For Quick Alerts
ALLOW NOTIFICATIONS  
For Daily Alerts
 

Ind Vs SL 3rd ODI: ಸಂಕ್ರಾಂತಿಯಂದೇ 4 ಶತಕ : ವಿರಾಟ್ ಕೊಹ್ಲಿ ವಿಶೇಷ ದಾಖಲೆ

IND vs SL 3rd ODI: Virat Kohli Scores 4 Centuries In January 15th happened ODI Matches

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಮಿಂಚಿದ್ದಾರೆ. ಕೊಹ್ಲಿ ಆಡಿರುವ ಕೊನೆಯ 4 ಏಕದಿನ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ 3ನೇ ಶತಕ ಸಿಡಿಸಿದ್ದಾರೆ.

ಜನವರಿ 15, ವಿರಾಟ್ ಕೊಹ್ಲಿ ಮತ್ತು ಶತಕಕ್ಕೆ ಏನೋ ನಂಟಿದೆ. ಜನವರಿ 15ರಂದು ಇಡೀ ದೇಶ ಸಂಕ್ರಾಂತಿಯ ಸಂಭ್ರಮದಲ್ಲಿದ್ದರೇ, ಕೊಹ್ಲಿ ಮಾತ್ರ ಶತಕದ ಸಂಭ್ರಮದಲ್ಲಿ ತೇಲಿದ್ದಾರೆ. ಇದು ಒಂದೆರಡು ಬಾರಿಯಲ್ಲ ಬರೋಬ್ಬರಿ 4 ಬಾರಿ ವಿರಾಟ್ ಕೊಹ್ಲಿ ಸಂಕ್ರಾಂತಿಯಂದು ಅಭಿಮಾನಿಗಳಿಗೆ ಶತಕದ ಉಡುಗೊರೆ ನೀಡಿದ್ದಾರೆ. ಇದೊಂದು ವಿಶಿಷ್ಠ ದಾಖಲೆಯೆಂದೇ ಹೇಳಬಹುದು.

ಸಂಕ್ರಾಂತಿಯೆಂದರೆ ಎಲ್ಲರಿಗೂ ಎಳ್ಳು ಬೆಲ್ಲ, ಸುಗ್ಗಿಯ ಸಂಭ್ರಮವಾದರೆ, ವಿರಾಟ್ ಕೊಹ್ಲಿಗೆ ಮಾತ್ರ ರನ್‌ಗಳ ಸುಗ್ಗಿಯ ಸಂಭ್ರಮ ಎನ್ನುವಂತಾಗಿದೆ. ಅದ್ಭುತ ಫಾರ್ಮ್‌ನಲ್ಲಿದ್ದ ವೇಳೆ ವಿರಾಟ್ ಕೊಹ್ಲಿ 2017, 2018, 2019ರ ಜನವರಿ 15 ರಂದು ಶತಕ ಗಳಿಸಿದ್ದರು. ನಂತರ ರನ್‌ ಬರ ಅನುಭವಿಸಿದ್ದ ಕೊಹ್ಲಿ, 3 ವರ್ಷಗಳ ನಂತರ ಫಾರ್ಮ್‌ಗೆ ಮರಳಿದ್ದಲ್ಲದೆ, ಜನವರಿ 15ರ ಶತಕದ ದಾಖಲೆಯನ್ನು ಮುಂದುವರೆಸಿದ್ದಾರೆ.

ಇಂಗ್ಲೆಂಡ್ ವಿರುದ್ಧ 122 ರನ್ ಗಳಿಸಿದ್ದ ಕೊಹ್ಲಿ

ಇಂಗ್ಲೆಂಡ್ ವಿರುದ್ಧ 122 ರನ್ ಗಳಿಸಿದ್ದ ಕೊಹ್ಲಿ

2017ರ ಜನವರಿ 15ರಂದು ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿ ಮಿಂಚಿದ್ದರು. 102 ಎಸೆತಗಳಲ್ಲಿ 122 ರನ್ ಗಳಿಸಿದ್ದ ಅವರು ಭಾರತಕ್ಕೆ ಗೆಲುವು ತಂದುಕೊಟ್ದಿದ್ದರು.

ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 350 ರನ್ ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 48.1 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 356 ರನ್ ಗಳಿಸುವ ಮೂಲಕ 3 ವಿಕೆಟ್‌ಗಳ ಜಯ ಸಾಧಿಸಿತ್ತು.

Ind Vs SL 3rd ODI: ವಿರಾಟ್ ಕೊಹ್ಲಿ 74ನೇ ಶತಕ : ಹಲವು ದಾಖಲೆ ಪುಡಿಗಟ್ಟಿದ ಕಿಂಗ್ ಕೊಹ್ಲಿ

2018ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ

2018ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ

2018ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದರು. ಜನವರಿ 12 ರಿಂದ 17 ರವರೆಗೆ ಪಂದ್ಯ ನಡೆದಿತ್ತು.

ಪಂದ್ಯದ ಮೂರನೇ ದಿನದಲ್ಲಿ ಅಂದರೆ ಜನವರಿ 15ರಂದು ವಿರಾಟ್ ಕೊಹ್ಲಿ 153 ರನ್ ಗಳಿಸಿ ಮಿಂಚಿದ್ದರು. ಟೀಂ ಇಂಡಿಯಾದ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಈ ಸೆಂಚುರಿ ಬಾರಿದ್ದರು. ಕೊಹ್ಲಿ ಶತಕದ ಹೊರತಾಗಿಯೂ ಟೀಂ ಇಂಡಿಯಾ ಈ ಟೆಸ್ಟ್ ಪಂದ್ಯವನ್ನು 153 ರನ್‌ಗಳಿಂದ ಸೋಲಬೇಕಾಯಿತು.

ಅಡಿಲೇಡ್‌ನಲ್ಲಿ ಕೊಹ್ಲಿ ಅಬ್ಬರಕ್ಕೆ ತತ್ತರಿಸಿದ್ದ ಆಸಿಸ್ ಪಡೆ

ಅಡಿಲೇಡ್‌ನಲ್ಲಿ ಕೊಹ್ಲಿ ಅಬ್ಬರಕ್ಕೆ ತತ್ತರಿಸಿದ್ದ ಆಸಿಸ್ ಪಡೆ

2018ರ ಜನವರಿ 15ರಂದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 39ನೇ ಏಕದಿನ ಶತಕವನ್ನು ಗಳಿಸಿದ್ದರು. ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 298 ರನ್ ಗಳಿಸಿತ್ತು.

ಈ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾ ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿಯ ಭರ್ಜರಿ ಶತಕದ ನೆರವಿನಿಂದ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. 112 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ನೆರವಿನಿಂದ 104 ರನ್ ಸಿಡಿಸಿ ಮಿಂಚಿದ್ದರು.

ಲಂಕನ್ನರ ವಿರುದ್ದ ವಿರಾಟ್ ಆಟ

ಲಂಕನ್ನರ ವಿರುದ್ದ ವಿರಾಟ್ ಆಟ

2019ರ ನಂತರ ಆಟದ ಚಾರ್ಮ್ ಕಳೆದುಕೊಂಡಿದ್ದ ಕೊಹ್ಲಿ ರನ್ ಬರವನ್ನು ಎದುರಿಸಿದ್ದರು. 2022ರ ಏಷ್ಯಾಕಪ್‌ ನಂತರ ತಮ್ಮ ಫಾರ್ಮ್‌ಗೆ ಮರಳಿದ ಕೊಹ್ಲಿ ದಾಖಲೆ ಮೇಲೆ ದಾಖಲೆಯನ್ನು ಮಾಡುತ್ತಲೇ ಇದ್ದಾರೆ.

2023 ಜನವರಿ 15 ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಮೋಘ ಆಟವಾಡಿದರು. 110 ಎಸೆತಗಳಲ್ಲಿ 13 ಬೌಂಡರಿ 8 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 166 ರನ್ ಗಳಿಸಿದರು. ಕೊಹ್ಲಿ ಶತಕದ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ 390 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಕೇವಲ 73 ರನ್‌ಗಳಿಗೆ ಆಲೌಟ್ ಆಗುವ ಮೂಲಕ 317 ರನ್‌ಗಳ ಜಯ ಸಾಧಿಸಿತು.

Story first published: Sunday, January 15, 2023, 22:07 [IST]
Other articles published on Jan 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+