For Quick Alerts
ALLOW NOTIFICATIONS  
For Daily Alerts
 

IND vs WI 5th T20: ಅಂತಿಮ ಪಂದ್ಯದಲ್ಲಿ ಸೋತ ಭಾರತ; ವೆಸ್ಟ್ ಇಂಡೀಸ್‌ಗೆ ಸರಣಿ ಗೆಲುವು

ಭಾನುವಾರ, ಆಗಸ್ಟ್ 13ರಂದು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧ ಆತಿಥೇಯ ವೆಸ್ಟ್ ಇಂಡೀಸ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 18 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ ನಿರ್ಣಾಯಕ ಪಂದ್ಯವನ್ನು ಗೆದ್ದಿದ್ದಲ್ಲದೆ, ಸರಣಿಯನ್ನು ವಶಪಡಿಸಿಕೊಂಡಿತು.

IND vs WI 5th T20: West Indies Beat India By 8 Wickets and Won The Series By 3-2

ವೆಸ್ಟ್ ಇಂಡೀಸ್ ತಂಡದ ಪರ ಬ್ರಾಂಡನ್ ಕಿಂಗ್ 55 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 85 ರನ್ ಬಾರಿಸಿ ಗೆಲುವಿನ ರೂವಾರಿಯಾದರು. ಇನ್ನು ಕೈಲ್ ಮೇಯರ್ಸ್ 10 ರನ್ ಗಳಿಸಿದರೆ, ನಿಕೋಲಸ್ ಪೂರನ್ 35 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಮೇತ 47 ರನ್ ಗಳಿಸಿದರು. ಅಂತಿಮವಾಗಿ ಶಾಯ್ ಹೋಪ್ 13 ಎಸೆತಗಳಲ್ಲಿ 22 ರನ್ ಬಾರಿಸಿದರು.

ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಮತ್ತು ತಿಲಕ್ ವರ್ಮಾ ತಲಾ ಒಂದೊಂದು ವಿಕೆಟ್ ಪಡೆದರು. ಯುಜ್ವೇಂದ್ರ ಚಹಾಲ್ 4 ಓವರ್‌ಗಳಲ್ಲಿ 51 ರನ್ ನೀಡಿ ದುಬಾರಿಯಾದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ 5 ರನ್, ಶುಭ್ಮನ್ ಗಿಲ್ 9 ರನ್ ಗಳಿಸಿ ಔಟಾದರು ಮತ್ತು ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

IND vs WI 5th T20: West Indies Beat India By 8 Wickets and Won The Series By 3-2

ನಂತರ ಬಂದ ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 61 ರನ್ ಗಳಿಸಿ ತಂಡದ ಪರ ಏಕೈಕ ಗರಿಷ್ಠ ಸ್ಕೋರರ್ ಎನಿಸಿದರು. ಇನ್ನು ತಿಲಕ್ ವರ್ಮಾ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 27 ರನ್ ಗಳಿಸಿದರು.

ಸಂಜು ಸ್ಯಾಮ್ಸನ್ 13 ರನ್, ನಾಯಕ ಹಾರ್ದಿಕ್ ಪಾಂಡ್ಯ 14 ರನ್, ಅಕ್ಷರ್ ಪಟೇಲ್ 13 ರನ್, ಅರ್ಶ್‌ದೀಪ್ ಸಿಂಗ್ 8 ರನ್, ಮುಖೇಶ್ ಕುಮಾರ್ 4 ರನ್ ಗಳಿಸಿ ತಂಡದ ಮೊತ್ತ 160ರ ಗಡಿ ದಾಟಲು ನೆರವಾದರು. ಆದರೆ, ಇದು ಆತಿಥೇಯ ತಂಡಕ್ಕೆ ಸವಾಲಿನ ಮೊತ್ತವೇ ಆಗಿರಲಿಲ್ಲ.

ವೆಸ್ಟ್ ಇಂಡೀಸ್ ತಂಡದ ಪರ ಬೌಲಿಂಗ್‌ನಲ್ಲಿ ರೊಮಾರಿಯೊ ಶೆಫರ್ಡ್ 4 ಓವರ್‌ಗಳಲ್ಲಿ 31 ರನ್ ನೀಡಿ 4 ವಿಕೆಟ್‌ ಪಡೆದು ಮಿಂಚಿದರೆ, ಅಕೇಲ್ ಹೊಸೈನ್ 2 ವಿಕೆಟ್, ಜೇಸನ್ ಹೋಲ್ಡರ್ 2 ವಿಕೆಟ್ ಮತ್ತು ರೋಸ್ಟನ್ ಚೇಸ್ ಒಂದು ವಿಕೆಟ್ ಪಡೆದು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

ರೊಮಾರಿಯೊ ಶೆಫರ್ಡ್ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನಿಕೋಲಸ್ ಪೂರನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Monday, August 14, 2023, 6:52 [IST]
Other articles published on Aug 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+