ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಮೊದಲ ಪಂದ್ಯವನ್ನು ಭಾರತ ತಂಡ ಸುಲಭವಾಗಿ ಗೆದ್ದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆರು ವಿಕೆಟ್‌ಗಳ ಗೆಲುವಿನೊಂದಿಗೆ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿತು.

"ನೀವು ಸರಣಿಯನ್ನು ಪ್ರಯೋಗಗಳಿಗಾಗಿ ನೋಡುತ್ತಿದ್ದರೆ, ಬದಲಾವಣೆ ನಿಲ್ಲಿಸಬೇಡಿ. ನಾನು ಸಾಕಷ್ಟು ಕ್ರಿಕೆಟಿಗರನ್ನು ಪ್ರಯತ್ನಿಸಲಿದ್ದೇನೆ. ಇಲ್ಲದ ಆಟಗಾರರಿಗೆ ನಾವು ಅವಕಾಶಗಳನ್ನು ನೀಡುತ್ತಿದ್ದೇವೆ. ಮೊದಲ ಪಂದ್ಯದಲ್ಲಿ ಮಾಡಿದ್ದೀರಿ ಮತ್ತು ಎರಡನೇ ಪಂದ್ಯದಲ್ಲೂ ಮಾಡಿದ್ದೀರಿ. ಈ ಹಿಂದೆ ಹೆಚ್ಚಿನ ರನ್ ಗಳಿಸದ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ," ಎಂದು ಆಕಾಶ್ ಚೋಪ್ರಾ ಲೇವಡಿ ಮಾಡಿದ್ದಾರೆ.

ಮೂರನೇ ಏಕದಿನ ಪಂದ್ಯ ಮತ್ತು ಏಕದಿನ ಸರಣಿಯನ್ನು ಗೆಲ್ಲುವ ಅವಕಾಶವನ್ನು ತಂಡವು ಬಯಸಿದರೆ, ಭಾರತ ತಂಡದ ಮ್ಯಾನೇಜ್‌ಮೆಂಟ್ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ತಂಡಕ್ಕೆ ಮರಳಿ ಕರೆತರಬೇಕಾಗುತ್ತದೆ ಎಂದು ಆಕಾಶ್ ಚೋಪ್ರಾ ತಿಳಿಸಿದರು.
"ಮೂರನೇ ಪಂದ್ಯದಲ್ಲಿ ಅನುಭವಿಗಳು ಮರಳಿದರೆ, ಸಂಜು ಸ್ಯಾಮ್ಸನ್ ಅಥವಾ ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ನೀಡುವ ಮುನ್ಸೂಚನೆಯಾಗಿದೆ. ಇಬ್ಬರಲ್ಲಿ ಒಬ್ಬರು ಹೊರಗೆ ಕುಳಿತುಕೊಳ್ಳಬೇಕು. ಇನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಮತ್ತೊಂದು ಅವಕಾಶ ಸಿಗುವುದಿಲ್ಲ," ಎಂದು ಆಕಾಶ್ ಚೋಪ್ರಾ ಹೇಳಿದರು.
ಇದೇ ವೇಳೆ ಬೌಲಿಂಗ್ ವಿಭಾಗದಲ್ಲಿ 2ನೇ ಏಕದಿನ ಪಂದ್ಯದಲ್ಲಿ ಆಡಿಸಿದಂತೆ ಭಾರತ ತಂಡವು ಏಳು ಬೌಲರ್‌ಗಳನ್ನು ಬಳಸುವುದನ್ನು ನೋಡಲು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಿರಾಕರಿಸಿದರು.
"ಭಾರತ ತಂಡವು ಸಾಕಷ್ಟು ಬೌಲಿಂಗ್ ಆಯ್ಕೆಗಳನ್ನು ಹೊಂದಿದೆ. ವೇಗದ ಬೌಲರ್‌ಗಳಿಗೆ ಸಂಬಂಧಿಸಿದಂತೆ, ತಂಡದ ಬಳಿ ನಾಲ್ಕು ಆಯ್ಕೆಗಳು ಇವೆ. ಎರಡನೇ ಪಂದ್ಯದಲ್ಲಿ ಮೂವರು ವೇಗಿಗಳೊಂದಿಗೆ ಆಡಿದರು. ಬೌಲರ್ ಸ್ನೇಹಿ ಪಿಚ್‌ನಲ್ಲಿ ಏಕದಿನ ಪಂದ್ಯದಲ್ಲಿ ಆಡಲು ನಿಮಗೆ ಏಳು ಬೌಲಿಂಗ್ ಆಯ್ಕೆಗಳ ಅಗತ್ಯವಿಲ್ಲ," ಎಂದರು.
"ರನ್ ಗಳಿಸಲು ಕಷ್ಟಕರವಾಗಿರುವ ಮತ್ತು ಬೌಲರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಿಚ್‌ನಲ್ಲಿ, ನೀವು ಹೆಚ್ಚು ಬದಲಾಯಿಸುವ ಅಗತ್ಯವಿಲ್ಲ. ಆದರೆ ನೀವು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತೀರಾ? ಎಂದು ನೀವು ಖಚಿತಪಡಿಸಿಕೊಳ್ಳಬೇಕು," ಎಂದು ಆಕಾಶ್ ಚೋಪ್ರಾ ಕಿಡಿಕಾರಿದರು.
"ಉಮ್ರಾನ್ ಮಲಿಕ್ ಮೊದಲ ಮತ್ತು ಎರಡನೇ ಪಂದ್ಯಗಳಲ್ಲಿ ಕೇವಲ ಮೂರು ಓವರ್‌ಗಳನ್ನು ಬೌಲ್ ಮಾಡಿದರು. ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೇವಲ ಎರಡು ಓವರ್‌ಗಳನ್ನು ಮಾತ್ರ ಬೌಲ್ ಮಾಡಿದರು. ನೀವು ಆಯ್ಕೆ ಮಾಡುವ ಬೌಲರ್‌ಗಳಿಗೆ ಸಾಕಷ್ಟು ಓವರ್‌ಗಳನ್ನು ನೀಡಲು ನಿಮಗೆ ಸಾಧ್ಯವಾಗದಿದ್ದರೆ, ಬೌಲಿಂಗ್ ವಿಭಾಗದಲ್ಲಿ ಕಡಿತಗೊಳಿಸಿ, ಹೆಚ್ಚುವರಿ ಬ್ಯಾಟರ್‌ಗಳನ್ನು ಆಡಿಸಬಹುದು," ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.