ಭಾರತ vs ವಿಂಡೀಸ್ 2ನೇ ಏಕದಿನ: ಶಾಯ್ ಹೋಪ್ ಶತಕ; ಭಾರತಕ್ಕೆ 312 ರನ್‌ಗಳ ಗುರಿ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ವೆಸ್ಟ್ ಇಂಡೀಸ್ ಶಾಯ್ ಹೋಪ್ ಆಕರ್ಷಕ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿ ಟೀಂ ಇಂಡಿಯಾಗೆ 312 ರನ್‌ಗಳ ಗುರಿಯನ್ನು ನೀಡಿದೆ.
ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಅತಿಥೇಯ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೈಲ್ ಮೇಯರ್ಸ್ ಮತ್ತು ಶಾಯ್ ಹೋಪ್ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟರು. ಈ ಜೋಡಿ 65 ರನ್‌ಗಳ ಜೊತೆಯಾಟವನ್ನಾಡಿತು. ಕೈಲ್ ಮೇಯರ್ಸ್ ಸ್ಫೋಟಕ 39 ರನ್ ಕಲೆಹಾಕಿ ಔಟ್ ಆದರೆ ಮತ್ತೋರ್ವ ಆರಂಭಿಕ ಆಟಗಾರ ಶಾಯ್ ಹೋಪ್ 115 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾಮ್ರಾ ಬ್ರೂಕ್ಸ್ 35 ರನ್ ಗಳಿಸಿದರೆ, ಬ್ರಾಂಡನ್ ಕಿಂಗ್ ಡಕ್ ಔಟ್ ಆದರು. ನಾಯಕ ನಿಕೋಲಸ್ ಪೂರನ್ 74 ರನ್ ಕಲೆಹಾಕಿ ಔಟ್ ಆದರು, ರೋವ್‌ಮನ್ ಪೋವೆಲ್ 13 ರನ್, ರೋಮಾರಿಯೋ ಶೆಫರ್ಡ್ ಅಜೇಯ 15 ರನ್ ಮತ್ತು ಅಖೆಲ್ ಹೊಸೈನ್ ಅಜೇಯ 6 ರನ್ ಕಲೆಹಾಕಿದರು.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದ ಲೈವ್ ಸ್ಕೋರ್ ಅಪ್‌ಡೇಟ್ ಈ ಕೆಳಕಂಡಂತಿದೆ.

ಟೀಮ್ ಇಂಡಿಯಾ ಬೌಲಿಂಗ್
ಟೀಮ್ ಇಂಡಿಯಾ ಪರ ಈ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವೇಶ್ ಖಾನ್ 6 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೇ 54 ರನ್ ನೀಡಿ ದುಬಾರಿಯಾಗಿದ್ದಾರೆ. ಶಾರ್ದೂಲ್ ಠಾಕೂರ್ 7 ಓವರ್ ಬೌಲಿಂಗ್ ಮಾಡಿ 54 ರನ್ ನೀಡಿ 3 ವಿಕೆಟ್ ಪಡೆದರು. ಇನ್ನುಳಿದಂತೆ ದೀಪಕ್ ಹೂಡಾ, ಯುಜುವೇಂದ್ರ ಚಹಲ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ಪಡೆದಿದ್ದಾರೆ.

ಭಾರತ ಆಡುವ ಬಳಗ
ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡಕ್ಕಿಂತ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಕಳೆದ ಪಂದ್ಯದಲ್ಲಿ ದುಬಾರಿಯಾಗಿ ಯಾವುದೇ ವಿಕೆಟ್ ಪಡೆಯದೇ ಮಂಕಾಗಿದ್ದ ಪ್ರಸಿದ್ಧ್ ಕೃಷ್ಣ ಬದಲಾಗಿ ಈ ಪಂದ್ಯದಲ್ಲಿ ಅವೇಶ್ ಖಾನ್‌ಗೆ ಅವಕಾಶ ನೀಡಲಾಗಿದೆ. ಈ ಮೂಲಕ ಅವೇಶ್ ಖಾನ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.
ಆಡುವ ಬಳಗ: ಶಿಖರ್ ಧವನ್(ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

ವೆಸ್ಟ್ ಇಂಡೀಸ್ ಆಡುವ ಬಳಗ
ಶಾಯ್ ಹೋಪ್(ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ಹ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್(ನಾಯಕ), ರೋವ್ಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಹೇಡನ್ ವಾಲ್ಷ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications