For Quick Alerts
ALLOW NOTIFICATIONS  
For Daily Alerts
 

'Fab 4'ನಿಂದ ಕೊಹ್ಲಿ ಹೊರಬಿದ್ದಿದ್ದಾರೆ ಎಂದಿದ್ದ ಆಕಾಶ್ ಚೋಪ್ರರಿಂದ ವಿರಾಟ್ ಬಗ್ಗೆ ಕುತೂಹಲಕಾರಿ ಭವಿಷ್ಯ!

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ನಾನಾ ರೀತಿಯ ಚರ್ಚೆಗಳು ವಿಶ್ಲೇಷಣೆಗಳು ನಡೆಯುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ತನ್ನದೇ ರೀತಿಯಲ್ಲಿ ಪಂದ್ಯದ ಕುರಿತಾಗಿ ನಿರೀಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಅವರ ಕುತೂಹಲಕಾರಿ ಹೇಳಿಕೆಯೊಂದು ಈಗ ಗಮನಸೆಳೆಯುತ್ತಿದೆ.

ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರ ಇತ್ತೀಚಿನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡುತ್ತಾ ವಿರಾಟ್ ಕೊಹ್ಲಿ ಈಗ ಪ್ರತಿಷ್ಠಿತ Fab-4 ಪಟ್ಟಿಯಿಂದ ಹೊರಬಿದ್ದಿದ್ದು ಈಗ Fab-3 ಮಾತ್ರವೇ ಇದೆ ಎಂದಿದ್ದರು. ಟೆಸ್ಟ್ ಕ್ರಿಕೆಟ್‌ನ ಪ್ರಸ್ತುತ ಆಡುತ್ತಿರುವ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಜೋ ರೂಟ್ ಹಾಗೂ ಕೇನ್ ವಿಲಿಯಮ್ಸನ್ ಈ ನಾಲ್ವರನ್ನು Fab-4 ಎಂದು ಗುರುತಿಸಲಾಗುತ್ತದೆ. ಆದರೆ ವಿರಾಟ್ ಕೊಹ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡದೇ ಇರುವುದನ್ನು ಉಲ್ಲೇಖಿಸಿ ಈ ಪಟ್ಟಿಯಿಂದ ಕೊಹ್ಲಿ ಹೊರಬಿದ್ದಿದ್ದಾರೆ ಎಂದಿದ್ದರು.

Ind vs WI: Aakash Copra prediction on Virat Kohli said his overseas Test hundred drought will end

ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಕೊಹ್ಲಿ ವಿಚಾರವಾಗಿಯೇ ಆಕಾಶ್ ಚೋಪ್ರ ಮತ್ತೊಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಸಿಡಿಸಲಿದ್ದು ಈ ಮೂಲಕ ಸುದೀರ್ಘ ಕಾಲದಿಂದ ವಿದೇಶಿ ನೆಲದಲ್ಲಿ ಅನುಭವಿಸುತ್ತಿರುವ ಟೆಸ್ಟ್ ಶತಕದ ಬರವನ್ನು ಕೊಹ್ಲಿ ನೀಗಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ ತಮ್ಮ ಕೊನೆಯ ವಿದೇಶಿ ಟೆಸ್ಟ್ ಶತಕವನ್ನು ಗಳಿಸಿದ್ದು 2018ರಷ್ಟು ಹಿಂದೆ. ಆಸ್ಟ್ರೇಲಿಯಾ ಪ್ರಚಾಸದಲ್ಲಿ ಪರ್ತ್‌ ಟೆಸ್ಟ್‌ನಲ್ಲಿ ಕೊಹ್ಲಿ ಈ ಶತಕವನ್ನು ಸಿಡಿಸಿದ್ದರು. ಇತ್ತೀಚೆಗೆ ಮತ್ತೆ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ ಅನುಭವಿಸುತ್ತಿದ್ದ ಶತಕದ ಬರವನ್ನು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ನೀಗಿಸಿಕೊಂಡಿದ್ದರು.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರ ವಿದೇಶಿ ನೆಲದಲ್ಲಿ ಕೊಹ್ಲಿಯ ಶತಕದ ನಿರೀಕ್ಷೆ ಈ ಸರಣಿಯಲ್ಲಿ ಅಂತ್ಯವಾಗಲಿದೆ ಎಂದಿದ್ದಾರೆ. "ಕಳೆದ ಐದು ವರ್ಷಗಳಲ್ಲಿ ವಿರಾಟ್ ಕೊಹ್ಲಿ ವಿದೇಶಿದಲ್ಲಿ ಟೆಸ್ಟ್ ಶತಕವನ್ನು ಸಿಡಿಸಿಲ್ಲ ಎಂಬುದು ಕುತೂಹಲಕಾರಿ ಸಂಗತಿ. 2018ರಲ್ಲಿ ಅವರು ಕೊನೆಯ ಬಾರಿ ವಿದೇಶದಲ್ಲಿ ಶತಕ ಸಿಡಿಸಿದ್ದು ಅದಾದ ಬಳಿಕ ಅವರ ಬ್ಯಾಟಿಂಗ್‌ನಿಂದ ವಿದೇಶದಲ್ಲಿ ಟೆಸ್ಟ್ ಶತಕ ಬಂದಿಲ್ಲ. ಆ ಕಾಯುವಿಕೆ ಈ ಸರಣಿಯಲ್ಲಿ ಬಹುಶಃ ಅಂತ್ಯವಾಗಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬಹುತೇಕ ಎಲ್ಲಾ ತಂಡಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಅಷ್ಟೇನೂ ಉತ್ತಮವಾಗಿಲ್ಲ ಎಂಬುದು ಗಮನಾರ್ಹ. ವಿರಾಟ್ ಕೊಹ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಕೊಹ್ಲಿ 9 ಪಂದ್ಯಗಳನ್ನು ಆಡಿದ್ದು 463 ರನ್‌ಗಳನ್ನು ಗಳಿಸಿದ್ದಾರೆ. ಕೆರಿಬಿಯನ್ ತಂಡದ ವಿರುದ್ಧ ಅವರ ಸರಾಸರಿ 35.62 ಮಾತ್ರವೇ ಇದೆ.

"ವಿರಾಟ್ ಕೊಹ್ಲಿಯ ಪ್ರದರ್ಶನ ಎಲ್ಲಾ ತಂಡಗಳ ವಿರುದ್ಧವೂ ಅತ್ಯುತ್ತಮವಾಗಿಯೇ ಇದೆ. ಆದರೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಅವರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬೇರೆಯವರಿಗೆ ಹೋಲಿಸಿದರೆ ಅದು ಉತ್ತಮವಾಗಿಯೇ ಇದೆ. ಆದರೆ ಕೊಹ್ಲಿಯ ಸ್ಟಾಂಡರ್‌ಗೆ ಅಲ್ಲ. ಹಾಗಾಗಿ ಈಗ ಚಿತ್ತ ವಿರಾಟ್ ಕೊಹ್ಲಿ ಮೇಲಿದೆ" ಎಂದಿದ್ದಾರೆ ಆಕಾಶ್ ಚೋಪ್ರ.

Story first published: Wednesday, July 12, 2023, 15:28 [IST]
Other articles published on Jul 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+