For Quick Alerts
ALLOW NOTIFICATIONS  
For Daily Alerts
 

IND vs WI: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 2003ರ ವಿಶ್ವಕಪ್ ದಾಖಲೆ ಸಮಬಲಗೊಳಿಸಿದ ಭಾರತ

ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ನಿರಾಯಾಸ ಗೆಲುವು ಕಂಡಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.

ಶಾಯ್ ಹೋಪ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 114 ರನ್‌ಗಳಿಗೆ ಆಲೌಟ್ ಮಾಡುವುದರ ಮೂಲಕ ಪ್ರವಾಸಿ ಭಾರತ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು.

IND vs WI: India Equaled World Cup 2003 Record In 1st ODI Match Against West Indies

ಒಂದು ಕಾಲದ ಬಲಾಢ್ಯ ತಂಡವೆನಿಸಿದ್ದ ವೆಸ್ಟ್ ಇಂಡೀಸ್ ಬ್ಯಾಟರ್‌ಗಳಿಂದ ಅತ್ಯಂತ ಕಳಪೆ ಪ್ರದರ್ಶನ ಕಂಡುಬಂತು. ಏಕೆಂದರೆ, ಭಾರತೀಯ ಬೌಲರ್‌ಗಳು ತೋರಿಸಿದ ಕೌಶಲ್ಯ ಮತ್ತು ಕ್ಲಾಸ್‌ ಆಟದಿಂದ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ.

ಆತಿಥೇಯ ತಂಡವನ್ನು ಭಾರತದ ಬೌಲರ್‌ಗಳು ಕೇವಲ 23 ಓವರ್‌ಗಳಲ್ಲಿ ಆಲೌಟ್ ಮಾಡಿದರು. ಈ ಸಾಧನೆ ಮೂಲಕ ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡವು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 2003ರ ವಿಶ್ವಕಪ್‌ನಲ್ಲಿ 23 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ಶ್ರೀಲಂಕಾ ತಂಡವನ್ನು ಆಲೌಟ್ ಮಾಡಿತ್ತು.

IND vs WI: India Equaled World Cup 2003 Record In 1st ODI Match Against West Indies

ಇದೀಗ ಅದನ್ನು ಮತ್ತೆ ಪುನರಾವರ್ತಿಸಲಾಗಿದ್ದು, ಇದು ಭಾರತ ತಂಡಕ್ಕೆ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಜಂಟಿ ಮೂರನೇ ಅತಿ ಕಡಿಮೆ ಓವರ್‌ (23) ಆಗಿದೆ.

2014ರಲ್ಲಿ ಸ್ಟುವರ್ಟ್ ಬಿನ್ನಿ 4 ರನ್‌ಗಳಿಗೆ 6 ವಿಕೆಟ್ ಪಡೆಯುವುದರೊಂದಿಗೆ 17.4 ಓವರ್‌ಗಳಲ್ಲಿ 58 ರನ್‌ಗಳಿಗೆ ಬಾಂಗ್ಲಾದೇಶ ತಂಡವನ್ನು ಆಲೌಟ್ ಮಾಡಿತ್ತು. ಇದು ಅತಿ ಕಡಿಮೆ ಓವರ್‌ಗಳಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಮೊದಲ ಸ್ಥಾನದಲ್ಲಿದೆ.

2023ರ ಆರಂಭದಲ್ಲಿ ತಿರುವನಂತಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ತಂಡವನ್ನು ಕೇವಲ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲೌಟ್ ಮಾಡಿದ್ದು ಎರಡನೇ ಸ್ಥಾನದಲ್ಲಿದೆ.

ಇದು ಮೊದಲು ಬೌಲಿಂಗ್ ಮಾಡುವಾಗ ಭಾರತ ತಂಡವು ಎದುರಾಳಿಯನ್ನು ಆಲೌಟ್ ಮಾಡಲು ತೆಗೆದುಕೊಂಡ ಕಡಿಮೆ ಓವರ್‌ಗಳಾಗಿವೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವಾಗ, ಓವಲ್‌ನಲ್ಲಿ 25.2 ಓವರ್‌ಗಳಲ್ಲಿ ಇಂಗ್ಲೆಂಡ್‌ ತಂಡವನ್ನು ಆಲೌಟ್ ಮಾಡಿದ್ದು ಭಾರತದ ಹಿಂದಿನ ಅತ್ಯುತ್ತಮ ಪ್ರಯತ್ನವಾಗಿತ್ತು.

ಇದೇ ವೇಳೆ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡುವಾಗ ಎರಡನೇ ಅತಿ ಕಡಿಮೆ ಓವರ್‌ಗಳಲ್ಲಿ ಆಲೌಟ್ ಆಗಿದೆ. 12 ವರ್ಷಗಳ ಹಿಂದೆ ಬಾಂಗ್ಲಾದೇಶ ವಿರುದ್ಧ ಚಟ್ಟೋಗ್ರಾಮ್‌ನಲ್ಲಿ ವೆಸ್ಟ್ ಇಂಡೀಸ್ 22 ಓವರ್‌ಗಳಲ್ಲಿ ಕೇವಲ 61 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ 2013ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 23.5 ಓವರ್‌ಗಳಲ್ಲಿ ಕೇವಲ 70 ರನ್‌ಗಳಿಗೆ ವೆಸ್ಟ್ ಇಂಡೀಸ್ ಆಲೌಟ್ ಆಗಿತ್ತು.

Story first published: Friday, July 28, 2023, 11:44 [IST]
Other articles published on Jul 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+