IND vs WI 3rd ODI: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಗೆಲುವು; 18 ವರ್ಷಗಳ ಹಳೆಯ ದಾಖಲೆ ಮುರಿದ ಭಾರತ!
ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 200 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬೆಂಚ್ ಕಾಯಿಸುವ ಅಪಾಯ ತೆಗೆದುಕೊಂಡರು. ವಿಶೇಷವಾಗಿ, ಎರಡನೇ ಏಕದಿನ ಪಂದ್ಯದ ಸೋಲಿನ ನಂತರ, ಆಲ್‌ರೌಂಡರ್ ಹಾಗೂ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ನಿರೀಕ್ಷೆಗೆ ತಕ್ಕಂತೆ ಆಡಿದ್ದರಿಂದ ಅಂತಿಮವಾಗಿ ಗೆಲುವಿನ ಫಲ ನೀಡಿತು.

ಆರಂಭಿಕರಾದ ಇಶಾನ್ ಕಿಶನ್ 77 ರನ್ ಮತ್ತು ಶುಭ್ಮನ್ ಗಿಲ್ 85 ರನ್ ಗಳಿಸುವ ಮೂಲಕ ಮೊದಲ ವಿಕೆಟ್‌ಗೆ 143 ರನ್‌ಗಳ ಬೃಹತ್ ಆರಂಭಿಕ ಜೊತೆಯಾಟ ನೀಡಿದರು. ನಂತರ ಸಂಜು ಸ್ಯಾಮ್ಸನ್ 51 ರನ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 70 ರನ್ ಗಳಿಸಿ ಭಾರತವನ್ನು 50 ಓವರ್‌ಗಳಲ್ಲಿ 5 ವಿಕೆಟ್‌ಗೆ 351 ರನ್ ಕಲೆಹಾಕಿತು.
ಪ್ರತ್ಯುತ್ತರವಾಗಿ, ಆತಿಥೇಯ ವೆಸ್ಟ್ ಇಂಡೀಸ್ ತಂಡ 35.3 ಓವರ್‌ಗಳಲ್ಲಿ ಕೇವಲ 151 ರನ್‌ಗಳಿಗೆ ಆಲೌಟ್ ಆಯಿತು. ಆದರೂ, ಬೃಹತ್ ಗೆಲುವಿನೊಂದಿಗೆ ಭಾರತ ತಂಡದ ಯಾವುದೇ ಆಟಗಾರ ಶತಕ ಬಾರಿಸದೆ ತಮ್ಮ ಗರಿಷ್ಠ ಏಕದಿನ ಮೊತ್ತವನ್ನು ದಾಖಲಿಸಿದೆ.
ಇದಕ್ಕೂ ಮೊದಲು 2005ರಲ್ಲಿ ಶ್ರೀಲಂಕಾ ವಿರುದ್ಧ ಭಾರತ 6 ವಿಕೆಟ್‌ಗೆ 350 ರನ್ ಗಳಿಸಿತ್ತು. ಆ ಸಂದರ್ಭದಲ್ಲಿಯೂ ಯಾವುದೇ ಬ್ಯಾಟರ್ ಶತಕ ಬಾರಿಸಿರಲಿಲ್ಲ. ಇದೀಗ 351 ರನ್ ಗಳಿಸಿದಾಗಲೂ ಯಾವುದೇ ಬ್ಯಾಟರ್ ಶತಕ ಬಾರಿಸಿಲ್ಲ. 18 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಲಾಗಿದೆ.
ಭಾರತದ ಪರ ವೈಯಕ್ತಿಕ ಶತಕ ಗಳಿಸಿದೆ ಗರಿಷ್ಠ ಏಕದಿನ ಮೊತ್ತ
2023: ವೆಸ್ಟ್ ಇಂಡೀಸ್ ವಿರುದ್ಧ 351/5 - ಟ್ರಿನಿಡಾಡ್
2005: ಶ್ರೀಲಂಕಾ ವಿರುದ್ಧ 350/6 - ನಾಗ್ಪುರ
2004: ಪಾಕಿಸ್ತಾನ ವಿರುದ್ಧ 349/7 - ಕರಾಚಿ
2004: ಬಾಂಗ್ಲಾದೇಶ ವಿರುದ್ಧ 348/5- ಢಾಕಾ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಆರಂಭಿಕರಾದ ಶುಭ್ಮನ್ ಗಿಲ್ 85 ರನ್ ಮತ್ತು ಇಶಾನ್ ಕಿಶನ್ 77 ರನ್ ಗಳಿಸುವ ಮೂಲಕ 143 ರನ್‌ಗಳ ಉತ್ತಮ ಜೊತೆಯಾಟ ನೀಡಿದ ಕಟ್ಟಿದ ಕಾರಣ ಭಾರತಕ್ಕೆ ಅದ್ಭುತ ಆರಂಭ ಸಿಕ್ಕಿತು.
ಬಳಿಕ ಸಂಜು ಸ್ಯಾಮ್ಸನ್ ಮತ್ತು ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಸಹ ಕ್ರಮವಾಗಿ 51 ಮತ್ತು ಅಜೇಯ 70 ರನ್ ಗಳಿಸಿದರು. ಇದು ಭಾರತ ಬೃಹತ್ ಮೊತ್ತ ಕಲೆಹಾಕಲು ನೆರವಾಯಿತು.
ಇನ್ನು ಚೇಸಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಕೇವಲ 35.3 ಓವರ್‌ಗಳಲ್ಲಿ 151 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಗುಡಾಕೇಶ್ ಮೋಟಿ ಅಜೇಯ 39 ರನ್ ಮತ್ತು ಅಲ್ಜಾರಿ ಜೋಸೆಫ್ 26 ರನ್ ಗಳಿಸುವ ಮೂಲಕ ಒಂಬತ್ತನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟದಿಂದ 150ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಶಾರ್ದೂಲ್ ಠಾಕೂರ್ 6.3 ಓವರ್‌ಗಳಲ್ಲಿ 37 ರನ್ ನೀಡಿ 4 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ 7 ಓವರ್‌ಗಳಲ್ಲಿ 30 ರನ್ ನೀಡಿ 3 ಪಡೆದು ಮಿಂಚಿದರು. ಕುಲದೀಪ್ ಯಾದವ್ 8 ಓವರ್‌ಗಳಲ್ಲಿ 25 ರನ್ ನೀಡಿ 2 ಕಬಳಿಸಿದರೆ, ಜಯದೇವ್ ಉನಾದ್ಕಟ್ 5 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications