Shubman Gill: 27 ಏಕದಿನ ಪಂದ್ಯಗಳ ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಶುಭ್ಮನ್ ಗಿಲ್
ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 200 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಭಾರತದ ನಾಲ್ವರು ಬ್ಯಾಟರ್‌ಗಳು ತಲಾ ಅರ್ಧಶತಕ ಬಾರಿಸಿ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇದೇ ವೇಳೆ ಭಾರತೀಯ ಬ್ಯಾಟರ್ ಶುಭ್ಮನ್ ಗಿಲ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಶುಭ್ಮನ್ ಗಿಲ್ 50 ಓವರ್‌ಗಳ ಸ್ವರೂಪದಲ್ಲಿ 27 ಪಂದ್ಯಗಳ ನಂತರ ಅತಿ ಹೆಚ್ಚು 1437 ರನ್ ಗಳಿಸುವ ಮೂಲಕ ಪಾಕಿಸ್ತಾನದ ಇಮಾಮ್-ಉಲ್-ಹಕ್ ಅವರನ್ನು ಹಿಂದಿಕ್ಕಿದರು.
ಈ ಅದ್ಭುತ ಸಾಧನೆಗೆ ಯುವ ಆರಂಭಿಕನ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಯಾಣ ಏರಿಳಿತಗಳಿಂದ ತುಂಬಿತ್ತು. ಹಿಂದಿನ ಪಂದ್ಯಗಳಲ್ಲಿ ದೊಡ್ಡ ರನ್‌ಗಳನ್ನು ಗಳಿಸಲು ವಿಫಲವಾದ ನಂತರ, ಶುಭ್ಮನ್ ಗಿಲ್ ತಮ್ಮ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಸರಣಿ ನಿರ್ಣಾಯಕ ಪಂದ್ಯದಲ್ಲಿ ಇಶಾನ ಕಿಶನ್ ಜೊತೆ ಭವ್ಯವಾದ ಇನ್ನಿಂಗ್ಸ್ ಕಟ್ಟಿದರು. ಗಿಲ್ ಅವರ ಅದ್ಭುತ ಕೌಶಲ್ಯ ಮತ್ತು ಕ್ಲಾಸ್ ಆಟವು ಭಾರತ ತಂಡವು ದೊಡ್ಡ ಮೊತ್ತ ಗಳಿಸುವಲ್ಲಿ ನೆರವಾಯಿತು.
ತನ್ನ ಇನ್ನಿಂಗ್ಸ್‌ನುದ್ದಕ್ಕೂ ಶುಭ್ಮನ್ ಗಿಲ್ ಮೈದಾನದ ಎಲ್ಲಾ ಭಾಗಗಳಿಗೆ ಚೆಂಡನ್ನು ಕಳಿಸಿದರು. ತಮ್ಮ ಸಹ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರೊಂದಿಗೆ ಸೇರಿ ಮೊದಲ ವಿಕೆಟ್‌ಗೆ 143 ರನ್‌ಗಳ ಜೊತೆಯಾಟ ನೀಡಿದರು. ಕಿಶನ್ ತಂಡಕ್ಕೆ ಪ್ರಮುಖ 77 ರನ್‌ಗಳ ಕೊಡುಗೆ ನೀಡಿದರು.
ಶುಭ್ಮನ್ ಗಿಲ್ ಮತ್ತೊಂದು ದಾಖಲೆ ಮುರಿಯುವ ಸನಿಹದಲ್ಲಿದ್ದರು
ಅಲ್ಲದೆ, ಶುಭ್ಮನ್ ಗಿಲ್ ಮತ್ತೊಂದು ಪ್ರಮುಖ ಭಾರತೀಯ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದರು. ಅಂತಿಮ ಪಂದ್ಯದಲ್ಲಿ ಗಿಲ್ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರೆ, ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ಪರ ಐದು ಶತಕಗಳನ್ನು ಗಳಿಸಿದ ವೇಗದ ಬ್ಯಾಟರ್ ಆಗುತ್ತಿದ್ದರು.
ಶುಭ್ಮನ್ ಗಿಲ್ ಅವರು 27 ಇನ್ನಿಂಗ್ಸ್‌ಗಳ ನಂತರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಇನ್ನು ಪಾಕಿಸ್ತಾನದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಇಮಾಮ್-ಉಲ್-ಹಕ್ ಅವರು 27 ಇನ್ನಿಂಗ್ಸ್‌ಗಳ ನಂತರ 1381 ರನ್‌ಗಳನ್ನು ಗಳಿಸಿದ್ದರು.
ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ರಿಯಾನ್ ಟೆನ್ ಡೋಸ್ಚೇಟ್ 1353 ರನ್‌ಗಳೊಂದಿಗೆ ಒಂದೇ ಸಂಖ್ಯೆಯ ರನ್‌ಗಳನ್ನು ಹಂಚಿಕೊಂಡು ಮೂರನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಇಂಗ್ಲೆಂಡ್‌ನ ಜೊನಾಥನ್ ಟ್ರಾಟ್ 1342 ರನ್‌ಗಳೊಂದಿಗೆ ನಿಕಟವಾಗಿ ಹಿಂದಿದ್ದಾರೆ.
ಈವರೆಗೆ ಶುಭ್ಮನ್ ಗಿಲ್ ಅವರ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವು ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದೆ. ಅವರ ಇತ್ತೀಚಿನ ಬ್ಯಾಟಿಂಗ್ ಪ್ರದರ್ಶನದಿಂದ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ.
ಭಾರತ ತಂಡವು ದ್ವಿಪಕ್ಷೀಯ ಸರಣಿಗಳಿಗೆ ಸಜ್ಜಾಗುತ್ತಿರುವಾಗ, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2023ರಲ್ಲಿ ಶುಭ್ಮನ್ ಗಿಲ್ ಪ್ರದರ್ಶಿಸಿದ ಅದೇ ಅದ್ಭುತ ಪ್ರತಿಭೆಯನ್ನು ಪುನರಾವರ್ತಿಸುತ್ತಿದ್ದಾರೆ. ಮುಂಬರುವ 2023ರ ಏಷ್ಯಾ ಕಪ್ ಮತ್ತು 2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications