IND vs SL: 2023ರ ವಿಶ್ವಕಪ್ ಮುನ್ನ ODI ತಂಡದಿಂದ ಶಿಖರ್ ಧವನ್ ಡ್ರಾಪ್; ಕ್ರಿಕೆಟ್ ಜೀವನ ಅಂತ್ಯ?

ಶ್ರೀಲಂಕಾ ವಿರುದ್ಧ 2023ರ ಭಾರತದ ಮೊದಲ ಏಕದಿನ ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಹೆಸರನ್ನು ಕೈಬಿಡಲಾಗಿದೆ.
ಕಳೆದ ಕೆಲವು ಅಂತರಾಷ್ಟ್ರೀಯ ಸರಣಿಗಳಲ್ಲಿ ಭಾರತ ಏಕದಿನ ತಂಡದ ಹಂಗಾಮಿ ನಾಯಕರಾಗಿದ್ದ ಶಿಖರ್ ಧವನ್, ಜನವರಿ 10ರಂದು ಪ್ರಾರಂಭವಾಗಲಿರುವ ಶ್ರೀಲಂಕಾ ಏಕದಿನ ಸರಣಿಗಾಗಿ ಭಾರತ ತಂಡದಿಂದ ಹೊರಗಿಡಲಾಗಿದೆ.
ಶಿಖರ್ ಧವನ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು ಮತ್ತು ಬಾಂಗ್ಲಾ ವಿರುದ್ಧ ಭಾರತ 2-1 ಅಂತರದ ಸರಣಿ ಸೋಲಿನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. 2015ರಲ್ಲಿ ಎಂಎಸ್ ಧೋನಿ ನಾಯಕತ್ವ ತಂಡ ಸೋತ ನಂತರ ನೆರೆಯ ದೇಶದಲ್ಲಿ ಭಾರತದ 2ನೇ ಬಾರಿ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿತು.
ಇನ್ನು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಗೊಂಡ ರೋಹಿತ್ ಶರ್ಮಾ ಬದಲಿಗೆ ಮೂರನೇ ಪಂದ್ಯದಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸಿದ್ದರು. ಈ ಅದ್ಭುತವಾದ ಪ್ರದರ್ಶನದ ನಂತರ, ಅನೇಕ ಕ್ರಿಕೆಟ್ ಪಂಡಿತರು ಇಶಾನ್ ಕಿಶನ್ ಅವರು ಫಾರ್ಮ್‌ನಿಂದ ಹೊರಗಿರುವ ಶಿಖರ್ ಧವನ್ ಅವರ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ರಿಷಭ್ ಪಂತ್ ಮತ್ತು ಶಿಖರ್ ಧವನ್ ಅವರನ್ನು ಕೈಬಿಟ್ಟು ಆಯ್ಕೆ ಸಮಿತಿಯು ಭಾರತ ತಂಡದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿದೆ. ಕೆಎಲ್ ರಾಹುಲ್ ಉಪಸ್ಥಿತಿಯ ನಡುವೆಯೂ ಹಾರ್ದಿಕ್ ಪಾಂಡ್ಯ ಅವರನ್ನು ಏಕದಿನ ತಂಡದ ಉಪನಾಯಕರನ್ನಾಗಿ ಅಯ್ಕೆ ಮಾಡಿದೆ.
ಇದಕ್ಕೂ ಮೊದಲು ಭಾರತದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಸಬಾ ಕರೀಮ್ ಅವರು ಭಾರತವು ಏಕದಿನ ತಂಡದೊಂದಿಗೆ ಮುಂದುವರಿಯಬೇಕಾದರೆ, ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಡಬೇಕಾಗುತ್ತದೆ ಎಂದು ಹೇಳಿದ್ದರು.
ಬಾಂಗ್ಲಾದೇಶದಲ್ಲಿ ಇಶಾನ್ ಕಿಶನ್ ದ್ವಿಶತಕ ಗಳಿಸಿದ ನಂತರ, ಶಿಖರ್ ಧವನ್ ಅವರ ಕ್ರಿಕೆಟ್ ಜೀವನ್ ಇಲ್ಲಿಗೆ ಅಂತ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ 2023ರ ಏಕದಿನ ವಿಶ್ವಕಪ್ ಮುನ್ನ ಸರಣಿಯಲ್ಲಿ ಸ್ಥಾನ ನೀಡದಿರುವುದು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ತೀರಾ ವಿರಳವೆನಿಸಿದೆ.

ಕಾಯಂ ನಾಯಕನ ಅನುಪಸ್ಥಿತಿಯಲ್ಲಿ ಹಲವಾರು ಏಕದಿನ ಸರಣಿಗಳಿಗೆ ನಾಯಕರಾಗಿದ್ದ ಶಿಖರ್ ಧವನ್ ಪ್ರಸ್ತುತ ಏಕದಿನ ಸ್ವರೂಪದಲ್ಲಿ 167 ಪಂದ್ಯಗಳಿಂದ 44.11ರ ಸರಾಸರಿಯಲ್ಲಿ 6793 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ 17 ಶತಕ ಮತ್ತು 39 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಐಸಿಸಿ ಟೂರ್ನಮೆಂಟ್‌ಗಳಲ್ಲಿ ಪ್ರಮುಖ ಆಟಗಾರನಾಗಿ ಹೆಸರುವಾಸಿಯಾಗಿರುವ ಶಿಖರ್ ಧವನ್, ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಅತ್ಯಂತ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಮತ್ತು 10 ಪಂದ್ಯಗಳಿಂದ 537 ರನ್ ಗಳಿಸಿದ್ದಾರೆ.
ಭಾರತ vs ಶ್ರೀಲಂಕಾ ಟಿ20 ಮತ್ತು ಏಕದಿನ ಸರಣಿ
ಭಾರತ vs ಶ್ರೀಲಂಕಾ 1ನೇ ಟಿ20: ಜನವರಿ 3ರಂದು ಮುಂಬೈನಲ್ಲಿ
ಭಾರತ vs ಶ್ರೀಲಂಕಾ 2ನೇ ಟಿ20: ಜನವರಿ 5ರಂದು ಪುಣೆಯಲ್ಲಿ
ಭಾರತ vs ಶ್ರೀಲಂಕಾ 3ನೇ ಟಿ20: ಜನವರಿ 7ರಂದು ರಾಜ್‌ಕೋಟ್‌ನಲ್ಲಿ
ಭಾರತ vs ಶ್ರೀಲಂಕಾ 1ನೇ ಏಕದಿನ: ಜನವರಿ 10ರಂದು ಗುವಾಹಟಿಯಲ್ಲಿ
ಭಾರತ vs ಶ್ರೀಲಂಕಾ 2ನೇ ಏಕದಿನ: ಜನವರಿ 12ರಂದು ಕೋಲ್ಕತ್ತಾದಲ್ಲಿ
ಭಾರತ vs ಶ್ರೀಲಂಕಾ 3ನೇ ಏಕದಿನ: ಜನವರಿ 15ರಂದು ತಿರುವನಂತಪುರದಲ್ಲಿ
ಶ್ರೀಲಂಕಾ ಸರಣಿಗೆ ಭಾರತ ಏಕದಿನ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications