IND vs WI 1st ODI: ಇಶಾನ್ vs ಸ್ಯಾಮ್ಸನ್ ನಡುವೆ ಯಾರಿಗೆ ಚಾನ್ಸ್?; ಉಭಯ ತಂಡಗಳ ಸಂಭಾವ್ಯ 11ರ ಬಳಗ
ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ಭಾರತ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ತಮ್ಮ ಗೆಲುವಿನ ಓಟವನ್ನು ಪ್ರಾರಂಭಿಸಲಿದೆ. ಇದಕ್ಕೂ ಮುನ್ನ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿತು. ಇನ್ನು ವೆಸ್ಟ್ ಇಂಡೀಸ್ ವಿರುದ್ಧ 2006ರಿಂದ ಇದುವರೆಗೆ ಏಕದಿನ ಸರಣಿಯನ್ನು ಭಾರತ ಸೋತಿಲ್ಲ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ 15 ಆಟಗಾರರನ್ನು ಅಂತಿಮಗೊಳಿಸಲು ಅತ್ಯುತ್ತಮ ಸಂಯೋಜನೆಯನ್ನು ಕಂಡುಕೊಳ್ಳಲು ಸಜ್ಜಾಗಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ. ಅದು ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್.
ಟಿ20 ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಗಳಿಸಿದ ನಂತರ ಏಕದಿನ ಸ್ವರೂಪದಲ್ಲಿ ತಿಣುಕಾಡುತ್ತಿರುವ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಅಥವಾ ಸ್ಯಾಮ್ಸನ್ ಅವರಲ್ಲಿ ಒಬ್ಬರು ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಶಾನ್ ಕಿಶನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರು ಮತ್ತು ಟ್ರಿನಿಡಾಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಗಳಿಸಿದರು.
ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಮೂವರು ಆಲ್‌ರೌಂಡರ್‌ಗಳೊಂದಿಗೆ ಆಡುವ ಸಾಧ್ಯತೆಯಿದೆ. ಉಪನಾಯಕ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಇರಲಿದ್ದಾರೆ. ಇನ್ನು ವೇಗಿ ಉಮ್ರಾನ್ ಮಲಿಕ್ ಮೊದಲ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಮೊಹಮ್ಮದ್ ಸಿರಾಜ್ ಜೊತೆಗಾರನಾಗಿ ಏಕದಿನ ತಂಡಕ್ಕೆ ಮರಳಬಹುದು.
ಉಮ್ರಾನ್ ಮಲಿಕ್ ಹೊರತಾಗಿ ಜಯದೇವ್ ಉನಾದ್ಕಟ್ ಮತ್ತು ಮುಖೇಶ್ ಕುಮಾರ್ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿದ್ದಾರೆ. ಇನ್ನು ಕುಲದೀಪ್ ಯಾದವ್ ಭಾರತದ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಆಗುವ ಸಾಧ್ಯತೆ ಇದೆ. ಇದಾದಲ್ಲಿ ಯುಜ್ವೇಂದ್ರ ಚಹಾಲ್ ಬೆಂಚ್ ಕಾಯಿಸಬೇಕಾಗುತ್ತದೆ.
ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಲೈನ್‌ಅಪ್ ಹೊಸ ಲುಕ್ ಪಡೆದುಕೊಂಡಿದೆ. ಬಿಗ್ ಹಿಟ್ಟರ್ ಶಿಮ್ರಾನ್ ಹೆಟ್ಮೆಯರ್ ಮತ್ತು ಒಶಾನೆ ಥಾಮಸ್ ತಂಡಕ್ಕೆ ಮರಳಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಗೆ ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಅಲಭ್ಯವಾಗಿರಾಗಿದ್ದಾರೆ.
ಕಳೆದ ತಿಂಗಳು ಜಿಂಬಾಬ್ವೆಯಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಸೋತ ನಂತರ ವೆಸ್ಟ್ ಇಂಡೀಸ್ ತಂಡಕ್ಕೆ ಗುಡಾಕೇಶ್ ಮೋಟಿ, ಯಾನಿಕ್ ಕ್ಯಾರಿಯಾ ಮತ್ತು ಜೇಡನ್ ಸೀಲ್ಸ್ ಹೊಸ ಮುಖಗಳಾಗಿ ಪ್ರವೇಶ ಪಡೆದಿದ್ದಾರೆ.
ಭಾರತ vs ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್/ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಜಯದೇವ್ ಉನದ್ಕತ್.
ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಕೀಸಿ ಕಾರ್ಟಿ, ಶಾಯ್ ಹೋಪ್ (ನಾಯಕ/ ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಕೆವಿನ್ ಸಿಂಕ್ಲೇರ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ/ಒಶಾನೆ ಥಾಮಸ್, ಜೇಡನ್ ಸೀಲ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications