For Quick Alerts
ALLOW NOTIFICATIONS  
For Daily Alerts
 

IND vs WI: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಸೋಲಿನೊಂದಿಗೆ ಬೇಡದ ದಾಖಲೆ ಸೃಷ್ಟಿಸಿದ ಭಾರತ

2 ಟೆಸ್ಟ್‌ ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 5 ಟಿ20 ಪಂದ್ಯಗಳನ್ನು ಒಳಗೊಂಡಿರುವ ವೆಸ್ಟ್ ಇಂಡೀಸ್ ವಿರುದ್ಧದ ಬಹು-ಮಾದರಿಯ ಪ್ರವಾಸದಲ್ಲಿ, ಏಷ್ಯಾದ ದೈತ್ಯ ಭಾರತ ತಂಡದಿಂದ ಕ್ಲೀನ್ ಸ್ವೀಪ್‌ಗಳನ್ನು ನಿರೀಕ್ಷೆ ಮಾಡಲಾಗಿತ್ತು.

ಆದರೆ, ವಾಸ್ತವವಾಗಿ ಟೆಸ್ಟ್ ಸರಣಿಯನ್ನು ಒಂದು ಟೆಸ್ಟ್ ಡ್ರಾನೊಂದಿಗೆ ಭಾರತ ತಂಡ 1-0 ಅಂತರದಲ್ಲಿ ಗೆಲುವು ಸಾಧಿಸಿತು. ಇನ್ನು ಏಕದಿನ ಸರಣಿಯನ್ನು ಭಾರತ ತಂಡವು 2-1 ಅಂತರದಲ್ಲಿ ಗೆಲುವನ್ನು ಕಂಡಿತು.

ಆದರೆ, ಟಿ20 ಸ್ವರೂಪದಲ್ಲಿ ಪ್ರವಾಸಿ ಭಾರತ ತಂಡಕ್ಕೆ ಆಘಾತ ಕಾದಿತ್ತು. ನಿಕೋಲಸ್ ಪೂರನ್ ಅದ್ಭುತ ಫಾರ್ಮ್‌ನಲ್ಲಿರುವ ವೆಸ್ಟ್ ಇಂಡೀಸ್ ತಂಡವು 3-2 ಅಂತರದಿಂದ ರೋಚಕವಾಗಿ ಗೆದ್ದುಕೊಂಡಿತು. ಇದು ಅಸಾಧ್ಯ ಸರಣಿ ಜಯ ಗಳಿಸುವ ಮೂಲಕ ಭಾರತೀಯ ತಂಡಕ್ಕೆ ಶಾಕ್ ನೀಡಿತು.

india-create-unwanted-record

ನಿರ್ಣಾಯಕ 5ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 61 ರನ್ ಗಳಿಸಿದ ಏಕೈಕ ಭಾರತೀಯ ಗರಿಷ್ಠ ಸ್ಕೋರರ್ ಆಗಿದ್ದರು. ತಿಲಕ್ ವರ್ಮಾ 18 ಎಸೆತಗಳಲ್ಲಿ 27 ರನ್ ನೆರವಿನಿಂದ ಪ್ರವಾಸಿ ಭಾರತ ಸ್ಕೋರ್ ಬೋರ್ಡ್‌ನಲ್ಲಿ 165 ರನ್ ಗಳಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಇದೇ ಪಿಚ್‌ನಲ್ಲಿ ಸರಾಗವಾಗಿ ಬ್ಯಾಟ್ ಬೀಸಿದರು. ಆರಂಭಿಕ ಬ್ರಾಂಡನ್ ಕಿಂಗ್ ಅಜೇಯ 55 ಎಸೆತಗಳಲ್ಲಿ 85 ರನ್ ಗಳಿಸುವುದರೊಂದಿಗೆ ಆಕ್ರಮಣಕಾರಿ ಆಟವಾಡಿದರು. ನಿಕೋಲಸ್ ಪೂರನ್ 35 ಎಸೆತಗಳಲ್ಲಿ 47 ರನ್ ಗಳಿಸಿದರೆ, ಶಾಯ್ ಹೋಪ್ 13 ಎಸೆತಗಳಲ್ಲಿ 22 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.

ಇನ್ನೂ 2 ಓವರ್‌ಗಳು ಬಾಕಿ ಉಳಿದಿರುವಂತೆಯೇ, 5ನೇ ಟಿ20 ಪಂದ್ಯವನ್ನು ವೆಸ್ಟ್ ಇಂಡೀಸ್‌ ತಂಡವು 8 ವಿಕೆಟ್‌ಗಳ ಜಯದೊಂದಿಗೆ ಸರಣಿಯನ್ನು 3-2 ಅಂತರದಲ್ಲಿ ಮುಕ್ತಾಯಗೊಳಿಸಿತು. ಇನ್ನು ಈ ಟಿ20 ಸರಣಿ ಸೋಲಿನೊಂದಿಗೆ ಭಾರತ ತಂಡವು ಕೆಲವು ಬೇಡದ ದಾಖಲೆಗಳು ಮತ್ತು ಮೈಲಿಗಲ್ಲುಗಳನ್ನು ದಾಖಲಿಸಿದೆ.

india-create-unwanted-record

ಬೇಡದ ದಾಖಲೆ ಬರೆದ ಭಾರತ ತಂಡ

* ಕಳೆದ 25 ತಿಂಗಳ ಅವಧಿಯಲ್ಲಿ ಭಾರತ ತಂಡ ಟಿ20 ಸರಣಿಯನ್ನು ಕಳೆದುಕೊಂಡಿರುವುದು ಇದೇ ಮೊದಲಾಗಿದೆ.

* ದ್ವಿಪಕ್ಷೀಯ ಸರಣಿಯ ವಿಷಯದಲ್ಲಿ ಭಾರತವು ಕಳೆದ 17 ವರ್ಷಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದು ಇದೇ ಮೊದಲು.

* ಈ ಸರಣಿಯ ಮುನ್ನ ಭಾರತ ತಂಡದ ಇತಿಹಾಸದಲ್ಲಿ ಒಂದೇ ಟಿ20 ಸರಣಿಯಲ್ಲಿ ಮೂರು ಪಂದ್ಯಗಳನ್ನು ಸೋತಿರಲಿಲ್ಲ.

2022ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವೆಸ್ಟ್ ಇಂಡೀಸ್ ವಿಫಲವಾಗಿದೆ ಎಂಬ ಅಂಶದೊಂದಿಗೆ ಈ ಸರಣಿಯ ಫಲಿತಾಂಶದ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕಿದೆ. ದುರ್ಬಲ ತಂಡದೆದುರು ಭಾರತ ತಂಡದ ಹೀನಾಯ ಪ್ರದರ್ಶನವು ಚರ್ಚಿಸುವಂತೆ ಮಾಡಿದೆ.

ಇನ್ನು ವೆಸ್ಟ್ ಇಂಡೀಸ್ ತಂಡವು ಭಾರತದಲ್ಲಿಯೇ ನಡೆಯುವ 2023ರ ಏಕದಿನ ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿರುವ ಕಾರಣ ಭಾಗವಹಿಸುವುದಿಲ್ಲ. ಆದತೂ, ವೆಸ್ಟ್ ಇಂಡೀಸ್ ದೃಷ್ಟಿಕೋನದಿಂದ ಐತಿಹಾಸಿಕ ಗೆಲುವಾಗಿದ್ದರೆ, ಭಾರತಕ್ಕೆ ಆಘಾತ ಉಂಟುಮಾಡಿದೆ.

Story first published: Monday, August 14, 2023, 16:23 [IST]
Other articles published on Aug 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+