ಟೀಮ್ ಇಂಡಿಯಾ ನಾಯಕನಾಗಿ ಹೊಸ ಇತಿಹಾಸ ಬರೆಯಲು ಸಜ್ಜಾದ ಶಿಖರ್ ಧವನ್

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಅಂತಿಮ ಏಕದಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಮೊದಲ ಎರಡು ಪಂದ್ಯಗಳಲ್ಲಿಯೂ ರೋಚಕ ಗೆಲುವು ಸಾಧಿಸಿದ್ದು ಸರಣಿಯನ್ನು ಈಗಾಗಲೇ ತನ್ ತೆಕ್ಕೆಗೆ ಹಾಕಿಕೊಂಡಿದೆ. ಇದೀಗ ಅಂತಿಮ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್‌ಸ್ವೀಪ್ ಮೂಲಕ ವಶಕ್ಕೆ ಪಡೆಯುವ ಉತ್ಸಾಹದಲ್ಲಿದೆ ಭಾರತ ತಂಡ. ಮತ್ತೊಂದೆಡೆ ತವರಿನಲ್ಲಿಯೇ ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳಲು ಆತಿಥೇಯ ತಂಡ ಸರ್ವ ಪ್ರಯತ್ನವನ್ನು ಕೂಡ ನಡೆಸಲಿದೆ.
ಮೊದಲ ಎರಡು ಪಂದ್ಯದಲ್ಲಿಯೂ ಎರಡು ತಂಡಗಳು ಕೂಡ ರೋಚಕ ಹಣಾಹಣಿ ನಡೆದಿತ್ತು. ಎರಡು ಪಂದ್ಯದಲ್ಲಿಯೂ ಅಂತಿಮ ಓವರ್‌ನಲ್ಲಿಯೇ ಫಲಿತಾಂಶ ಪಡೆದಿರುವುದು ಪಂದ್ಯಗಳ ರೋಚಕತೆಗೆ ಸಾಕ್ಷಿಯಾಗಿದೆ. ಹಾಗಿದ್ದರೂ ಅಂತಿಮ ಹಂತದಲ್ಲಿ ಭಾರತ ಮೇಲುಗೈ ಸಾಧಿಸುವ ಮೂಲಕ ಸರಣಿಯನ್ನು ವಶಕ್ಕೆ ಪಡೆದಿದೆ. ಇಗೀಗ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದೆ.

ಕೆರಿಬಿಯನ್ ನೆಲದಲ್ಲಿ ಏಕದಿನ ಸರಣಿ ಗೆದ್ದ ನಾಯಕರು
ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನಾಡಿನಲ್ಲಿ ಭಾರತ ಮತ್ತೊಮ್ಮೆ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸಿದ್ದು ವಿಂಡೀಸ್‌ನಲ್ಲಿ ಈ ಸಾಧನೆ ಮಾಡಿದ ಐದನೇ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸೌರವ್ ಗಂಗೂಲಿ, ಎಂಎಸ್ ಧೋನಿ, ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ಕೆರಿಬಿಯನ್ ನಾಡಿನಲ್ಲಿ ಸರಣಿ ಗೆದ್ದ ಭಾರತೀಯ ನಾಯಕರಾಗಿದ್ದಾರೆ.

ಧವನ್ ಮುಂದಿದೆ ವಿಶೇಷ ಸಾಧನೆಯ ಅವಕಾಶ
ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ ಭಾರತ ತಂಡ. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನಾಡಿನಲ್ಲಿ ವಿಶೇಷ ಸಾಧನೆ ಮಾಡುವ ಅವಕಾಶ ನಾಯಕನಾಗಿ ಶಿಖರ್ ಧವನ್‌ಗೆ ಇದೆ. ವೆಸ್ಟ್ ಇಂಡೀಸ್ ವಿರುದ್ಧ ಅದರದ್ದೇ ತವರಿನಲ್ಲಿ ಮೂರು ಅಥವಾ ಅದಕ್ಕೂ ಹೆಚ್ಚಿನ ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಯಾವ ನಾಯಕ ಕೂಡ ವೈಟ್‌ವಾಶ್ ಮಾಡಿದ ಸಾಧನೆ ಮಾಡಿಲ್ಲ. ಇದನ್ನು ಮಾಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆ ಪಡೆಯುವ ಅವಕಾಶ ಶಿಖರ್ ಧವನ್ ಮುಂದಿದೆ.

ವೆಸ್ಟ್ ಇಂಡೀಸ್ ತವರಿನಲ್ಲಿ ಭಾರತದ ಏಕದಿನ ಸಾಧನೆ
ವೆಸ್ಟ್ ಇಂಡೀಸ್ ತವರಿನಲ್ಲಿ ಭಾರತ ಮೊದಲ ಬಾರಿಗೆ ಏಕದಿನ ಸರಣಿ ಗೆಲ್ಲಲು 2002ರ ವರೆಗೆ ಕಾಯಬೇಕಾಯಿತು. 2002ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಅದರದ್ದೇ ನಲದಲ್ಲಿ ಏಕದಿನ ಸರಣಿಯಲ್ಲಿ ಸೋಲಿಸಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಅದಾದ ಬಳಿಕ 2009ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಸರಣಿಯನ್ನು ಗೆದ್ದ ಭಾರತ ತಂಡ ಬಳಿಕ 2011ರಲ್ಲಿ ಸುರೇಶ್ ರೈನಾ ನಾಯಕತ್ವದಲ್ಲಿಯೂ 3-2 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆಯಿತು. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು. ಈ ಸರಣಿಯಲ್ಲಿ ಒಂದು ಪಂದ್ಯ ಮಳೆಯಿಂದಾಗಿ ಫಲಿತಾಂಶ ಪಡೆದಿರಲಿಲ್ಲ. ಇನ್ನು 2017ರಲ್ಲಿ 3-1 ಅಂತರದಿಂದ ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ಭಾರತ ಮತ್ತೊಮ್ಮೆ ಸರಣಿಯನ್ನು ಗೆದ್ದುಕೊಂಡಿದೆ.

ಅಂತಿಮ ಪಂದ್ಯಕ್ಕೆ ಇತ್ತಂಡಗಳ ಸ್ಕ್ವಾಡ್
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್ (ನಾಯಕ), ಕೈಲ್ ಮೇಯರ್ಸ್, ಶಮರ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಹೇಡನ್ ವಾಲ್ಷ್, ಕೀಮೋ ಪಾಲ್, ಜೇಸನ್ ಹೋಲ್ಡರ್, ಕೀಸಿ ಕಾರ್ಟಿ
ಭಾರತ ತಂಡ: ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications