IND vs WI: ತಂದೆ-ಮಗನ ಜೊತೆ ಆಟ; ಸಚಿನ್ ತೆಂಡೂಲ್ಕರ್ ವಿಶೇಷ ಸಾಧನೆ ಸರಿಗಟ್ಟಲಿದ್ದಾರೆ ವಿರಾಟ್ ಕೊಹ್ಲಿ
ಭಾರತ ತಂಡದ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಸಾಧಿಸಿದ ವಿಶಿಷ್ಟ ಸಾಧನೆಯನ್ನು ಸರಿಗಟ್ಟಲು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.
ಭಾರತದ ಹೊರಗೆ ಟೆಸ್ಟ್ ಪಂದ್ಯದಲ್ಲಿ ತಂದೆ-ಮಗನ ವಿರುದ್ಧ ಆಡಿದ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಎರಡನೇ ಭಾರತೀಯ ಕ್ರಿಕೆಟಿಗನಾಗಲಿದ್ದಾರೆ.
2011ರ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ ಶಿವನಾರಾಯಣ್ ಚಂದ್ರಪಾಲ್ ವಿರುದ್ಧ ವಿರಾಟ್ ಕೊಹ್ಲಿ ಆಡಿದ್ದರು. ಇದೀಗ ಈ ಬಾರಿ ಕೊಹ್ಲಿ ಅವರು ಶಿವನಾರಾಯಣ್ ಚಂದ್ರಪಾಲ್ ಮಗ ಟಾಗೆನರೈನ್ ಚಂದ್ರಪಾಲ್ ಅವರ ವಿರುದ್ಧ ಆಡಲಿದ್ದಾರೆ.

2011ರಲ್ಲಿ ಆಸ್ಟ್ರೇಲಿಯಾದಲ್ಲಿ ಶಾನ್ ಮಾರ್ಷ್ ಅವರ ವಿರುದ್ಧ ಆಡಿದಾಗ ಸಚಿನ್ ತೆಂಡೂಲ್ಕರ್ ಈ ವಿಶೇಷ ಸಾಧನೆಯನ್ನು ಮಾಡಿದ್ದರು. 19 ವರ್ಷಗಳ ಹಿಂದೆ ಸಚಿನ್ ಅವರು ಶಾನ್ ಮಾರ್ಷ್ ತಂದೆ ಜೆಫ್ ಮಾರ್ಷ್ ವಿರುದ್ಧ ಆಡಿದ್ದರು.
ಜುಲೈ 12ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಬಹು ಮಾದರಿಯ ಸರಣಿಗೆ ಭಾರತ ತಂಡ ಸಜ್ಜಾಗಿದೆ. ಈ ಸರಣಿಯು ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಒಳಗೊಂಡಿದೆ.
ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೋಲಿನ ನಂತರ, ರೋಹಿತ್ ಶರ್ಮಾ ನಾಯಕತ್ವದ ತಂಡವು ಈ ಚಕ್ರವನ್ನು ಗೆಲುವಿನೊಂದಿಗೆ ಪ್ರಾರಂಭಿಸುವ ಗುರಿ ಹೊಂದಿದೆ.
ಸರಣಿಯ ಮೊದಲ ಟೆಸ್ಟ್ ಪಂದ್ಯ ಬುಧವಾರದಿಂದ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಕೆರಿಬಿಯನ್ ನಾಡಿನಲ್ಲಿ ಆಡಿದ ಕೆಲವು ನೆಚ್ಚಿನ ನೆನಪುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ವೆಸ್ಟ್ ಇಂಡೀಸ್ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ಅವರನ್ನು ಹೇಗೆ ಭೇಟಿಯಾದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

"ನನ್ನ ನೆಚ್ಚಿನ ನೆನಪು ನಿಸ್ಸಂಶಯವಾಗಿ ಆಂಟಿಗುವಾ ಆಗಿದೆ. ನಾನು ಆಂಟಿಗುವಾದಲ್ಲಿ ಸರ್ ವಿವಿಯನ್ ರಿಚರ್ಡ್ಸ್ ಅವರ ಮುಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ನನ್ನ ಮೊಟ್ಟಮೊದಲ ದ್ವಿಶತಕ ಗಳಿಸಿದೆ. ಅದು ನನಗೆ ಬಹಳ ವಿಶೇಷವಾದ ಕ್ಷಣವಾಗಿತ್ತು ಮತ್ತು ನಂತರ ರಿಚರ್ಡ್ಸ್ ಸಂಜೆ ನನ್ನನ್ನು ಭೇಟಿಯಾಗಿ ಅಭಿನಂದಿಸಿದರು. ಅದಕ್ಕಿಂತ ಉತ್ತಮವಾದದ್ದನ್ನು ಪಡೆಯಲು ಸಾಧ್ಯವಿಲ್ಲ," ಎಂದು ಸ್ಟಾರ್ ಸ್ಪೋರ್ಟ್ಸ್‌ನ ಫಾಲೋ ದಿ ಬ್ಲೂಸ್ ಶೋನಲ್ಲಿ ವಿರಾಟ್ ಕೊಹ್ಲಿ ಮೆಲುಕು ಹಾಕಿದರು.
ಕೆರಿಬಿಯನ್ ಪಿಚ್‌ಗಳಲ್ಲಿ ಭಾರತೀಯ ಬ್ಯಾಟಿಂಗ್ ಕ್ರಮಾಂಕ ಉತ್ತಮ ದಾಖಲೆ ಹೊಂದಿದೆ. ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಪುನರಾಗಮನ ಮಾಡಿರುವ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡುವ ಅಗತ್ಯತೆ ಇದೆ.
ವಿರಾಟ್ ಕೊಹ್ಲಿ ಹೆಸರಿಗೆ ತಕ್ಕಂತೆ ದೊಡ್ಡ ಇನ್ನಿಂಗ್ಸ್ ಆಡಬೇಕಿದೆ. ಟೆಸ್ಟ್ ಮಾದರಿಯಲ್ಲಿ ಇತ್ತೀಚಿಗೆ ಅವರಿಂದ ಹೆಚ್ಚಿನ ರನ್‌ಗಳು ಬಂದಿಲ್ಲ. ವೆಸ್ಟ್ ಇಂಡೀಸ್ ವೇಗಿಗಳು ಆಫ್-ಸ್ಟಂಪ್ ಹೊರಗೆ ಹಾಕಿ ವಿರಾಟ್ ಕೊಹ್ಲಿಯ ದೌರ್ಬಲ್ಯಗಳನ್ನು ಬಳಸಿಕೊಳ್ಳಬಹುದು ಮತ್ತು ಕಡಿಮೆ ರನ್‌ಗಳ ಸರಪಳಿ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಲಿದೆ.
ಕಳೆದ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಇಬ್ಬರೂ 30ಕ್ಕಿಂತ ಕಡಿಮೆ ಸರಾಸರಿ ಹೊಂದಿದ್ದಾರೆ. ಆದರೆ ಸೌರಾಷ್ಟ್ರ ಬ್ಯಾಟರ್ ಚೇತೇಶ್ವರ ಪೂಜಾರ ಮಾತ್ರ ಟೀಕೆಗಳನ್ನು ಎದುರಿಸಿದರು ಮತ್ತು ಅಂತಿಮವಾಗಿ ಭಾರತ ತಂಡದಿಂದ ಹೊರಹಾಕಲ್ಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications