For Quick Alerts
ALLOW NOTIFICATIONS  
For Daily Alerts
 

Ravindra Jadeja: ವೆಸ್ಟ್ ಇಂಡೀಸ್ ವಿರುದ್ಧ ಕಪಿಲ್ ದೇವ್, ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ರವೀಂದ್ರ ಜಡೇಜಾ

ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿತು.

ಭಾರತದ ಎಡಗೈ ಸ್ಪಿನ್ ಜೋಡಿಯಾದ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಒಟ್ಟು ಏಳು ವಿಕೆಟ್‌ ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 114 ರನ್‌ಗಳಿಗೆ ಕಟ್ಟಿಹಾಕಿದರು. ನಂತರ, ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ ಅರ್ಧಶತಕ ಗಳಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.

 IND vs WI: Ravindra Jadeja Overtakes Kapil Dev And Anil Kumble Record Against West Indies

ಭಾರತ ತಂಡದ ವೇಗಿಗಳಾದ ಹಾರ್ದಿಕ್ ಪಾಂಡ್ಯ, ಮುಖೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ಮೂರು ಆರಂಭಿಕ ವಿಕೆಟ್‌ಗಳೊಂದಿಗೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ನಂತರ ಅನುಭವಿ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾದರು. ಆರು ಓವರ್‌ಗಳಲ್ಲಿ 37 ರನ್‌ ನೀಡಿ 3 ವಿಕೆಟ್ ಪಡೆದರು.

ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಮತ್ತು ರೊವ್ಮನ್ ಪೊವೆಲ್ ಅವರ ದೊಡ್ಡ ವಿಕೆಟ್‌ಗಳನ್ನು ಕಿತ್ತು ರವೀಂದ್ರ ಜಡೇಜಾ ಆತಿಥೇಯರಿಗೆ ಆಘಾತ ನೀಡಿದರು. ನಂತರ 18ನೇ ಓವರ್‌ನಲ್ಲಿ ರೊಮಾರಿಯೋ ಶೆಫರ್ಡ್ ವಿಕೆಟ್‌ ಪಡೆಯುವ ಮೂಲಕ ದಾಖಲೆಯ ಪುಸ್ತಕಕ್ಕೆ ಸೇರಿದರು.

ಮೂರು ವಿಕೆಟ್‌ಗಳೊಂದಿಗೆ ರವೀಂದ್ರ ಜಡೇಜಾ ತಮ್ಮ ಏಕದಿನ ವಿಕೆಟ್‌ಗಳ ಸಂಖ್ಯೆಯನ್ನು ಕೇವಲ 175 ಇನ್ನಿಂಗ್ಸ್‌ಗಳಲ್ಲಿ 194ಕ್ಕೆ ಏರಿಸಿಕೊಂಡರು. ಅದರಲ್ಲಿ 44 ವಿಕೆಟ್‌ಗಳು ವೆಸ್ಟ್ ಇಂಡೀಸ್ ವಿರುದ್ಧ ಬಂದಿವೆ ಎಂಬುದು ಗಮನಾರ್ಹ.

34 ವರ್ಷದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

 IND vs WI: Ravindra Jadeja Overtakes Kapil Dev And Anil Kumble Record Against West Indies

ರವೀಂದ್ರ ಜಡೇಜಾ ಅವರು ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಮತ್ತು ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು.

ಗಮನಾರ್ಹವಾಗಿ, ರವೀಂದ್ರ ಜಡೇಜಾ ಅವರು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯಗಳಲ್ಲಿ ಕೆರಿಬಿಯನ್ ನಾಡಿನ ಕರ್ಟ್ನಿ ವಾಲ್ಷ್ ಅವರ 44 ವಿಕೆಟ್‌ಗಳ ದಾಖಲೆಯನ್ನು ಸಮಬಲಗೊಳಿಸಿದರು. ಮುಂದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರೂ ಅವರ ದಾಖಲೆ ಅಳಿಸಿ ಹಾಕಿಲಿದ್ದಾರೆ.

ರವೀಂದ್ರ ಜಡೇಜಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 30 ಏಕದಿನ ಪಂದ್ಯಗಳಲ್ಲಿ 28.68ರ ಸರಾಸರಿಯಲ್ಲಿ 4.90ರ ಎಕಾನಮಿ ದರದೊಂದಿಗೆ 44 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಇದುವರೆಗೆ ಒಂದು ಬಾರಿ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ.

ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕೇವಲ 18 ಏಕದಿನ ಇನ್ನಿಂಗ್ಸ್‌ಗಳಲ್ಲಿ 37 ವಿಕೆಟ್‌ಗಳೊಂದಿಗೆ ರವೀಂದ್ರ ಜಡೇಜಾ ಅವರನ್ನು ನಿಕಟವಾಗಿ ಅನುಸರಿಸುತ್ತಾರೆ. ಆದರೆ, ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ಸರಣಿಗಾಗಿ ಮೊಹಮ್ಮದ್ ಶಮಿ ಭಾರತದ ಏಕದಿನ ತಂಡದ ಭಾಗವಾಗಿಲ್ಲ.

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್‌ಗಳು

1. ರವೀಂದ್ರ ಜಡೇಜಾ - 30 ಪಂದ್ಯಗಳಲ್ಲಿ 44 ವಿಕೆಟ್
2. ಕಪಿಲ್ ದೇವ್ - 42 ಪಂದ್ಯಗಳಲ್ಲಿ 43 ವಿಕೆಟ್
3. ಅನಿಲ್ ಕುಂಬ್ಳೆ - 26 ಪಂದ್ಯಗಳಲ್ಲಿ 41 ವಿಕೆಟ್
4. ಮೊಹಮ್ಮದ್ ಶಮಿ - 18 ಪಂದ್ಯಗಳಲ್ಲಿ 37 ವಿಕೆಟ್
5. ಹರ್ಭಜನ್ ಸಿಂಗ್ - 31 ಪಂದ್ಯಗಳಲ್ಲಿ 33 ವಿಕೆಟ್

Story first published: Friday, July 28, 2023, 10:11 [IST]
Other articles published on Jul 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+