Ind Vs SL 3rd ODI: ವಿರಾಟ್ ಕೊಹ್ಲಿ 74ನೇ ಶತಕ : ಹಲವು ದಾಖಲೆ ಪುಡಿಗಟ್ಟಿದ ಕಿಂಗ್ ಕೊಹ್ಲಿ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದಾರೆ. ಗತ ವೈಭವಕ್ಕೆ ಮರಳಿದ ಕಿಂಗ್‌ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಸಿಡಿಸಿ ಮಿಂಚುತ್ತಿದ್ದಾರೆ. 2023ರ ಆರಂಭದಲ್ಲೇ 2 ಶತಕ ಗಳಿಸಿರುವುದು ತಂಡಕ್ಕೆ ಶುಭ ಸೂಚನೆಯಾಗಿದೆ.

ಕೊಹ್ಲಿ ಫಾರ್ಮ್‌ನಲ್ಲಿದ್ದಾಗ ಮೈದಾನಕ್ಕಿಳಿದರೆ ಅಲ್ಲಿ ಒಂದಲ್ಲಾ ಒಂದು ದಾಖಲೆ ನಿರ್ಮಾಣವಾಗುವುದು ಖಚಿತ. ತಿರುವನಂತಪುರದ ಗ್ರೀನ್‌ಫೀಲ್ಡ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ಮುರಿದರು. ಹೊಸ ದಾಖಲೆಗಳನ್ನು ಬರೆದರು.

Ind Vs SL 3rd ODI: ಶುಭ್‌ಮನ್ ಗಿಲ್ ಭರ್ಜರಿ ಶತಕ, ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡ ಆರಂಭಿಕ ಆಟಗಾರInd Vs SL 3rd ODI: ಶುಭ್‌ಮನ್ ಗಿಲ್ ಭರ್ಜರಿ ಶತಕ, ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡ ಆರಂಭಿಕ ಆಟಗಾರ

110 ಎಸೆತಗಳಲ್ಲಿ 13 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ ಅಜೇಯ 166 ರನ್ ಗಳಿಸಿ, ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು. ಭಾರತ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 390 ರನ್ ಗಳಿಸಿದೆ.

74ನೇ ಶತಕ ಬಾರಿಸಿದ ಕೊಹ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಪುಡಿಗಟ್ಟಿದ್ದಾರೆ. ತವರಿನಲ್ಲಿ ಅತಿ ಹೆಚ್ಚು ಶತಕ ಗಳಿಸಿದ್ದ ದಾಖಲೆಯನ್ನು ಕೊಹ್ಲಿ ಈಗ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಭಾರತದಲ್ಲಿ 20 ಏಕದಿನ ಶತಕ ಗಳಿಸಿದ್ದು, ವಿರಾಟ್ ಕೊಹ್ಲಿ 21 ಶತಕ ಸಿಡಿಸಿದ್ದಾರೆ.

ಅಲ್ಲದೆ ಏಕದಿನ ಮಾದರಿಯಲ್ಲಿ 46ನೇ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಸಚಿನ್ ದಾಖಲೆಯನ್ನು ಮುರಿಯಲು ಇನ್ನು ನಾಲ್ಕು ಶತಕ ಬೇಕಾಗಿದೆ. ಸಚಿನ್ ತೆಂಡೂಲ್ಕರ್ 49 ಏಕದಿನ ಶತಕಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ಏಕದಿನ ಶತಕ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ.

4 ಇನ್ನಿಂಗ್ಸ್‌ ಮೂರು ಶತಕ

4 ಇನ್ನಿಂಗ್ಸ್‌ ಮೂರು ಶತಕ

ಸತತ ಮೂರು ವರ್ಷಗಳ ಕಾಲ ಶತಕದ ಬರ ಅನುಭವಿಸಿದ್ದ ವಿರಾಟ್ ಕೊಹ್ಲಿ ಈಗ ಅಬ್ಬರಿಸುತ್ತಿದ್ದಾರೆ. ತಮ್ಮ ಹಳೆಯ ಆಟವನ್ನು ಪ್ರದರ್ಶಿಸುತ್ತಿದ್ದು, ರನ್‌ ಮೆಷಿನ್ ಆಗಿ ಬದಲಾಗಿದ್ದಾರೆ. ಕಳೆದ ನಾಲ್ಕು ಏಕದಿನ ಪಂದ್ಯಗಳಲ್ಲಿ ಅವರು ಮೂರು ಶತಕ ಗಳಿಸಿದ್ದಾರೆ. ಇದು ಅವರ ಸಾಮರ್ಥ್ಯ ಏನೆಂದು ಮತ್ತೆ ಜಗತ್ತಿಗೆ ತೋರಿಸಿದೆ. ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದಾರೆ.

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 3 ಪಂದ್ಯಗಳಿಂದ 141.50 ಸರಾಸರಿಯಲ್ಲಿ 137.38 ಸ್ಟ್ರೈಕ್‌ರೇಟ್‌ನಲ್ಲಿ 283 ರನ್ ಗಳಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಈ ಇಬ್ಬರು ಭಾರತದ ಖಾಯಂ ಆರಂಭಿಕ ಬ್ಯಾಟರ್‌ಗಳಾಬೇಕು; ಗೌತಮ್ ಗಂಭೀರ್

 5ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ

5ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ

ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. 259 ಇನ್ನಿಂಗ್ಸ್‌ಗಳಿಂದ 12754 ರನ್ ಗಳಿಸಿದ್ದು, ಶ್ರೀಲಂಕಾ ಆಟಗಾರ ಜಯವರ್ಧನೆಯವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿದರು.

ಏಕದಿನ ಕ್ರಿಕೆಟ್‌ನಲ್ಲಿ 463 ಇನ್ನಿಂಗ್ಸ್‌ನಲ್ಲಿ 18426 ರನ್‌ ಗಳಿಸಿರುವ ಕ್ರಿಕೆಟ್ ದಂತಕಥೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ. 14234 ರನ್ ಗಳಿಸಿರುವ ಕುಮಾರ್ ಸಂಗಾಕ್ಕರ 2ನೇ ಸ್ಥಾನದಲ್ಲಿದ್ದಾರೆ.

ಎದುರಾಳಿ ತಂಡದ ವಿರುದ್ಧ 10 ಶತಕ

ಎದುರಾಳಿ ತಂಡದ ವಿರುದ್ಧ 10 ಶತಕ

ಇನ್ನು ಏಕದಿನ ಮಾದರಿಯಲ್ಲಿ ಎದುರಾಳಿ ತಂಡದ ವಿರುದ್ಧ 10 ಶತಕ ಗಳಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ 10 ಶತಕ ಗಳಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ಇದುವರೆಗೂ ಯಾವುದೇ ಆಟಗಾರ ಏಕದಿನ ಮಾದರಿಯಲ್ಲಿ ಎದುರಾಳಿ ತಂಡದ ವಿರುದ್ಧ 10 ಶತಕ ದಾಖಲಿಸಿಲ್ಲ. ಕಿಂಗ್ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 9 ಶತಕ ಗಳಿಸಿರುವ ರೋಹಿತ್, ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, January 15, 2023, 17:50 [IST]
Other articles published on Jan 15, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X