Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs WI: ತಿಲಕ್ ವರ್ಮಾ ತನ್ನ ಚೊಚ್ಚಲ ಟಿ20 ಅರ್ಧಶತಕ ಅರ್ಪಿಸಿದ್ದು ಯಾರಿಗೆ?

ಭಾನುವಾರ, ಆಗಸ್ಟ್ 6ರಂದು ಗಯಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಎರಡು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಐದು ಪಂದ್ಯಗಳ ಸರಣಿಯಲ್ಲಿ 0-2 ಅಂತರದ ಹಿನ್ನಡೆಯಲ್ಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 152 ರನ್ ಗಳಿಸಿತು. ನಂತರ, ನಿಕೋಲಸ್ ಪೂರನ್ 40 ಎಸೆತಗಳಲ್ಲಿ 67 ರನ್‌ಗಳ ಸಹಾಯದಿಂದ ವೆಸ್ಟ್ ಇಂಡೀಸ್ ಕೇವಲ 18.5 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು.

ಭಾರತದ ಇಡೀ ಬ್ಯಾಟಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡಿದರೂ, ತಂಡದ ಪರ ಕ್ರೀಸ್‌ನಲ್ಲಿ ನಿಂತು ಅರ್ಧಶತಕ ಗಳಿಸಿ ಪ್ರವಾಸಿ ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣವಾಗಿದ್ದು ಯುವ ಬ್ಯಾಟರ್ ತಿಲಕ್ ವರ್ಮಾ.

ind-vs-wi-2nd-t20

ತನ್ನ ಎರಡನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ತಿಲಕ್ ವರ್ಮ ಅವರು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತನ್ನ ಮೇಲೆ ನಂಬಿಕೆಯನ್ನು ಇಟ್ಟಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. 20 ವರ್ಷದ ಬ್ಯಾಟರ್ ತಿಲಕ್ ವರ್ಮ ಅವರು ರೋಹಿತ್ ಒಮ್ಮೆ ತನ್ನನ್ನು 'ಆಲ್-ಫಾರ್ಮ್ಯಾಟ್' ಆಟಗಾರ ಎಂದು ಕರೆದಿದ್ದರು ಎಂದು ತಿಳಿಸಿದ್ದರು.

"ನನ್ನ ಸ್ಪೂರ್ತಿ ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾ. ನಾನು ರೋಹಿತ್ ಭಾಯ್ ಜೊತೆ ಹೆಚ್ಚು ಸಮಯ ಕಳೆಯುತ್ತೇನೆ. ನನ್ನ ಮೊದಲ ಐಪಿಎಲ್‌ನಲ್ಲಿ ತಿಲಕ್ ನೀವು ಎಲ್ಲಾ ಮಾದರಿಯ ಕ್ರಿಕೆಟಿಗ ಎಂದು ಅವರು ನನಗೆ ಹೇಳಿದ್ದರು. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅವರ ಮಾರ್ಗದರ್ಶನ ನನಗೆ ದೊಡ್ಡದಾಗಿದೆ," ಎಂದು ತಿಲಕ್ ವರ್ಮಾ ಸುದ್ದಿಗಾರರಿಗೆ ತಿಳಿಸಿದರು.

"ರೋಹಿತ್ ಶರ್ಮಾ ನನಗೆ ದೊಡ್ಡ ಬೆಂಬಲವಾಗಿದ್ದಾರೆ. ಅವರು ಯಾವಾಗಲೂ ನನ್ನೊಂದಿಗೆ ಮಾತನಾಡುತ್ತಾರೆ ಮತ್ತು ಆಟವನ್ನು ಆನಂದಿಸಲು ನನಗೆ ಹೇಳುತ್ತಾರೆ. ನನಗೆ ಐಪಿಎಲ್ ದೊಡ್ಡ ತಿರುವು ನೀಡಿದೆ. ಅಲ್ಲಿನ ಪ್ರದರ್ಶನ ಭಾರತ ತಂಡಕ್ಕಾಗಿ ಆಡಲು ನನಗೆ ಸಹಾಯ ಮಾಡಿದೆ. ನಾನು ಅದನ್ನು ಮುಂದುವರಿಸಲು ಬಯಸುತ್ತೇನೆ," ಎಂದು ತಿಲಕ್ ವರ್ಮಾ ಹೇಳಿದರು.

ind-vs-wi-2nd-t20

ಅಲ್ಜಾರಿ ಜೋಸೆಫ್ ಎಸೆತದಲ್ಲಿ ಥರ್ಡ್ ಮ್ಯಾನ್‌ನಲ್ಲಿ ಶುಭ್ಮನ್ ಗಿಲ್ ಅವರ ಕ್ಯಾಚ್ ಪಡೆದ ನಂತರ ತಿಲಕ್ ವರ್ಮಾ ನಾಲ್ಕನೇ ಓವರ್‌ನಲ್ಲಿ ಮೈದಾನಕ್ಕೆ ಬಂದರು ಮತ್ತು ಸೂರ್ಯಕುಮಾರ್ ಯಾದವ್ ತಮ್ಮ 50ನೇ ಟಿ20 ಪಂದ್ಯವನ್ನು ಆಡುತ್ತಿರುವಾಗ, ಕೈಲ್ ಮೇಯರ್ಸ್ ಅವರ ಥ್ರೋನಿಂದ ರನೌಟ್ ಆಗಿ 18 ರನ್‌ಗಳಾಗಿದ್ದಾಗ ಪೆವಿಲಿಯನ್ ಸೇರಿದರು.

ಇಶಾನ್ ಕಿಶನ್ ಅವರೊಂದಿಗೆ ಮೂರನೇ ವಿಕೆಟ್‌ಗೆ ತಿಲಕ್ ವರ್ಮಾ 42 ರನ್ ಜೊತೆಯಾಟ ನೀಡಿದರು. ಆರಂಭಿಕ ಬ್ಯಾಟರ್ ಕಿಶನ್ ರೊಮಾರಿಯೊ ಶೆಫರ್ಡ್ ಬೌಲಿಂಗ್‌ನಲ್ಲಿ 27 ರನ್ ಗಳಿಸಿದ್ದಾಗ ಔಟಾದರು.

ನಂತರ ಸಂಜು ಸ್ಯಾಮ್ಸನ್ ಕಳಪೆಯಾಗಿ ಸ್ಟಂಪ್ಡ್ ಔಟ್ ಆದರು. ತಿಲಕ್ ವರ್ಮಾ ಔಟಾಗುವ ಮುನ್ನ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 51 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 24 ರನ್ ಗಳಿಸಿ ಭಾರತ ತಂಡ 150ರ ಗಡಿ ದಾಟಲು ನೆರವಾದರು.

ವೆಸ್ಟ್ ಇಂಡೀಸ್‌ನ ಯಾವುದೇ ಬೌಲರ್‌ಗಳು 29 ರನ್‌ಗಳಿಗಿಂತ ಹೆಚ್ಚು ನೀಡಲಿಲ್ಲ. ರೊಮಾರಿಯೋ ಶೆಫರ್ಡ್, ಅಲ್ಝಾರಿ ಜೋಸೆಫ್ ಮತ್ತು ಅಕಿಲ್ ಹೊಸೈನ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

Story first published: Tuesday, August 8, 2023, 9:01 [IST]
Other articles published on Aug 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+