ಟೀಂ ಇಂಡಿಯಾದಲ್ಲಿ ಹೆಚ್ಚಿದ ಕೊರೊನಾ ಪಾಸಿಟಿವ್ ಸಂಖ್ಯೆ: ಇಶಾನ್ ಕಿಶನ್‌ಗೆ ಬುಲಾವ್

ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ಪಾಳಯದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈಗಾಗಲೇ ಐವರು ಆಟಗಾರರು ಸೇರಿದಂತೆ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಐಸೋಲೇಟ್ ಆಗಿದ್ದಾರೆ.
ಶ್ರೇಯಸ್ ಅಯ್ಯರ್, ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್ ಹಾಗೂ ನವದೀಪ್ ಸೈನಿ ಸೇರಿದಂತೆ ಫೀಲ್ಡಿಂಗ್ ಕೋಚ್ ಸೇರಿ ಹಲವರು ಅಹಮದಾಬಾದ್‌ಗೆ ಏಕದಿನ ಕ್ರಿಕೆಟ್ ಆಡಲೆಂದು ಆಗಮಿಸಿದ ಸಂದರ್ಭದಲ್ಲಿ ಪರೀಕ್ಷೆಗೊಳಗಾದಾಗ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಹೀಗಾಗಿ ಭಾರತ ವಿಂಡೀಸ್ ವಿರುದ್ಧ ಸರಣಿಗೂ ಮುನ್ನ ಹಿನ್ನಡೆ ಅನುಭವಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅಲಭ್ಯ ರಾಗಿದ್ದು, ಶಿಖರ್ ಧವನ್ ಜೊತೆಗೆ ರುತುರಾಜ್ ಗಾಯಕ್ವಾಡ್ ಕೂಡ ಆಯ್ಕೆಗೆ ಲಭ್ಯವಿಲ್ಲ. ಹೀಗಾಗಿಯೇ ಮಯಾಂಕ್ ಅಗರ್ವಾಲ್‌ಗೆ ಈಗಾಗಲೇ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಮಯಾಂಕ್ ಕೆಲವು ವರ್ಷಗಳ ಬಳಿಕ ಏಕದಿನ ತಂಡ ಸೇರ್ಪಡೆಯಾಗಿದ್ದಾರೆ.

ಇಶಾನ್ ಕಿಶನ್‌ಗೆ ಟೀಂ ಇಂಡಿಯಾ ಬುಲಾವ್
ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ಗೆ ಏಕದಿನ ತಂಡಕ್ಕೆ ಸೇರಿಕೊಳ್ಳುವಂತೆ ತಿಳಿಸಲಾಗಿದೆ. ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ಶೀಘ್ರದಲ್ಲೇ ಅಹಮದಾಬಾದ್‌ಗೆ ತಲುಪಲಿದ್ದಾರೆ. ಇದಕ್ಕೂ ಮುನ್ನ ಇಶಾನ್ ಕಿಶನ್ ಕೇವಲ ಟಿ20 ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದರು. ಇದೀಗ ಏಕದಿನ ತಂಡವನ್ನು ಸೇರಿಕೊಳ್ಳುವಂತೆ ತಿಳಿಸಲಾಗಿದೆ. ಇನ್ನು ತಂಡಕ್ಕೆ ಆಯ್ಕೆಯಾಗಿರುವ ಮಯಾಂಕ್ ಅಗರ್ವಾಲ್ ಸದ್ಯ ಕ್ವಾರಂಟೈನ್ನಲ್ಲಿದ್ದು, ಮೊದಲ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇತ್ತ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದರೂ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಏಕೆಂದರೆ ಮೂರು ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯವಾಗಿದ್ದು, ಇದಾದ ಬಳಿಕ ಟೀಮ್ ಇಂಡಿಯಾ ಬಳಗವನ್ನು ಸೇರಿಕೊಳ್ಳಬಹುದು. ಕೋವಿಡ್ ಪಾಸಿಟಿವ್ ಆದ ಆಟಗಾರನು ಕನಿಷ್ಠ 7 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕು. ನಂತರ ಟೆಸ್ಟ್‌ನಲ್ಲಿ ನೆಗೆಟಿವ್ ಬಂದರಷ್ಟೇ ಟೀಂ ಇಂಡಿಯಾ ಸೇರಿಕೊಳ್ಳಬಹುದು.

ಅಭ್ಯಾಸ ಆರಂಭಿಸಿರುವ ಭಾರತದ ಆಟಗಾರರು
ರ್ಯಾಪಿಡ್ ಟೆಸ್ಟ್‌ನಲ್ಲಿ ಭಾರತದ ಉಳಿದ ಆಟಗಾರರ ವರದಿ ನೆಗೆಟಿವ್ ಬಂದಿರುವ ಹಿನ್ನಲೆಯಲ್ಲಿ ರೋಹಿತ್ ಶರ್ಮಾ, ದೀಪಕ್ ಚಹಾರ್ ಸೇರಿದಂತೆ ಕೆಲವು ಆಟಗಾರರು ಈಗಾಗಲೇ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ದೀಪಕ್ ಹೂಡ ಹಾಗೂ ಶಾರ್ದೂಲ್ ಠಾಕೂರ್ ಇಂದು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಲಿದ್ದು, ಬೌಲರ್ಸ್‌ಗಳು ಕೂಡ ಬೆವರಿಳಿಸಲಿದ್ದಾರೆ.

ಭಾರತ-ವೆಸ್ಟ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ
ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ:
1ನೇ ODI, ಫೆಬ್ರವರಿ 6, ಭಾನುವಾರ, ಅಹಮದಾಬಾದ್ (1PM)
2ನೇ ODI, ಫೆಬ್ರವರಿ 9, ಬುಧವಾರ, ಅಹಮದಾಬಾದ್ (1PM)
3ನೇ ODI, ಫೆಬ್ರವರಿ 11, ಶುಕ್ರವಾರ, ಅಹಮದಾಬಾದ್ (1PM)
ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಈ ಮೊದಲು ಆಯ್ಕೆಗೊಂಡಿದ್ದ ಟೀಂ ಇಂಡಿಯಾ 18 ಸದಸ್ಯರ ಹೆಸರು ಈ ಕೆಳಗಿನಂತಿದೆ.
ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications