IND vs WI: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿದ ಹಾರ್ದಿಕ್ ಪಾಂಡ್ಯ; ಈ ಸಾಧನೆ ಮಾಡಿದ ಮೊದಲ ಭಾರತೀಯ
ಭಾನುವಾರ, ಆಗಸ್ಟ್ 6ರಂದು ಗಯಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಎರಡು ವಿಕೆಟ್‌ಗಳಿಂದ ಸೋಲು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಅಂತಿಮ ಓವರ್‌ನಲ್ಲಿ ಕೈಯಲ್ಲಿ ಎರಡು ವಿಕೆಟ್ ಉಳಿಸಿಕೊಂಡು 153 ರನ್ ಗಳಿಸಿ ಸತತ ಎರಡು ಗೆಲುವು ಸಾಧಿಸಿತು.
ಭಾರತ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಕೆರಿಬಿಯನ್ ತಂಡದ ನಿಕೋಲಸ್ ಪೂರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮುಂದೆ ಪಾಂಡ್ಯ ಪ್ರಯತ್ನಗಳು ವ್ಯರ್ಥವಾದವು.

ಸೋಲಿನ ಹೊರತಾಗಿಯೂ, ಹಾರ್ದಿಕ್ ಪಾಂಡ್ಯ ಎರಡನೇ ಪಂದ್ಯದ ಸಮಯದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸುವಲ್ಲಿ ಯಶಸ್ವಿಯಾದರು.
ಹಾರ್ದಿಕ್ ಪಾಂಡ್ಯ ಅವರು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್ ಅವರನ್ನು ಪೆವಿಲಿಯನ್‌ಗೆ ಕಳಿಸಿದರು. ಈ ವಿಕೆಟ್ ಮೂಲಕ, ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ 4000ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು 150 ವಿಕೆಟ್‌ಗಳನ್ನು ಪಡೆದ ವಿಶಿಷ್ಟ ಸಾಧನೆಯನ್ನು ಪೂರ್ಣಗೊಳಿಸಿದರು. ಈ ದಾಖಲೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗರೆನಿಸಿದರು.
ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 241 ಟಿ20 ಪಂದ್ಯಗಳನ್ನು ಆಡಿದ್ದು, 139.39 ಸ್ಟ್ರೈಕ್‌ರೇಟ್‌ನಲ್ಲಿ 4391 ರನ್ ಗಳಿಸಿದ್ದು, 152 ವಿಕೆಟ್ ಕಬಳಿಸಿದ್ದಾರೆ ಮತ್ತು ಮೂರು ಬಾರಿ ನಾಲ್ಕು ವಿಕೆಟ್ ಪಡೆದಿದ್ದಾರೆ.

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನಕ್ಕೆ ಸಂಬಂಧಿಸಿದಂತೆ, ಇದುವರೆಗೆ 89 ಪಂದ್ಯಗಳಲ್ಲಿ 1314 ರನ್ ಗಳಿಸಿ 73 ವಿಕೆಟ್‌ಗಳನ್ನು ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು 2013ರಲ್ಲಿ ತಮ್ಮ ಮೊದಲ ಟಿ20 ಪಂದ್ಯವನ್ನು ಆಡಿದರು. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವಾಗ ಇಂಡಿಯನ್ ದೊಡ್ಡ ಖ್ಯಾತಿ ಗಳಿಸಿದರು.
ಅಂತಿಮವಾಗಿ, 2016ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ, ಹಾರ್ದಿಕ್ ಪಾಂಡ್ಯ ಹಿಂತಿರುಗಿ ನೋಡಲಿಲ್ಲ ಮತ್ತು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ದಾಖಲೆಗೆ ಹಿಂತಿರುಗಿದರೆ, ಟಿ20 ಇತಿಹಾಸದಲ್ಲಿ 4000 ರನ್ ಮತ್ತು 150 ವಿಕೆಟ್‌ಗಳ ಡಬಲ್ ಸಾಧನೆ ಪೂರ್ಣಗೊಳಿಸಿದ ವಿಶ್ವದ 13ನೇ ಕ್ರಿಕೆಟಿಗರಾಗಿದ್ದಾರೆ.
ಶೋಯೆಬ್ ಮಲಿಕ್, ಆಂಡ್ರೆ ರಸೆಲ್, ಸುನಿಲ್ ನರೈನ್, ಮೊಹಮ್ಮದ್ ಹಫೀಜ್, ಶಕೀಬ್ ಅಲ್ ಹಸನ್ ಮತ್ತು ಕೀರಾನ್ ಪೊಲಾರ್ಡ್ ಈ ಮೊದಲು ಮೈಲಿಗಲ್ಲು ಸಾಧಿಸಿದ 12 ಕ್ರಿಕೆಟಿಗರಲ್ಲಿ ಸೇರಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 4000 ರನ್ ಮತ್ತು 150 ವಿಕೆಟ್ ಸಾಧನೆ ಮಾಡಿದ ಆಟಗಾರರು
1. ಶೋಯೆಬ್ ಮಲಿಕ್ (ಪಾಕಿಸ್ತಾನ)
2. ಕೀರಾನ್ ಪೊಲಾರ್ಡ್ (ವೆಸ್ಟ್ ಇಂಡೀಸ್)
3. ರವಿ ಬೋಪಾರ (ಇಂಗ್ಲೆಂಡ್)
4. ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ)
5. ಮೊಹಮ್ಮದ್ ಹಫೀಜ್ (ಪಾಕಿಸ್ತಾನ)
6. ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್)
7. ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್)
8. ಶಕೀಬ್ ಅಲ್ ಹಸನ್ (ವೆಸ್ಟ್ ಇಂಡೀಸ್)
9. ಸಮಿತ್ ಪಟೇಲ್ (ವೆಸ್ಟ್ ಇಂಡೀಸ್)
10. ಮೊಯಿನ್ ಅಲಿ (ಇಂಗ್ಲೆಂಡ್)
11. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ)
12. ಅಜರ್ ಮಹಮೂದ್ (ಪಾಕಿಸ್ತಾನ)
13. ಹಾರ್ದಿಕ್ ಪಾಂಡ್ಯ (ಭಾರತ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications