Ind vs SL 3rd T20I: ಮ್ಯಾಕ್ಸ್‌ವೆಲ್ ದಾಖಲೆ ಸರಿಗಟ್ಟಿದ ಸೂರ್ಯ, ರೋಹಿತ್ ದಾಖಲೆ ಕೂಡ ಅಪಾಯದಲ್ಲಿ!

ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಅದ್ಭುತ್ ಫಾರ್ಮ್ ಮುಂದುವರೆಸಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ 20 ಸರಣಿಯ ಕೊನೆಯ ಪಂದ್ಯದಲ್ಲಿ ಅದ್ಭುತ ಶತಕ ದಾಖಲಿಸಿದರು.
ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ 9 ಭರ್ಜರಿ ಸಿಕ್ಸರ್ ಇದ್ದವು. ಟಿ20 ಮಾದರಿಯಲ್ಲಿ 3ನೇ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನ್ಯೂಜಿಲೆಂಡ್‌ನ ಕಾಲಿನ್ ಮುನ್ರೊ ಅವರ ದಾಖಲೆ ಸರಿಗಟ್ಟಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮಾತ್ರ 4 ಶತಕಗಳನ್ನು ಗಳಿಸುವ ಮೂಲಕ, ಅತಿ ಹೆಚ್ಚು ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ 3 ಶತಕ ಗಳಿಸಿದ್ದ ಮ್ಯಾಕ್ಸ್‌ವೆಲ್ ಮತ್ತು ಮುನ್ರೋ ಇದ್ದಾರೆ, ಈಗ ಅವರ ಸಾಲಿಗೆ ಸೂರ್ಯಕುಮಾರ್ ಯಾದವ್ ಸೇರ್ಪಡೆಯಾಗಿದ್ದಾರೆ. ಟಿ20 ಮಾದರಿಯಲ್ಲಿ 2 ಶತಕ ಗಳಿಸಿದ್ದ ಕೆಎಲ್ ರಾಹುಲ್‌ರನ್ನು ಹಿಂದಿಕ್ಕಿದ್ದಾರೆ.
ಟೀಂ ಇಂಡಿಯಾ ಕೇವಲ ಮೂವರು ಬ್ಯಾಟರ್ ಗಳು ಮಾತ್ರ ಒಂದಕ್ಕಿಂತ ಹೆಚ್ಚಿನ ಶತಕಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ. ರೋಹಿತ್ ಶರ್ಮಾ 4 ಶತಕ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, 3 ಶತಕ ಗಳಿಸಿರುವ ಸೂರ್ಯ ಎರಡನೇ ಸ್ಥಾನದಲ್ಲಿದ್ದಾರೆ, 2 ಶತಕಗಳನ್ನು ಗಳಿಸಿರುವ ಕೆಎಲ್ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ.

ಭಾರತದ ಪರವಾಗಿ 2ನೇ ವೇಗದ ಶತಕ
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ ಶತಕ ಗಳಿಸಿದರು. ಸೂರ್ಯಕುಮಾರ್ ಯಾದವ್‌ಗೆ ಇದು ವೇಗದ ಶತಕವಾಗಿದೆ. ಇದು ಭಾರತೀಯ ಕ್ರಿಕೆಟರ್ ಟಿ20 ಮಾದರಿಯಲ್ಲಿ ಗಳಿಸಿದ ಎರಡನೇ ವೇಗದ ಶತಕವಾಗಿದೆ. 35 ಎಸೆತಗಳಲ್ಲಿ ಶತಕ ಗಳಿಸಿರುವ ರೋಹಿತ್ ಶರ್ಮಾ ವೇಗದ ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.

ಶತಕ ಗಳಿಸಿದ ನಂತರ ಸೂರ್ಯ ಪ್ರತಿಕ್ರಿಯೆ
"ಇನ್ನಿಂಗ್ಸ್ ಆಡಿದ ರೀತಿ ನನಗೆ ಸಂತೋಷ ತಂದಿದೆ. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಬ್ಯಾಟರ್ ಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಕೆಲವು ಹೊಡೆತಗಳನ್ನು ಮೊದಲೇ ನಿರ್ಧರಿಸಿ ಆಡಿದೆ, ಆದರೆ ಇವೆಲ್ಲ ಕಳೆದ ವರ್ಷದಲ್ಲಿ ಆಡಿದ ಹೊಡೆತಗಳು. 2022ರ ಫಾರ್ಮ್ ಮುಗಿದಿದೆ, 2023ರಲ್ಲಿ ಹೊಸ ಫಾರ್ಮ್ ಆರಂಭವಾಗುತ್ತದೆ. ಪಿಚ್ ಬ್ಯಾಟಿಂಗ್ ಮಾಡಲು ಉತ್ತಮವಾಗಿತ್ತು. ಬೌನ್ಸ್ ಇತ್ತು ಔಟ್‌ಫೀಲ್ಡ್ ವೇಗವಾಗಿತ್ತು" ಎಂದು ಶತಕ ಗಳಿಸಿದ ನಂತರ ಅಭಿಪ್ರಾಯ ಹಂಚಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications