ಭಿನ್ನವಾಗಿದ್ದರೂ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಯಶಸ್ಸನ್ನು ಪುನರಾವರ್ತಿಸುವುದು ಭಾರತಕ್ಕೆ ಸುಲಭವಲ್ಲ. ಡೀನ್ ಎಲ್ಗರ್ ಬಗ್ಗೆ ಮಾತನಾಡುವುದಾದ್ರೆ, ಅವರು ಪ್ರಸ್ತುತ ದಕ್ಷಿಣ ಆಫ್ರಿಕಾದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿದ್ದಾರೆ, 69 ಪಂದ್ಯಗಳ 120 ಇನ್ನಿಂಗ್ಸ್‌ಗಳಲ್ಲಿ 39.16 ಸರಾಸರಿಯಲ್ಲಿ 4347 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಎಲ್ಗರ್ 13 ಶತಕ ಮತ್ತು 17 ಅರ್ಧ ಶತಕಗಳನ್ನು ಕೂಡ ಗಳಿಸಿದ್ದಾರೆ.

ನನ್ನ ಮಾತಿನಿಂದ ಅಶ್ವಿನ್‌ಗೆ ನೋವಾಗಿದ್ರೆ, ನನಗೆ ಆ ಹೇಳಿಕೆಯಿಂದ ಸಂತೋಷವಾಗಿದೆ: ರವಿಶಾಸ್ತ್ರಿ

ಏಡೆನ್ ಮಕ್ರಾಮ್

ಏಡೆನ್ ಮಕ್ರಾಮ್

ಏಡೆನ್ ಮಾರ್ಕ್ರಾಮ್ ಅವರು ಅತಿ ಕಡಿಮೆ ಸಮಯದಲ್ಲಿ ಹಲವು ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ದೀರ್ಘ ಮತ್ತು ಆಕ್ರಮಣಕಾರಿ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಏಡೆನ್ ಮಕ್ರಾಮ್ 26 ಪಂದ್ಯಗಳ 47 ಇನ್ನಿಂಗ್ಸ್‌ಗಳಲ್ಲಿ 39.65 ಸರಾಸರಿಯಲ್ಲಿ ಐದು ಶತಕಗಳು ಮತ್ತು 9 ಅರ್ಧ ಶತಕಗಳನ್ನು ಒಳಗೊಂಡಂತೆ 1824 ರನ್ ಗಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡಕ್ಕಾಗಿ ಸ್ಥಿರವಾಗಿ ಆಡಿದ ಕೆಲವೇ ಬ್ಯಾಟ್ಸ್‌ಮನ್‌ಗಳಲ್ಲಿ ಏಡೆನ್ ಮಾರ್ಕ್‌ರಾಮ್ ಒಬ್ಬರು, ಅವರು ಭಾರತದ ವಿರುದ್ಧ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಪರಿಸ್ಥಿತಿಗೆ ಅನುಗುಣವಾಗಿ ರನ್‌ಗಳ ವೇಗವನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಸಾಮರ್ಥ್ಯ ಅವರನ್ನು ಭಾರತ ತಂಡದ ಗೆಲುವಿನಲ್ಲಿ ದೊಡ್ಡ ಅಡಚಣೆಯನ್ನಾಗಿ ಮಾಡುತ್ತದೆ.

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡಕ್ಕೆ ಪಾಲ್ ಕಾಲಿಂಗ್‌ವುಡ್ ಕೋಚ್

ರೈಸಿ ವ್ಯಾನ್ ಡೆರ್ ಡಸ್ಸೆನ್

ರೈಸಿ ವ್ಯಾನ್ ಡೆರ್ ಡಸ್ಸೆನ್

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರು ತಂದೆಯಾಗಲಿದ್ದಾರೆ, ಈ ಕಾರಣದಿಂದಾಗಿ ಅವರು ಸರಣಿಯ ಮೊದಲ ಪಂದ್ಯದ ನಂತರ ತಂಡದೊಂದಿಗೆ ಕಾಣಿಸಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಡಿ ಕಾಕ್ ಅವರ ಜವಾಬ್ದಾರಿಯನ್ನು ರೈಸಿ ವ್ಯಾನ್ ಡೆರ್ ಡಸ್ಸೆನ್ ವಹಿಸಿಕೊಳ್ಳಬಹುದು.

ಅವರು ತವರಿನ ಪಿಚ್‌ಗಳಲ್ಲಿ ರನ್ ಗಳಿಸಿ ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು ಮತ್ತು ಸಾಕಷ್ಟು ಆಡಿದ ನಂತರ ಟೆಸ್ಟ್ ತಂಡದ ಭಾಗವಾದರು. ಸೀಮಿತ ಓವರ್‌ಗಳ ಮಾದರಿಯಲ್ಲಿ ಇನ್ನಿಂಗ್ಸ್ ಕಟ್ಟಿರುವ ದುಸೇನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 10 ಪಂದ್ಯಗಳ 17 ಇನ್ನಿಂಗ್ಸ್‌ಗಳಲ್ಲಿ 38.12 ಸರಾಸರಿಯಲ್ಲಿ 610 ರನ್ ಗಳಿಸಿದ್ದಾರೆ ಮತ್ತು ಈ ಅವಧಿಯಲ್ಲಿ ಆರು ಅರ್ಧಶತಕಗಳನ್ನು ಆಡಿದ್ದಾರೆ.

ಅವರು ಒಮ್ಮೆ ಟೆಸ್ಟ್ ಶತಕದ ಹೊಸ್ತಿಲಿನಲ್ಲಿ ಕೇವಲ 2 ರನ್‌ಗಳಿಂದ ವಂಚಿತರಾದರು, ಆದರೆ ಭಾರತೀಯ ತಂಡದ ವಿರುದ್ಧ ಅವರು ತಮ್ಮ ಅಂಕಿಅಂಶಗಳನ್ನು ಸುಧಾರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಮೊದಲ ಪಂದ್ಯದಲ್ಲಿ ಈ ಮೂವರು ಉತ್ತಮ ಇನಿಂಗ್ಸ್ ಆಡಿದರೆ, ನಂತರ ಅವರನ್ನು ತಡೆಯುವುದು ಭಾರತೀಯ ಬೌಲರ್‌ಗಳಿಗೆ ಬಹುತೇಕ ಅಸಾಧ್ಯ.

Story first published: Friday, December 24, 2021, 9:56 [IST]
Other articles published on Dec 24, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+