ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಭಾರತ ವಿರುದ್ಧದ ಸರಣಿಗೆ ಶ್ರೀಲಂಕಾದ 20 ಸದಸ್ಯರ ಬಲಿಷ್ಠ ತಂಡ ಪ್ರಕಟ

IND vs SL: Sri Lanka Announced 20-member Squad For T20 And ODI Series Against India

2023ರ ಜನವರಿ 3ರಿಂದ ಪ್ರಾರಂಭವಾಗುವ ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ 20 ಸದಸ್ಯರ ಶ್ರೀಲಂಕಾ ತಂಡವನ್ನು ಬುಧವಾರ ಪ್ರಕಟಿಸಿಲಾಗಿದ್ದು, ಆಲ್‌ರೌಂಡರ್ ವನಿಂದು ಹಸರಂಗಾ ಶ್ರೀಲಂಕಾದ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

ಭಾರತ ಮತ್ತು ಶ್ರೀಲಂಕಾ ಮೂರು ಟಿ20 ಪಂದ್ಯಗಳನ್ನು ಆಡಲಿದ್ದು, ನಂತರ ಜನವರಿ 10ರಿಂದ 15ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಶೀಘ್ರದಲ್ಲಿಯೇ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ.

IND vs SL: 2023ರ ವಿಶ್ವಕಪ್ ಮುನ್ನ ODI ತಂಡದಿಂದ ಶಿಖರ್ ಧವನ್ ಡ್ರಾಪ್; ಕ್ರಿಕೆಟ್ ಜೀವನ ಅಂತ್ಯ?IND vs SL: 2023ರ ವಿಶ್ವಕಪ್ ಮುನ್ನ ODI ತಂಡದಿಂದ ಶಿಖರ್ ಧವನ್ ಡ್ರಾಪ್; ಕ್ರಿಕೆಟ್ ಜೀವನ ಅಂತ್ಯ?

ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿಯು ಮುಂಬರುವ ಸರಣಿಗಾಗಿ 20 ಸದಸ್ಯರ ತಂಡವನ್ನು ಬುಧವಾರ ಆಯ್ಕೆ ಮಾಡಿದೆ. ಶ್ರೀಲಂಕಾದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ರೋಶನ್ ರಣಸಿಂಘೆ ಅವರು ತಂಡಕ್ಕೆ ತಮ್ಮ ಅನುಮೋದನೆಯನ್ನು ನೀಡಿದರು.

ಭಾನುಕಾ ರಾಜಪಕ್ಸೆ ಮತ್ತು ನುವಾನ್ ತುಷಾರ ಟಿ20 ಸರಣಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದು, ನುವಾನಿಡು ಫೆರ್ನಾಂಡೋ ಮತ್ತು ಜೆಫ್ರಿ ವಾಂಡರ್ಸೆ ಏಕದಿನ ಸರಣಿಯಲ್ಲಿ ಮಾತ್ರ ಆಡಲಿದ್ದಾರೆ. ಏತನ್ಮಧ್ಯೆ, ಕುಸಾಲ್ ಮೆಂಡಿಸ್ ಅವರನ್ನು ಏಕದಿನ ಸರಣಿಗೆ ನಾಯಕ ದಸುನ್ ಶನಕ ಅವರ ಉಪನಾಯಕರನ್ನಾಗಿ ನೇಮಿಸಲಾಗಿದೆ.

ಭಾರತದ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಶ್ರೀಲಂಕಾ ತಂಡ

ಭಾರತದ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಶ್ರೀಲಂಕಾ ತಂಡ

ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಸದೀರ ಸಮರವಿಕ್ರಮ, ಕುಸಾಲ್ ಮೆಂಡಿಸ್, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗಾ, ಅಶೆನ್ ಬಂಡಾರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಚಾಮಿಕ ಕರುಣಾರತ್ನೆ, ದಿಲ್ಶಾನ್ ಮಧುಶಂಕ, ಕಸುನ್ ರಜಿತ, ನುವಾನಿಡು ಫೆರ್ನಾಂಡೋ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್, ಲಹಿರು ಕುಮಾರ, ನುವಾನ್ ತುಷಾರ.

ಡಿಸೆಂಬರ್ 27ರಂದು ಭಾರತ ಮುಂಬರುವ ಸರಣಿಗಾಗಿ ಟಿ20 ಮತ್ತು ಏಕದಿನ ತಂಡಗಳನ್ನು ಹೆಸರಿಸಿದೆ.

ಭಾರತ vs ಶ್ರೀಲಂಕಾ ಟಿ20 ಮತ್ತು ಏಕದಿನ ಸರಣಿ

ಭಾರತ vs ಶ್ರೀಲಂಕಾ ಟಿ20 ಮತ್ತು ಏಕದಿನ ಸರಣಿ

ಭಾರತ vs ಶ್ರೀಲಂಕಾ 1ನೇ ಟಿ20: ಜನವರಿ 3ರಂದು ಮುಂಬೈನಲ್ಲಿ

ಭಾರತ vs ಶ್ರೀಲಂಕಾ 2ನೇ ಟಿ20: ಜನವರಿ 5ರಂದು ಪುಣೆಯಲ್ಲಿ

ಭಾರತ vs ಶ್ರೀಲಂಕಾ 3ನೇ ಟಿ20: ಜನವರಿ 7ರಂದು ರಾಜ್‌ಕೋಟ್‌ನಲ್ಲಿ

ಭಾರತ vs ಶ್ರೀಲಂಕಾ 1ನೇ ಏಕದಿನ: ಜನವರಿ 10ರಂದು ಗುವಾಹಟಿಯಲ್ಲಿ

ಭಾರತ vs ಶ್ರೀಲಂಕಾ 2ನೇ ಏಕದಿನ: ಜನವರಿ 12ರಂದು ಕೋಲ್ಕತ್ತಾದಲ್ಲಿ

ಭಾರತ vs ಶ್ರೀಲಂಕಾ 3ನೇ ಏಕದಿನ: ಜನವರಿ 15ರಂದು ತಿರುವನಂತಪುರದಲ್ಲಿ

ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ

ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ

ಶ್ರೀಲಂಕಾ ಸರಣಿಗೆ ಭಾರತ ಏಕದಿನ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

Story first published: Wednesday, December 28, 2022, 18:16 [IST]
Other articles published on Dec 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X