IND vs WI 3rd ODI: ಭಾರತಕ್ಕೆ ಭರ್ಜರಿ ಜಯ; ವೆಸ್ಟ್ ಇಂಡೀಸ್‌ನಲ್ಲಿ ಚೊಚ್ಚಲ ಕ್ಲೀನ್‌ಸ್ವೀಪ್ ಗರಿ

1983ರಲ್ಲಿ ಕೆರಿಬಿಯನ್‌ನಲ್ಲಿ ದ್ವಿಪಕ್ಷೀಯ ಏಕದಿನ ಪಂದ್ಯಗಳನ್ನು ಆಡಲು ಪ್ರಾರಂಭಿಸಿದ ನಂತರ 39 ವರ್ಷಗಳಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಕ್ಲೀನ್ ಸ್ವೀಪ್ ಸಾಧಿಸಿದ ಭಾರತವು ಇತಿಹಾಸವನ್ನು ಬರೆದಿದೆ.
ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಬುಧವಾರ ನಡೆದ ಮೂರು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 3-0 ಅಂತರದಲ್ಲಿ ಸರಣಿ ಗೆದ್ದು, ಕ್ಲೀನ್ ಸ್ವೀಪ್ ಮಾಡಿದೆ. ಮೂರನೇ ಪಂದ್ಯದಲ್ಲಿ 257 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕೇವಲ 137 ರನ್‌ಗಳಿಗೆ ಆಲೌಟ್ ಆಯಿತು.
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ಗೆ ಭಾರತದ ವಿರುದ್ಧ 35 ಓವರ್‌ಗಳಲ್ಲಿ 257 ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಿತ್ತು. ಭಾರತ 36 ಓವರ್‌ಗಳಲ್ಲಿ 3 ವಿಕೆಟ್‌ಗೆ 225 ರನ್ ಗಳಿಸಿದ್ದಾಗ ಮಳೆಯಿಂದಾಗಿ ಎರಡನೇ ಬಾರಿಗೆ ಪಂದ್ಯ ಸ್ಥಗಿತಗೊಂಡಿತ್ತು.
ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತ 35 ಓವರ್‌ಗಳಲ್ಲಿ 257 ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಗಿತ್ತು.

ಕೆರಿಬಿಯನ್ ನಾಡಿನಲ್ಲಿ ಇತಿಹಾಸ ಸೃಷ್ಟಿ
ಮೂರು ಅಥವಾ ಅದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನು ಒಳಗೊಂಡಿರುವ ವಿದೇಶ ಸರಣಿಯಲ್ಲಿ ವೆಸ್ಟ್ ಇಂಡೀಸ್ ಅನ್ನು ವೈಟ್‌ವಾಶ್ ಮಾಡಲು ಭಾರತಕ್ಕೆ ಎಂದಿಗೂ ಸಾಧ್ಯವಾಗಿರಲಿಲ್ಲ. ಈ ಹಿಂದೆ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ವೆಸ್ಟ್ ಇಂಡೀಸ್ ಅನ್ನು ಕ್ಲೀನ್ ಸ್ವೀಪ್ ಮಾಡಿದ್ದ ಮೆನ್ ಇನ್ ಬ್ಲೂ ಬುಧವಾರ (ಜುಲೈ 27) ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.
ಯುಜ್ವೇಂದ್ರ ಚಾಹಲ್ ಅವರ 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಭಾರತ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಹೀಗಾಗಿ ಭಾರತ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು 119 ರನ್‌ಗಳಿಂದ (ಡಿಎಲ್‌ಎಸ್) ಸೋಲಿಸಿತು.

2 ರನ್‌ಗಳಿಂದ ಚೊಚ್ಚಲ ಏಕದಿನ ಶತಕ ಮಿಸ್ ಮಾಡಿಕೊಂಡ ಗಿಲ್
ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ (42) ಮತ್ತು ನಿಕೋಲಸ್ ಪೂರನ್ (42) ಬಿಟ್ಟರೆ ಉಳಿದವರಾರು ಭಾರತದ ಬೌಲಿಂಗ್‌ಗೆ ಪ್ರತಿರೋಧ ತೋರಲಿಲ್ಲ. ಭಾರತ ಪರ ಯುಜ್ವೇಂದ್ರ ಚಾಹಲ್ 4 ವಿಕೆಟ್, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದು ಗೆಲುವಿಗೆ ಕಾರಣರಾದರು.
ಇದಕ್ಕೂ ಮೊದಲು ಭಾರತ 36 ಓವರ್‌ಗಳಲ್ಲಿ 3 ವಿಕೆಟ್‌ಗೆ 225 ರನ್ ಗಳಿಸಿದ್ದಾಗ ಮಳೆಯಿಂದಾಗಿ ಎರಡನೇ ಬಾರಿಗೆ ಪಂದ್ಯ ಸ್ಥಗಿತಗೊಂಡಿತ್ತು. ಶುಭಮನ್ ಗಿಲ್ 98 ರನ್ ಗಳಿಸಿ ಅಜೇಯರಾಗುಳಿದರು ಮತ್ತು ಮಳೆಯಿಂದಾಗಿ ತಮ್ಮ ಚೊಚ್ಚಲ ಏಕದಿನ ಶತಕವನ್ನು ಮಿಸ್ ಮಾಡಿಕೊಂಡರು. ಭಾರತ ಮೂರನೇ ವಿಕೆಟ್ ಕಳೆದುಕೊಂಡ ನಂತರ ಸಂಜು ಸ್ಯಾಮ್ಸನ್- ಗಿಲ್ ಆಡುತ್ತಿದ್ದರು, ಭಾರತ 24 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು.

ವೆಸ್ಟ್ ಇಂಡೀಸ್‌ನಲ್ಲಿ ಕ್ಲೀನ್ ಸ್ವೀಪ್ ಮಾಡಿದ ಏಕೈಕ ನಾಯಕ ಧವನ್
ಮೂರನೇ ಪಂದ್ಯದ ಗೆಲುವು ಮತ್ತು ಸರಣಿ ಜಯದ ಅಪ್ರತಿಮ ಸಾಧನೆಯೊಂದಿಗೆ ಶಿಖರ್ ಧವನ್ ಕೆರಿಬಿಯನ್ ನಾಡಿನಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್ ಪೂರ್ಣಗೊಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಇದು ಜಿಂಬಾಬ್ವೆ (2013, 2015, 2016) ಮತ್ತು ಶ್ರೀಲಂಕಾ (2017) ನಲ್ಲಿ ಗೆದ್ದ ನಂತರ ಏಕದಿನ ಕ್ರಿಕೆಟ್‌ನಲ್ಲಿ ಭಾರತದ 13ನೇ ಕ್ಲೀನ್ ಸ್ವೀಪ್ ಮತ್ತು ವಿದೇಶದಲ್ಲಿ ಮೂರನೇ ಕ್ಲೀನ್ ಸ್ವೀಪ್ ಆಗಿದೆ.
ಇದಲ್ಲದೆ ಕ್ಯಾಲೆಂಡರ್ ವರ್ಷದಲ್ಲಿ ಒಂದು ತಂಡವನ್ನು ಡಬಲ್ ವೈಟ್‌ವಾಶ್ ಮಾಡಿದ ಮೂರನೇ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಗೌರವವನ್ನು ಹೊಂದಿರುವ ಇತರ ತಂಡಗಳು ಜಿಂಬಾಬ್ವೆ ಮತ್ತು ಬಾಂಗ್ಲಾದೇಶ. ಜಿಂಬಾಬ್ವೆ 2001ರಲ್ಲಿ ಬಾಂಗ್ಲಾದೇಶದ ವಿರುದ್ಧ ಈ ಸಾಧನೆಯನ್ನು ಸಾಧಿಸಿತ್ತು. ತವರಿನಲ್ಲಿ 4-0 ಮತ್ತು ವಿದೇಶದಲ್ಲಿ 3-0 ಅಂತರದ ಜಯ ಸಾಧಿಸಿತ್ತು. 2006ರಲ್ಲಿ ಬಾಂಗ್ಲಾದೇಶವು ಕೀನ್ಯಾವನ್ನು 3-0 ಅಂತರದಿಂದ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications