IND vs SL: ತಮ್ಮ 3ನೇ ಟಿ20 ಶತಕದೊಂದಿಗೆ ಸೂರ್ಯಕುಮಾರ್ ಯಾದವ್ ಸ್ಥಾಪಿಸಿದ ದಾಖಲೆಗಳಿವು

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 91 ರನ್‌ಗಳ ಪ್ರಚಂಡ ಗೆಲುವು ಸಾಧಿಸಿತು. ಇದೇ ವೇಳೆ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಭಾರತ ಗೆದ್ದುಕೊಂಡಿತು.
ಸೂರ್ಯಕುಮಾರ್ ಯಾದವ್ ಅವರು 51 ಎಸೆತಗಳಲ್ಲಿ ಅಜೇಯ 112 ರನ್‌ಗಳ ಪಂದ್ಯ ವಿಜೇತ ಪ್ರದರ್ಶನ ನೀಡಿದರು. ತಮ್ಮ ಮೂರನೇ ಟಿ20 ಶತಕದೊಂದಿಗೆ ಭಾರತೀಯ ಸ್ಟಾರ್ ಬ್ಯಾಟರ್ ದಾಖಲೆಗಳ ಮೈಲುಗಲ್ಲು ಸ್ಥಾಪಿಸುವುದನ್ನು ಮುಂದುವರೆಸಿದರು.
ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಎದುರಿಸಿದ ಬಾಲ್‌ಗಳ ಪ್ರಕಾರ, ಚುಟುಕು ಕ್ರಿಕೆಟ್‌ನಲ್ಲಿ 1,500 ರನ್‌ಗಳನ್ನು ತಲುಪಿದ ವೇಗದ ಆಟಗಾರರೆನಿಸಿದರು.

ಸೂರ್ಯಕುಮಾರ್ ಯಾದವ್ ಕೇವಲ 843 ಎಸೆತಗಳಲ್ಲಿ 1,500 ರನ್
ಟಿ20 ಕ್ರಿಕೆಟ್‌ನಲ್ಲಿ ಈ ಹೆಗ್ಗುರುತನ್ನು ತಲುಪಲು ಸೂರ್ಯಕುಮಾರ್ ಯಾದವ್ ಕೇವಲ 843 ಎಸೆತಗಳನ್ನು ತೆಗೆದುಕೊಂಡರು, ಇದು ಇತರ ಆಟಗಾರರಿಗಿಂತ ವೇಗವಾಗಿ 1,500 ರನ್ ಗಳಿಸಿದರು. ಇನ್ನು ಇನ್ನಿಂಗ್ಸ್‌ಗೆ ಸಂಬಂಧಿಸಿದಂತೆ ಟಿ20 ಪಂದ್ಯಗಳಲ್ಲಿ 1,500 ರನ್‌ಗಳ ಗಡಿಯನ್ನು ತಲುಪಿದ ಮೂರನೇ ಅತಿ ವೇಗದ ಆಟಗಾರರಾದರು.
ಈ ಮೈಲುಗಲ್ಲನ್ನು ತಲುಪಿದ ವೇಗದ ಬ್ಯಾಟರ್‌ಗಳೆಂದರೆ ಭಾರತೀಯ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಆಸ್ಟ್ರೇಲಿಯಾದ ಅನುಭವಿ ಆರೋನ್ ಫಿಂಚ್ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರು ಟಿ20 ಪಂದ್ಯಗಳಲ್ಲಿ 1,500 ರನ್ ಗಳಿಸಲು 39 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ 43 ಇನ್ನಿಂಗ್ಸ್‌ಗಳಲ್ಲಿ 1,500 ರನ್
ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 42 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು ಮತ್ತು ಸೂರ್ಯಕುಮಾರ್ ಯಾದವ್ 43 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.
ಇದೇ ವೇಳೆ ಸ್ಫೋಟಕ ಸೂರ್ಯಕುಮಾರ್ ಯಾದವ್ 150 ಅಥವಾ ಅದಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನೊಂದಿಗೆ 1,500 ರನ್ ಹೆಗ್ಗುರುತನ್ನು ತಲುಪಿದ ಮೊದಲ ಆಟಗಾರನಾದರು.

ಟಿ20 ಸ್ವರೂಪದಲ್ಲಿ ಮೂರು ಶತಕಗಳು ಮತ್ತು 13 ಅರ್ಧ ಶತಕ
ಸೂರ್ಯಕುಮಾರ್ 45 ಪಂದ್ಯಗಳ 43 ಇನ್ನಿಂಗ್ಸ್‌ಗಳಲ್ಲಿ ಅವರು 46.41 ಸರಾಸರಿಯಲ್ಲಿ 180.34ರ ಸ್ಟ್ರೈಕ್‌ರೇಟ್‌ನೊಂದಿಗೆ 1,578 ರನ್ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ ಮೂರು ಶತಕಗಳು ಮತ್ತು 13 ಅರ್ಧ ಶತಕಗಳನ್ನು ಬಾರಿಸಿದ್ದಾರೆ ಮತ್ತು ಅತ್ಯುತ್ತಮ ವೈಯಕ್ತಿಕ ಸ್ಕೋರ್ 117 ರನ್ ಆಗಿದೆ.
ಸೂರ್ಯಕುಮಾರ್ ಯಾದವ್ ಅವರು ಟಿ20 ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್‌ನಿಂದ ಎರಡನೇ ವೇಗದ ಶತಕವನ್ನು ಸಿಡಿಸಿದರು. ಕಡಿಮೆ ಸ್ವರೂಪದಲ್ಲಿ ಸೂರ್ಯಕುಮಾರ್ ತಮ್ಮ ಮೂರನೇ ಶತಕವನ್ನು ಬಾರಿಸಲು ಕೇವಲ 45 ಎಸೆತಗಳನ್ನು ತೆಗೆದುಕೊಂಡರು.

35 ಎಸೆತಗಳಲ್ಲಿ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ
2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ ಅವರು ಟಿ20 ಪಂದ್ಯದಲ್ಲಿ ಭಾರತದ ಪರ ವೇಗದ ಶತಕ ದಾಖಲಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಈಗ ಟಿ20 ಪಂದ್ಯಗಳಲ್ಲಿ ಜಂಟಿ ಎರಡನೇ ಅತಿ ಹೆಚ್ಚು ಶತಕಗಳನ್ನು ಹೊಂದಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ನಾಲ್ಕು ಟಿ20 ಶತಕಗಳನ್ನು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಂತರ ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನ್ಯೂಜಿಲೆಂಡ್‌ನ ಕಾಲಿನ್ ಮುನ್ರೊ ತಲಾ ಮೂರು ಶತಕಗಳನ್ನು ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications