IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಈ ಬೌಲರ್‌ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆಯೇ?
ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಭಾರತ ತಂಡಗಳ ನಡುವೆ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ 67.4 ಓವರ್‌ಗಳಲ್ಲಿ 245 ರನ್‌ಗಳಿಗೆ ಅಲೌಟ್ ಆಯಿತು.

ಇನ್ನು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಎರಡನೇ ದಿನದಂತ್ಯಕ್ಕೆ ಡೀನ್ ಎಲ್ಗರ್ ಭರ್ಜರಿ ಶತಕದ ಸಹಾಯದಿಂದ 66 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದ್ದು, 11 ರನ್‌ಗಳ ಅತ್ಯಲ್ಪ ಮುನ್ನಡೆ ಸಾಧಿಸಿತು.
ಮೂರನೇ ದಿನದಾಟ ಮುಂದುವರೆಸಿರುವ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದು, ಡೀನ್ ಎಲ್ಗರ್ ದ್ವಿಶತಕ ಸಮೀಪಿಸಿದ್ದಾರೆ. ಭಾರತೀಯ ಬೌಲರ್‌ಗಳು ಈವರೆಗೆ ಕೇವಲ ಐದು ವಿಕೆಟ್ ಕಬಳಿಸಿದ್ದಾರೆ.

ಇದೇ ವೇಳೆ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗಾಯಾಳು ಮೊಹಮ್ಮದ್ ಶಮಿಯನ್ನು ಭಾರತ ತಂಡವು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
33 ವರ್ಷದ ವೇಗಿ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್-ಬಾಲ್ ಸರಣಿಗಳಿಗಾಗಿ ಅವರಿಗೆ ವಿಶ್ರಾಂತಿ ನೀಡಲಾಯಿತು.

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹರಿಣ ಪಡೆ ವಿರುದ್ಧ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಾದದ ಗಾಯದಿಂದಾಗಿ ಅವರನ್ನು ಹೊರಗಿಡಲಾಯಿತು
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 3ನೇ ದಿನದಂದು 5 ವಿಕೆಟ್‌ಗೆ 256 ರನ್‌ಗಳಿಂದ ಆಟ ಆರಂಭಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ, ಈ ಲೇಖನ ಪೋಸ್ಟ್ ಆಗುವ ಹೊತ್ತಿಗೆ 90 ಓವರ್‌ಗಳಲ್ಲಿ 349 ರನ್ ಕಲೆಹಾಕಿದೆ.
ಇದಕ್ಕೂ ಮುನ್ನ ಎರಡನೇ ದಿನದಾಟದಲ್ಲಿ ಭಾರತ ತಮ್ಮ ಇನ್ನಿಂಗ್ಸ್ ಮುಗಿಸುವ ಮೊದಲು ಕೆಎಲ್ ರಾಹುಲ್ ಅವರ ಅದ್ಭುತ ಶತಕದ ನೆರವಿನಿಂದ 245 ರನ್ ಗಳಿಸಿತು.
"ಮೊಹಮ್ಮದ್ ಶಮಿ ಬೌಲರ್ ಆಗಿ ಮತ್ತು ವಿಭಾಗದ ಲೀಡರ್ ಆಗಿ ಎತ್ತರದಲ್ಲಿ ಬೆಳೆದಿದ್ದಾರೆ. ಆತ ಜಸ್ಪ್ರೀತ್ ಬುಮ್ರಾಗೆ ಸಮರ್ಥ ಸಹಾಯಕ ಆಗಿದ್ದಾರೆ. ಈ ರೀತಿಯ ಪಿಚ್‌ನಲ್ಲಿ ನೇರವಾದ ವೇಗದೊಂದಿಗೆ ಬೌಲ್ ಮಾಡುತ್ತಿದ್ದರು ಎಂದು ಭಾವಿಸಬಹುದು".
"ನಾನು ನಿಮಗೆ ಭರವಸೆ ನೀಡುತ್ತೇನೆ, ಶಮಿ ಖಂಡಿತವಾಗಿಯೂ ಕೆಲವು ವಿಕೆಟ್‌ಗಳನ್ನು ಪಡೆಯುತ್ತಿದ್ದರು. ಭಾರತ ತಂಡವು ಆತನನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತಿದೆ," ಎಂದು ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ಹೇಳಿದರು.
ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಎರಡನೇ ದಿನದಾಟದ ಅಂತ್ಯಕ್ಕೆ 15 ಓವರ್‌ಗಳಲ್ಲಿ 61 ರನ್ ನೀಡಿ 1 ವಿಕೆಟ್ ಪಡೆದರು.
ವೇಗದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ 12 ಓವರ್‌ಗಳಲ್ಲಿ 57 ರನ್ ನೀಡಿ ವಿಕೆಟ್ ರಹಿತರಾದರು. ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ 2ನೇ ದಿನದಂದು ಬುಮ್ರಾ ಮತ್ತು ಸಿರಾಜ್‌ಗೆ ಸೂಕ್ತ ಬೆಂಬಲ ನೀಡಲಿಲ್ಲ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications