IND vs WI 1st T20: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಈ ದಾಖಲೆಗಳ ಮೇಲೆ ಕಣ್ಣಿಟ್ಟ ಭಾರತೀಯರು!
ಗುರುವಾರ, ಆಗಸ್ಟ್ 3ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪರಸ್ಪರ ಸೆಣಸಲು ಸಜ್ಜಾಗಿವೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಭಾರತ ತಂಡ ಟಿ20 ಸರಣಿಗೆ ಪ್ರವೇಶಿಸಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈವರೆಗೆ 25 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 17 ಪಂದ್ಯಗಳಲ್ಲಿ ಗೆದ್ದಿದ್ದರೆ, ಕೆರಿಬಿಯನ್ ತಂಡ ಏಳು ಬಾರಿ ಗೆಲುವು ಸಾಧಿಸಿದೆ. 2009ರಲ್ಲಿ ಮಳೆಯಿಂದಾಗಿ ಒಂದು ಪಂದ್ಯ ರದ್ದಾಗಿತ್ತು.

ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ತಂಡ ಮೂರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂ, ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂ ಮತ್ತು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ಮುಂಬರುವ ಐದು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಭಾರತ vs ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯಲ್ಲಿ ದಾಖಲಾಗುವ ಮೈಲಿಗಲ್ಲುಗಳು
* ಟಿ20 ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಲು ಸಂಜು ಸ್ಯಾಮ್ಸನ್ ಅವರಿಗೆ 21 ರನ್‌ಗಳ ಅವಶ್ಯಕತೆ ಇದೆ. ಈ ಮೈಲುಗಲ್ಲು ಪೂರ್ಣಗೊಳಿಸಿದರೆ, ಈ ಸಾಧನೆ ಮಾಡಿದ 12ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

* ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನುಪೂರ್ಣಗೊಳಿಸಲು ಹಾರ್ದಿಕ್ ಪಾಂಡ್ಯ ಅವರು 2 ವಿಕೆಟ್‌ಗಳ ದೂರದಲ್ಲಿದ್ದಾರೆ. 4000ಕ್ಕೂ ಹೆಚ್ಚು ಟಿ20 ರನ್‌ಗಳು ಮತ್ತು 150ಕ್ಕೂ ಹೆಚ್ಚು ವಿಕೆಟ್‌ಗಳ ಡಬಲ್ ಧಮಾಕಾದೊಂದಿಗೆ ಮೊದಲ ಭಾರತೀಯ ಕ್ರಿಕೆಟಿಗನಾಗುವ ಗುರಿಯನ್ನು ಹೊಂದಿದ್ದಾರೆ.
* ಟಿ20 ಕ್ರಿಕೆಟ್‌ನಲ್ಲಿ 100 ಟಿ20 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಯುಜ್ವೇಂದ್ರ ಚಹಾಲ್ 9 ವಿಕೆಟ್‌ಗಳ ಅಂತರದಲ್ಲಿದ್ದಾರೆ. ಅವರು ದೀಪ್ತಿ ಶರ್ಮಾ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯನಾಗಲಿದ್ದಾರೆ.
* ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಗಳಿಸಲು ಅರ್ಶ್‌ದೀಪ್ ಸಿಂಗ್ ಅವರಿಗೆ 9 ವಿಕೆಟ್‌ಗಳ ಅವಶ್ಯಕತೆ ಇದೆ. ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಜೂಲನ್ ಗೋಸ್ವಾಮಿ ನಂತರ ಈ ಸಾಧನೆ ಮಾಡಿದ ಐದನೇ ಭಾರತೀಯ ವೇಗಿ ಎನಿಸಿಕೊಳ್ಳಲಿದ್ದಾರೆ.
* ಕುಲದೀಪ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಗಳಿಸಲು 4 ವಿಕೆಟ್‌ಗಳ ಅಂತರದಲ್ಲಿದ್ದಾರೆ. ಕುಲದೀಪ್ ಟಿ20ಯಲ್ಲಿ ವೇಗವಾಗಿ 50 ವಿಕೆಟ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೊದಲು ಯುಜ್ವೇಂದ್ರ ಚಹಾಲ್ 34 ಪಂದ್ಯಗಳಲ್ಲಿ 50 ವಿಕೆಟ್ ಮೈಲಿಗಲ್ಲು ತಲುಪಿರುವ ದಾಖಲೆ ಹೊಂದಿದ್ದಾರೆ.
* ಅಕ್ಷರ್ ಪಟೇಲ್ ಟಿ20 ಕ್ರಿಕೆಟ್‌ನಲ್ಲಿ 2500 ರನ್ ಪೂರೈಸಲು 80 ರನ್‌ಗಳ ದೂರದಲ್ಲಿದ್ದಾರೆ. ಅಕ್ಷರ್ ಈ ಸಾಧನೆ ಮಾಡಿದರೆ, ರವೀಂದ್ರ ಜಡೇಜಾ ನಂತರ 2500 ಟಿ20 ರನ್‌ಗಳು ಮತ್ತು 150 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಗಳಿಸಿದ ಎರಡನೇ ಕ್ರಿಕೆಟಿಗನಾಗಲಿದ್ದಾರೆ.
* ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ 2000 ರನ್ ಪೂರ್ಣಗೊಳಿಸಲು 325 ರನ್‌ಗಳ ಅವಶ್ಯಕತೆ ಇದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ನಂತರ ಈ ಸಾಧನೆ ಮಾಡಿದ 7ನೇ ಭಾರತೀಯ ಆಟಗಾರನಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications