Ind vs WI 3rd ODI: ಭಾರತಕ್ಕೆ ಭರ್ಜರಿ ಗೆಲುವು, ವೆಸ್ಟ್ ಇಂಡೀಸ್‌ಗೆ ವೈಟ್‌ವಾಶ್ ಮುಖಭಂಗ

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 96 ರನ್‌ಗಳ ಗೆಲುವು ದಾಖಲಿಸಿದ್ದು, ವೆಸ್ಟ್ ಇಂಡೀಸ್ ವೈಟ್ ವಾಶ್ ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಭಾರತ ನೀಡಿದ್ದ 266 ರನ್‌ಗಳ ಗುರಿ ಬೆನ್ನತ್ತಿದ ವಿಂಡೀಸ್, ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯದಿಂದ 169 ರನ್‌ಗಳಿಗೆ ಆಲೌಟ್ ಆಗಿದೆ. ಪರಿಣಾಮ ಟೀಂ ಇಂಡಿಯಾ 96 ರನ್‌ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಏಕದಿನ ಸರಣಿಯನ್ನ 3-0 ಯಿಂದ ತನ್ನದಾಗಿಸಿಕೊಂಡಿದೆ.

ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿಂಡೀಸ್
ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿಂಡೀಸ್‌ಗೆ 266 ರನ್‌ಗಳ ಗುರಿ ನೀಡಿತ್ತು. ಆದರೆ ಈ ಬಾರಿಯೂ ಭಾರತದ ಬೌಲಿಂಗ್ ದಾಳಿಗೆ ಹಿಡಿತ ಸಾಧಿಸಲು ವಿಂಡಿಸ್‌ಗೆ ಸಾಧ್ಯವಾಗಲಿಲ್ಲ. 82 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಕುಸಿದ ವಿಂಡೀಸ್ ತಂಡಕ್ಕೆ ಮತ್ತೆ ಮರಳಲು ಸಾಧ್ಯವಾಗಲಿಲ್ಲ. ಓಡಿನ್ ಸ್ಮಿತ್ ಸ್ಫೋಟಕ 36 ರನ್ ಮತ್ತು ವಾಲ್ಟನ್ನರ ಹೋರಾಟದ ಮನೋಭಾವವು ಸೋಲಿನ ಪರಿಣಾಮವನ್ನು ತಗ್ಗಿಸಲು ಅವರಿಗೆ ಸಹಾಯ ಮಾಡಿತು. ಅಂತಿಮವಾಗಿ ವಿಂಡೀಸ್ 37.1 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟ್ ಆಗಿದೆ.
ಭಾರತ ಪರ ಮತ್ತೊಮ್ಮೆ ಮಿಂಚಿದ ಪ್ರಸಿದ್ಧ ಕೃಷ್ಣ 3 ವಿಕೆಟ್, ಮೊಹಮ್ಮದ್ ಸಿರಾಜ್ 3 ವಿಕೆಟ್, ಕುಲ್‌ದೀಪ್ ಯಾದವ್ ಮತ್ತು ದೀಪಕ್ ಚಹಾರ್ ತಲಾ 2 ವಿಕೆಟ್ ಪಡೆದಿದ್ದಾರೆ.

ಭಾರತಕ್ಕೆ ಆರಂಭಿಕ ಆಘಾತ, ಮತ್ತೆ ಕೈ ಕೊಟ್ಟ ಕೊಹ್ಲಿ
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ನಾಯಕ ರೋಹಿತ್ ಶರ್ಮಾ 13 ರನ್‌ಗಳಿಸಿದ್ದ ವೇಳೆ ಅಲ್ಜಾರಿ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದ್ರು. ಇದ್ರ ಬೆನ್ನಲ್ಲೇ ಅದೇ ಓವರ್‌ನಲ್ಲಿ ಕ್ರೀಸ್‌ಗಿಳಿದಿದ್ದ ವಿರಾಟ್ ಕೊಹ್ಲಿ ತಾನು ಎದುರಿಸಿದ ಎರಡನೇ ಎಸೆತದಲ್ಲೇ ಡಕೌಟ್ ಆದ್ರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಫ್ಲಾಪ್ ಶೋ ಮುಂದುವರಿಯಿತು.
ಇನ್ನು ಕೋವಿಡ್ ಪಾಸಿಟಿವ್ ಅಗಿ ಎರಡು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದ ಶಿಖರ್ ಧವನ್ ಕೂಡ ಉತ್ತಮ ಆಟವಾಡುವಲ್ಲಿ ಎಡವಿದ್ರು. ಕೇವಲ 10 ರನ್‌ಗೆ ಓಡಿಯನ್ ಸ್ಮಿತ್ ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಜೋಡಿ ಶತಕದ ಜೊತೆಯಾಟದ ಮೂಲಕ ಕುಸಿದಿದ್ದ ತಂಡಕ್ಕೆ ಆಧಾರವಾದ್ರು.

ನಾಲ್ಕನೇ ವಿಕೆಟ್‌ಗೆ ಪಂತ್-ಅಯ್ಯರ್ ಶತಕದ ಜೊತೆಯಾಟ
ರಿಷಭ್ ಪಂತ್ 54 ಎಸೆತಗಳಲ್ಲಿ 50 ರನ್ ಕಲೆಹಾಕಿ ಹೇಡನ್ ವಾಲ್ಷ್‌ಗೆ ವಿಕೆಟ್ ಒಪ್ಪಿಸಿದ್ರು. ಪಂತ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಈತನಿಗೆ ಸಾಥ್
, ಶ್ರೇಯಸ್ ಅಯ್ಯರ್ 111 ಎಸೆತಗಳಲ್ಲಿ 80 ರನ್‌ಗಳಿಸಿ ಔಟಾದ್ರು. ಇವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಇತ್ತು. ಈ ಇಬ್ಬರು ಆಟಗಾರರ 110 ರನ್‌ಗ ಜೊತೆಯಾಟ ಭಾರತಕ್ಕೆ ಚೇತರಿಸಿಕೊಳ್ಳಲು ಸಹಾಯವಾಗಿದೆ.
ಇವರಿಬ್ಬರ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ 6ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಆದ್ರೆ ಆಲ್‌ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ 33 ರನ್, ದೀಪಕ್ ಚಹಾರ್ 38 ರನ್‌ಗಳ ಅಮೂಲ್ಯ ಕೊಡುಗೆಯಿಂದ ಭಾರತ 250ರ ಗಡಿದಾಟಿತು. ದೀಪಕ್ ಚಹಾರ್ 38 ಎಸೆತಗಳಲ್ಲಿ 38 ರನ್ ಕಲೆಹಾಕಿದ್ದು, 4 ಬೌಂಡರಿ ಜೊತೆಗೆ ಎರಡು ಸಿಕ್ಸರ್ ಸಿಡಿಸಿದ್ರು. ವಾ. ಸುಂದರ್ ಎರಡು ಬೌಂಡರಿ ಮತ್ತು ಒಂದು ಅಮೋಘ ಸಿಕ್ಸರ್ ಸಿಡಿಸಿದ್ರು. ಅಂತಿಮವಾಗಿ ಭಾರತ 10 ವಿಕೆಟ್ ನಷ್ಟಕ್ಕೆ 265 ರನ್ ಕಲೆಹಾಕಿತು.

ರೋಹಿತ್ ನಾಯಕನಾದ ಮೇಲೆ ಎರಡನೇ ಕ್ಲೀನ್ ಸ್ವೀಪ್
ರೋಹಿತ್ ತಂಡದ ಖಾಯಂ ನಾಯಕನಾದ ನಂತರ ಮೊದಲ ಏಕದಿನ ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಭಾರತ ಕ್ಲೀನ್ ಸ್ವೀಪ್ ಮಾಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications