IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?

ಸದ್ಯ ವೆಸ್ಟ್ ಇಂಡೀಸ್ ನೆಲದಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಉಭಯ ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿದ ಟೀಮ್ ಇಂಡಿಯಾ ವೈಟ್ ವಾಶ್ ಸಾಧನೆ ಮಾಡಿತ್ತು. ಇದೀಗ ಆರಂಭವಾಗಿರುವ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿರುವ ಟೀಮ್ ಇಂಡಿಯಾ ಈ ಸರಣಿಯನ್ನು ಸಹ ವಶಪಡಿಸಿಕೊಳ್ಳುವತ್ತ ಕಣ್ಣಿಟ್ಟಿದೆ.
ಇನ್ನು ಈ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡುತ್ತಿರುವ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಏಕದಿನ ಸರಣಿ ಹಾಗೂ ಮೊದಲೆರಡು ಟಿ ಟ್ವೆಂಟಿ ಪಂದ್ಯಗಳಲ್ಲಿ ಹೆಚ್ಚೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಇದೀಗ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನೀಡಿದ್ದ 165 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತದ ಪರ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಪೈಕಿ ಸೂರ್ಯಕುಮಾರ್ ಯಾದವ್ 44 ಎಸೆತಗಳಲ್ಲಿ ಅಬ್ಬರದ 76 ರನ್ ಬಾರಿಸಿ ಮಿಂಚಿದರು. ಈ ಮೂಲಕ ತಾನು ಆರಂಭಿಕ ಆಟಗಾರನಾಗಿ ಕಣಕ್ಕಿಳಿದರೂ ಸಹ ಉತ್ತಮ ಪ್ರದರ್ಶನ ನೀಡಬಲ್ಲೆ ಎಂಬುದನ್ನು ಸೂರ್ಯಕುಮಾರ್ ಯಾದವ್ ಸಾಬೀತುಪಡಿಸಿದರು. ಹೀಗೆ ಪಂದ್ಯದಲ್ಲಿ ಅಬ್ಬರಿಸಿದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ದುಬಾರಿ ಕಾರೊಂದನ್ನು ಖರೀದಿಸಿರುವ ಸುದ್ದಿ ಹರಿದಾಡುತ್ತಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಕೆಳಕಂಡಂತಿದೆ.

ಪೋರ್ಷೆ ಟರ್ಬೋ 911 ಕಾರು ಖರೀದಿ
ಕಾರ್ ಪ್ರಿಯನಾಗಿರುವ ಸೂರ್ಯಕುಮಾರ್ ಯಾದವ್ ಈಗಾಗಲೇ ತಮ್ಮ ಬಳಿ ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಸದ್ಯ ಇದೀಗ ಸೂರ್ಯಕುಮಾರ್ ಯಾದವ್ ಪೋರ್ಷೆ ಟರ್ಬೋ 911 ಕಾರನ್ನು ಖರೀದಿ ಮಾಡಿದ್ದಾರೆ. ಈ ಸುದ್ದಿಯನ್ನು ಸ್ವತಃ ಸೂರ್ಯಕುಮಾರ್ ಯಾದವ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿ ಮೂಲಕ ತಿಳಿಸಿದ್ದು, ಕಾರಿನ ವಿಡಿಯೋವನ್ನು ಹಂಚಿಕೊಂಡು 'ರೆಡಿ ಫಾರ್ ಡಿಲವರಿ' ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ದುಬಾರಿ ಬೆಲೆಯ ಕಾರನ್ನು ಖರೀದಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಈ ದುಬಾರಿ ಕಾರಿನ ಬೆಲೆ ಭಾರತದಲ್ಲಿ 3 ಕೋಟಿ 8 ಲಕ್ಷ ರೂಪಾಯಿಗಳಾಗಿದೆ.

ಸೂರ್ಯಕುಮಾರ್ ಯಾದವ್ ಬಳಿ ಇರುವ ಕಾರ್ ಕಲೆಕ್ಷನ್
ಸೂರ್ಯಕುಮಾರ್ ಯಾದವ್ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈಗಾಗಲೇ ಬಿಎಮ್ ಡಬ್ಲ್ಯೂ 5 ಸಿರೀಸ್‌ನ 530ಡಿ ಎಮ್ ಸ್ಟೋರ್ಟ್, ಆಡಿ ಎ6, ರೇಂಜ್ ರೋವರ್, ಫಾರ್ಚುನರ್ ಹಾಗೂ ಹ್ಯುಂಡೈ ಐ20 ಕಾರುಗಳನ್ನು ಸೂರ್ಯಕುಮಾರ್ ಯಾದವ್ ತಮ್ಮ ಬಳಿ ಹೊಂದಿದ್ದಾರೆ.

ಏಷ್ಯಾ ಕಪ್ ಮತ್ತು ವಿಶ್ವಕಪ್‌ನಲ್ಲಿ ಸೂರ್ಯ ಆಡುವುದು ಖಚಿತ
ಇನ್ನು ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಸಾಲುಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬರುವ ಏಷ್ಯಾಕಪ್ ಟೂರ್ನಿ ಹಾಗೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳಿಗೂ ಬಿಸಿಸಿಐ ಆಯ್ಕೆಗಾರರು ಆಯ್ಕೆ ಮಾಡುವುದು ಖಚಿತ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications