ಭಾರತ vs ವಿಂಡೀಸ್: ಧವನ್ ಹಾಗೂ ಐಯ್ಯರ್ ಕೋವಿಡ್ ವರದಿ ನೆಗೆಟಿವ್, ಅಭ್ಯಾಸ ಆರಂಭ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ತಂಡಕ್ಕೆ ಕೊರೊನಾವೈರಸ್ ಆಘಾತ ನೀಡಿತ್ತು. ಭಾರತ ತಂಡದ ನಾಲ್ವರು ಆಟಗಾರರ ಸಹಿತ ಒಟ್ಟು ಆರು ಮಂದಿಗೆ ಕೊರೊನಾವೈರಸ್ ದೃಢಪಟ್ಟಿತ್ತು. ಆ ಪೈಕಿ ಇದೀಗ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಶ್ರೇಯಸ್ ಐಯ್ಯರ್ ಕೊರೊನಾವೈರಸ್ ನೆಗೆಟಿವ್ ವರದಿ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಕೂಡ ಲಘು ಅಭ್ಯಾಸಕ್ಕೆ ಅವಕಾಶ ಪಡೆದುಕೊಂಡಿದ್ದಾರೆ.
ಶಿಖರ್ ಧವನ್, ಶ್ರೇಯಸ್ ಐಯ್ಯರ್ ಮತ್ತು ಋತುರಾಜ್ ಗಾಯಕ್ವಾಡ್ ಹಾಗೂ ತಂಡದ ನಾಲ್ವರು ಸಹಾಯಕ ಸಿಬ್ಬಂದಿಗಳು ಕೊರೊನಾವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿತ್ತು. ಕಳೆದ ಬುಧವಾರ ಈ ವಿಚಾರವನ್ನು ಬಿಸಿಸಿಐ ಕೂಡ ಸ್ಪಷ್ಟಪಡಿಸಿತ್ತು. ನಂತರ ಈ ಆ ಟಗಾರರು ಐಸೊಲೇಶನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ಈಗ ಶಿಖರ್ ಧವನ್ ಹಗೂ ಶ್ರೇಯಸ್ ಐಯ್ಯರ್ ಸಂಪುರ್ಣವಾಗಿ ಚೇತರಿಕೆ ಕಂಡಿದ್ದಾರೆ. ಆದರೆ ಯುವ ಆರಂಭಿಕ ಆಟಗಾರ ರತುರಾಜ್ ಗಾಯಕ್ವಾಡ್ ಮಾತ್ರ ಇನ್ನೂ ಐಸೋಲೇಶನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಧವನ್ ಹಾಗೂ ಶ್ರೇಯಸ್ ಐಯ್ಯರ್ ಕೊರೊನಾವೈರಸ್‌ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದರೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಈ ಇಬ್ಬರು ಆಟಗಾರರು ಕೂಡ ಲಭ್ಯವಿರುವುದಿಲ್ಲ. ವಿಂಡೀಸ್ ವಿರುದ್ಧಧ ಎರಡನೇ ಏಕದಿನ ಪಂದ್ಯ ಅಹಮದಾಬಾದ್‌ನಲ್ಲಿ ಬುಧವಾರ ನಡೆಯಲಿದೆ.
"ಇಬ್ಬರು ಆಟಗಾರರಿಗೆ ಕೂಡ(ಶಿಖರ್ ಧವನ್ ಹಾಗೂ ಶ್ರೇಯಸ್ ಐಯ್ಯರ್) ನಿಯಮಾನುಸಾರ ಲಘು ತರಬೇತಿಗೆ ಅವಕಾಶವನ್ನು ನೀಡಲಾಗಿದೆ. ಆದರೆ ಪಂದ್ಯದ ಲಭ್ಯಕ್ಕೆ ಮುನ್ನ ವೈದ್ಯಕೀಯ ತಂಡ ಅವಲೋಕನ ನಡೆಸಿ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ" ಎಂದು ಬಿಸಿಸಿಐ ಮೂಲಗಳು ದಿ ಹಿಂದೂ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಬಿಸಿಸಿಐ ಆಟಗಾರರನ್ನು ಆತುರವಾಗಿ ಆಡುವ ಬಳಗಕ್ಕೆ ಸೇರ್ಪಡೆಗೊಳಿಸದಿರಲು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗಿದೆ.
ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಲಭ್ಯ: ಇನ್ನು ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಈಗಾಗಲೇ ಭಾರತೀಯ ಸ್ಕ್ವಾಡ್ ಸೇರಿಕೊಂಡಿದ್ದಾರೆ. ಇನ್ನು ತಂಡದಲ್ಲಿ ಕೋವಿಡ್ ಸೋಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇರ್ಪಡೆಗೊಳಿಸಲಾಗಿದ್ದ ಮಯಾಂಕ್ ಅಗರ್ವಾಲ್ ಕೂಡ ಈಗಾಗಲೇ ಸ್ಕ್ವಾಡ್ ಸೇರಿಕೊಂಡಿದ್ದು ಎರಡನೇ ಪಂದ್ಯದ ಆಯ್ಕೆಗೆ ಲಭ್ಯವಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. "ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಕ್ವಾರಂಟೈನ್ ಮುಗಿಸಿ ತಂಡವನ್ನು ಸೇರಿಕೊಂಡಿದ್ದಾರೆ. ಈ ಮೂಲಕ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅಂತಿಮವಾಗಿ ಪಂದ್ಯದಲ್ಲಿ ಯಾರೆಲ್ಲಾ ಆಡುತ್ತಾರೆ ಯಾರು ಆಡುವುದಿಲ್ಲ ಎಂಬು ದನ್ನು ಮ್ಯಾನೇಜ್‌ಮೆಂಟ್ ನಿರ್ಧಾರ ಮಾಡಲಿದೆ. ಆದರೆ ಈ ಇಬ್ಬರು ಆಟಗಾರರು ವಾಪಾಸಾಗಿರುವುದಕ್ಕೆ ನಾವೆಲ್ಲಾ ಸಂಸತಗೊಂಡಿದ್ದೇವೆ" ಎಂದು ಸೂಕ್ರ್ಯಕುಮಾರ್ ಯಾದವ್ ಹೇಳಿಕೆ ನೀಡಿದ್ದಾರೆ.
ಲಭ್ಯವಿರುವ ಆಟಗಾರರ ಪಟ್ಟಿ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಋತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications