ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 200 ರನ್‌ಗಳ ಭರ್ಜರಿ ಜಯ ಗಳಿಸುವ ಮೂಲಕ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ಕೆರಿಬಿಯನ್ ತಂಡದ ವಿರುದ್ಧ ಸತತವಾಗಿ ಅತಿ ಹೆಚ್ಚು ದ್ವಿಪಕ್ಷೀಯ ಏಕದಿನ ಸರಣಿ ಜಯ ಗಳಿಸಿತು ಮತ್ತು ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ತನ್ನ ಪ್ರಾಬಲ್ಯ ಮುಂದುವರೆಸಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ 200 ರನ್‌ಗಳ ಬೃಹತ್ ಗೆಲುವು ವೆಸ್ಟ್ ಇಂಡೀಸ್ ವಿರುದ್ಧ ಸತತ 13ನೇ ಏಕದಿನ ಸರಣಿ ಜಯ ಸಾಧಿಸಿದಂತಾಯಿತು. ಕೊನೆಯ ಬಾರಿ 17 ವರ್ಷಗಳ ಹಿಂದಿನ ಕೆರಿಬಿಯನ್ ತಂಡದ ವಿರುದ್ಧ ಭಾರತ ತಂಡ ಏಕದಿನ ಸರಣಿ ಸೋಲು ಕಂಡಿತ್ತು.
2006ರಲ್ಲಿ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ನಾಯಕತ್ವ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ತಂಡ ಏಕದಿನ ಸರಣಿಯನ್ನು 4-1 ಅಂತರದಿಂದ ಕಳೆದುಕೊಂಡಿತ್ತು. ಆಗ ಭಾರತ ತಂಡವು ಐದು ವಿಕೆಟ್‌ಗಳ ಗೆಲುವಿನೊಂದಿಗೆ ಏಕದಿನ ಸರಣಿಯನ್ನು ಆರಂಭಿಸಿತ್ತು. ಆದರೆ ಬಳಿಕ ವೆಸ್ಟ್ ತಂಡ ಉಳಿದ ನಾಲ್ಕು ಪಂದ್ಯಗಳನ್ನು ಸತತವಾಗಿ ಗೆದ್ದು, ಐದು ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತ್ತು.

ವೆಸ್ಟ್ ಇಂಡೀಸ್ ಹೊರತುಪಡಿಸಿ, ಶ್ರೀಲಂಕಾ ವಿರುದ್ಧ ಭಾರತ ತಂಡ ಸತತ 10 ಏಕದಿನ ಸರಣಿಗಳನ್ನು ಗೆದ್ದಿದೆ. ಭಾರತ ತಂಡದ ನಂತರ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವು ಜಿಂಬಾಬ್ವೆ ವಿರುದ್ಧ ಸತತ 11 ಏಕದಿನ ಸರಣಿ ಗೆಲುವುಗಳನ್ನು ಕಂಡಿದೆ.
ಜಿಂಬಾಬ್ವೆ ವಿರುದ್ಧ ಸತತ 11 ಏಕದಿನ ಸರಣಿಗಳನ್ನು ಗೆದ್ದಿರುವ ಪಾಕಿಸ್ತಾನ ತಂಡ ಭಾರತ ತಂಡಕ್ಕಿಂತ ಹಿಂದೆ ಉಳಿದಿಲ್ಲ. ಪಾಕಿಸ್ತಾನ ತಂಡವು ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸತತ 10 ಏಕದೊಮ ಸರಣಿಗಳನ್ನು ಗೆದ್ದಿದೆ.
13 - ಭಾರತ vs ವೆಸ್ಟ್ ಇಂಡೀಸ್ (2007-23)
11 - ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ (1996-21)
10 - ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ (1999-22)
10 - ಭಾರತ vs ಶ್ರೀಲಂಕಾ (2007-23)
ಭಾರತ ನೀಡಿದ್ದ 352 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆತಿಥೇಯ ವೆಸ್ಟ್ ಇಂಡೀಸ್ ಮೊದಲ ಓವರ್‌ನಲ್ಲಿಯೇ ಬ್ರಾಂಡನ್ ಕಿಂಗ್ ಅವರನ್ನು ಮುಖೇಶ್ ಕುಮಾರ್ ಡಕ್ ಔಟ್ ಮಾಡಿದರು. ಮುಖೇಶ್ ಮತ್ತೊಮ್ಮೆ ಬಿಗುವಿನ ಬೌಲಿಂಗ್ ದಾಳಿ ನಡೆಸಿ, ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಅವರನ್ನು 5 ರನ್‌ಗಳಿಗೆ ಪೆವಿಲಿಯನ್‌ಗೆ ಕಳಿಸಿದರು.
ತಮ್ಮೆದುರು ದೊಡ್ಡ ಮೊತ್ತವಿದ್ದರೂ, ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ನೆಲಕಚ್ಚಿ ಆಡಲು ವಿಫಲರಾದರು. ವೆಸ್ಟ್ ಇಂಡೀಸ್ 7 ಓವರ್ ಗಳಲ್ಲಿ 17 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್ 6.3 ಓವರ್‌ಗಳಲ್ಲಿ 37 ರನ್ ನೀಡಿ 4 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ 7 ಓವರ್‌ಗಳಲ್ಲಿ 30 ರನ್ ನೀಡಿ 3 ಪಡೆದು ಮಿಂಚಿದರು. ಕುಲದೀಪ್ ಯಾದವ್ 8 ಓವರ್‌ಗಳಲ್ಲಿ 25 ರನ್ ನೀಡಿ 2 ಕಬಳಿಸಿದರೆ, ಜಯದೇವ್ ಉನಾದ್ಕಟ್ 5 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆದರು.
ಎದುರಾಳಿ ತಂಡದ ಪರ ಗುಡಾಕೇಶ್ ಮೋಟಿ ಮತ್ತು ಅಲ್ಜಾರಿ ಜೋಸೆಫ್ 9ನೇ ವಿಕೆಟ್‌ಗೆ 47 ಎಸೆತಗಳಲ್ಲಿ 50-ರನ್ ಜೊತೆಯಾಟ ನೀಡಿ ಪ್ರತಿರೋಧ ಒಡ್ಡಿದರು.
ಶಾರ್ದಲ್ ಠಾಕೂರ್ ಅವರು ಅಲ್ಜಾರಿ ಜೋಸೆಫ್ ಅವರನ್ನು ಬೌನ್ಸರ್‌ನೊಂದಿಗೆ 26 ರನ್‌ಗಳಿಗೆ ಔಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ ನೀಡಿದರು. ಠಾಕೂರ್ ಅವರು ಜೇಡನ್ ಸೀಲ್ಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಕೊನೆಯ ವಿಕೆಟ್ ಪಡೆದರು.
ಭಾರತ ತಂಡ 35.3 ಓವರ್‌ಗಳಲ್ಲಿ 200 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಗುರುವಾರ, ಆಗಸ್ಟ್ 3ರಿಂದ ಆರಂಭಿಸಲಿದೆ.