Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs WI: ದಶಕದ ಬಳಿಕ ಏಕದಿನ ಕ್ರಿಕೆಟ್‌ಗೆ ಪುನರಾಗಮನ ಮಾಡಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್

ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವೇಗಿ ಜಯದೇವ್ ಉನಾದ್ಕಟ್ ಅವರನ್ನು ಭಾರತದ ಆಡುವ 11ರ ಬಳಗದಲ್ಲಿ ಆಯ್ಕೆ ಮಾಡುವ ಮೂಲಕ ಕ್ರಿಕೆಟ್ ಜಗತ್ತು ಮಹತ್ವದ ಕ್ಷಣಕ್ಕೆ ಸಾಕ್ಷಿಯಾಯಿತು.

ದಶಕದ ಬಳಿಕ ಅಂದರೆ, 3,539 ದಿನಗಳ ನಂತರ ಜಯದೇವ್ ಉನಾದ್ಕಟ್ ಅವರು ಮತ್ತೊಮ್ಮೆ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಒಬ್ಬ ಕ್ರಿಕೆಟಿಗನು ಪಂದ್ಯಗಳ ನಡುವಿನ ಸುದೀರ್ಘ ಮಧ್ಯಂತರ ಹೊಂದಿದ ವಿಶಿಷ್ಟ ದಾಖಲೆ ಸೃಷ್ಟಿಸಿದ್ದಾರೆ.

 IND vs WI: Jaydev Unadkat Makes A Remarkable Comeback To ODI Cricket After A Decade

ನವೆಂಬರ್ 21, 2013ರಂದು ಭಾರತ ತಂಡದ ಪರ ಕೊನೆಯದಾಗಿ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಜಯದೇವ್ ಉನಾದ್ಕಟ್ ಅವರಿಗೆ ಇದು ದೊಡ್ಡ ಅಂತರವಾಗಿದೆ. ಪಂದ್ಯಗಳ ನಡುವೆ ದೊಡ್ಡ ಅಂತರವನ್ನು ಅನುಭವಿಸಿದ ಕೆಲವೇ ಆಟಗಾರರಲ್ಲಿ ಜಯದೇವ್ ಉನಾದ್ಕಟ್ ಇದ್ದಾರೆ.

ಮೂರನೇ ಏಕದಿನ ಪಂದ್ಯಕ್ಕೆ ಆತಿಥೇಯ ವೆಸ್ಟ್ ಇಂಡೀಸ್ ತಂಡ ಯಾವುದೇ ಬದಲಾವಣೆ ಮುಂದಾಗಲಿಲ್ಲ. ಆದರೆ, ಪ್ರವಾಸಿ ಭಾರತ ತಂಡದಲ್ಲಿ ಮತ್ತೆ ಎರಡು ಬದಲಾವಣೆಗಳನ್ನು ಮಾಡಿತು. ಆಲ್‌ರೌಂಡರ್ ಅಕ್ಷರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ಬದಲಿಗೆ ರುತುರಾಜ್ ಗಾಯಕ್ವಾಡ್ ಮತ್ತು ಜಯದೇವ್ ಉನಾದ್ಕಟ್ ಅವರಿಗೆ ಅವಕಾಶ ನೀಡಲಾಯಿತು.

ಗಾಯಕ್ವಾಡ್‌ಗೆ ಇದು ಅವರ ಎರಡನೇ ಏಕದಿನ ಪಂದ್ಯವಾಗಿದೆ. ಇನ್ನು ಜಯದೇವ್ ಉನಾದ್ಕಟ್ ಏಕದಿನ ಕ್ರಿಕೆಟ್‌ಗೆ ಸುಮಾರು ಒಂದು ದಶಕದ ನಂತರ ಮರಳಿದ್ದು, ಇದು ಅವರ ಎಂಟನೇ ಏಕದಿನ ಪಂದ್ಯವಾಗಿದೆ. ಅವರ ಹಿಂದಿನ ಏಕದಿನ ಪಂದ್ಯವು ನವೆಂಬರ್ 2013ರಲ್ಲಿ ಕೊಚ್ಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ ಆಗಿತ್ತು ಎಂಬುದು ಗಮನಾರ್ಹ.

ಇದೇ ವೇಳೆ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಮೊದಲ ಪುರುಷರ ಏಕದಿನ ಪಂದ್ಯವಾಗಿದೆ. ಇದಕ್ಕೂ ಮೊದಲು ಇಲ್ಲಿ ಪುರುಷರ ಟಿ20 ಮತ್ತು ಆರು ಬಾರಿ ಮಹಿಳಾ ಪಂದ್ಯಗಳಿಗೆ ಸಾಕ್ಷಿಯಾಗಿದೆ.

ಇತ್ತೀಚೆಗೆ ಡಿಸೆಂಬರ್ 2022ರಲ್ಲಿ ಜಯದೇವ್ ಉನಾದ್ಕಟ್ ಅವರು ಭಾರತ ತಂಡಕ್ಕೆ ಗಮನಾರ್ಹವಾದ ಪುನರಾಗಮನ ಮಾಡಿದರು. ಬಾಂಗ್ಲಾದೇಶ ವಿರುದ್ಧ 12 ವರ್ಷಗಳ ಬೃಹತ್ ಅಂತರದ ನಂತರ ತಮ್ಮ ಟೆಸ್ಟ್ ಪಂದ್ಯಕ್ಕೆ ಪುನರಾಗಮನ ಮಾಡುವ ಮೂಲಕ ಅಪರೂಪದ ಭಾರತೀಯ ದಾಖಲೆಯನ್ನು ಸೃಷ್ಟಿಸಿದರು.

ಎಡಗೈ ವೇಗಿ ಜಯದೇವ್ ಉನಾದ್ಕಟ್ ಇದೀಗ ಕ್ರಿಕೆಟ್ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದುಕೊಂಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡ ಭಾರತದ ಮೊದಲ ಕ್ರಿಕೆಟಿಗರಾದರು.

ಡಿಸೆಂಬರ್ 16, 2010ರಂದು ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಅವರ ಅಂತಾರಾಷ್ಟ್ರೀಯ ವೃತ್ತಜೀವನ ಆರಂಭವಾಗಿತ್ತು.

ಆ ಮಧ್ಯಂತರ ವರ್ಷಗಳಲ್ಲಿ ಜಯದೇವ್ ಉನಾದ್ಕಟ್ 118 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಇದು ಭಾರತೀಯ ಆಟಗಾರರಲ್ಲಿ ಅಪ್ರತಿಮ ಸಾಧನೆಯಾಗಿದೆ ಮತ್ತು ಇಡೀ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಧಿಕವಾಗಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 142 ಪಂದ್ಯಗಳನ್ನು ತಪ್ಪಿಸಿಕೊಳ್ಳುವುದರೊಂದಿಗೆ ಇಂಗ್ಲೆಂಡ್‌ನ ಗರೆಥ್ ಬ್ಯಾಟಿ ಮಾತ್ರ ಜಯದೇವ್ ಉನಾದ್ಕಟ್ ಅವರಿಗಿಂತ ಮುಂದೆ ಇದ್ದಾರೆ.

ಭಾರತ vs ವೆಸ್ಟ್ ಇಂಡೀಸ್ ಆಡುವ 11ರ ಬಳಗ
ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಯದೇವ್ ಉನಾದ್ಕಟ್, ಮುಖೇಶ್ ಕುಮಾರ್.

ವೆಸ್ಟ್ ಇಂಡೀಸ್: ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಾಯ್ ಹೋಪ್ (ನಾಯಕ/ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ, ಜೇಡನ್ ಸೀಲ್ಸ್.

Story first published: Tuesday, August 1, 2023, 21:19 [IST]
Other articles published on Aug 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+