For Quick Alerts
ALLOW NOTIFICATIONS  
For Daily Alerts
 

Ind vs WI: ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲವಾದ 3 ದುರದೃಷ್ಟವಂತ ಕ್ರಿಕೆಟಿಗರು!

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾದ ಆಟಗಾರರ ಬಳಗವನ್ನು ಇಂದು ಬಿಸಿಸಿಐ ಹೆಸರಿಸಿದೆ. ಎರಡು ಟೆಸ್ಟ್ ಮೂರು ಏಕದಿನ ಪಂದ್ಯ ಮತ್ತು ಐದು ಟಿ20 ಪಂದ್ಯಗಳ ಸರಣಿಗಾಗಿ ಭಾರತ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಈ ಪೈಕಿ ಟೆಸ್ಟ್ ಸರಣಿಯಲ್ಲಿ ಹೆಚ್ಚು ಯುವ ಆಟಗಾರರಿಗೆ ಅವಕಾಶ ದೊರೆಯುವ ನಿರೀಕ್ಷೆಯಿತ್ತು.

ಅದರಂತೆ ಋತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಭಾರತದ ಟೆಸ್ಟ್ ತಂಡದಲ್ಲಿ ಚೊಚ್ಚಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಅರ್ಹತೆಯಿದ್ದರೂ ಅವಕಾಶ ದೊರೆಯದ ಕೆಲ ಆಟಗಾರರು ನಿರಾಸೆ ಅನುಭವಿಸಿದ್ದಾರೆ. ಅಂಥಾ ಮೂವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

These 3 cricketers unlucky to get a chance in Indian test squad against West Indies

ಸೂರ್ಯಕುಮಾರ್ ಯಾದವ್

ಟೀಮ್ ಇಂಡಿಯಾದ ವೈಟ್‌ಬಾಲ್ ಕ್ರಿಕೆಟ್‌ನ ಸೆನ್ಸೇಶನಲ್ ಆಟಗಾರ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ ನಡೆದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಆದರೆ ಇದೀಗ ಅಜಿಂಕ್ಯಾ ರಹಾನೆ ಅವರ ಫಾರ್ಮ್‌ನಿಂದ ಆಯ್ಕೆಗಾರರು ಸಂತುಷ್ಟರಾಗಿದ್ದು ಅವರಿಗೆ ಅವಕಾಶ ನೀಡಲಾಗಿದೆ.

ದೇಶೀಯ ಕ್ರಿಕೆಟ್‌ನಲ್ಲಿ ರಣಜಿ ಟೂರ್ನಿಯಲ್ಲಿ ಉತ್ತಮ ಅಂಕಿಅಂಶಗಳನ್ನು ಹೊಂದಿರುವ ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡಕ್ಕೂ ಸೇರ್ಪಡೆಯಾದರೆ ತಂಡಕ್ಕೆ ವಿಶೇಷ ಬಲ ದೊರೆಯಬಹುದು ಎಂಬ ಅಭಿಪ್ರಾಯಗಳಿದೆ. ಹೀಗಾಗಿ ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸೂರ್ಯಕುಮಾರ್ ಅವರನ್ನು ನೋಡಲು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ವಿಂಡೀಸ್ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸದಿರುವುದಕ್ಕೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಭಿಮನ್ಯು ಈಶ್ವರನ್

ಈ ಪಟ್ಟಿಯಲ್ಲಿರ ಬರುವ ಮತ್ತೊಂದು ಹೆಸರು ಅಭಿಮನ್ಯು ಈಶ್ವರನ್. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಬಂಗಾಳದ ಪರವಾಗಿ ಮತ್ತು ಭಾರತ ಏ ತಂಡದ ಪರವಾಗಿ ಅದ್ಭುತವಾಗಿ ಪ್ರದರ್ಶನ ನಿಡುತ್ತಿರುವ ಅಭಿಮನ್ಯು ಈಶ್ವರನ್ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 22 ಶತಕ ಹಾಗೂ 26 ಅರ್ಧ ಶತಕ ಬಾರಿಸಿರುವ ಅಭಿಮನ್ಯು ಈಶ್ವರನ್ 48ರಷ್ಟು ಅದ್ಭುತ ಸರಾಸರಿ ಹೊಂದಿದ್ದಾರೆ. ಮೂಲತಃ ಆರಂಭಿಕ ಆಟಗಾರನಾಗಿದ್ದರೂ ಸುದೀರ್ಘ ಇನ್ನಿಂಗ್ಸ್‌ಗಳನ್ನು ಆಡುವ ಸಾಮರ್ಥ್ಯ ಹೊಂದಿರುವ ಕಾರಣ ಚೇತೇಶ್ವರ್ ಪೂಜಾರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರ. ಆದರೆ ಅಭಿಮಾನ್ಯು ಈಶ್ವರನ್‌ಗೆ ಈ ಬಾರಿಯೂ ಅವಕಾಶ ದೊರೆಯದಿರುವುದು ನಿಜಕ್ಕೂ ದುರದೃಷ್ಠ.

ಸರ್ಫರಾಜ್ ಖಾನ್

ದೇಶೀಯ ಕ್ರಿಕೆಟ್‌ನ ರನ್ ಮಷೀನ್ ಎನಿಸಿಕೊಂಡಿರುವ ಸರ್ಫರಾಜ್ ಖಾನ್ ಸತತವಾಗಿ ಎರಡ್ಮೂರು ಆವೃತ್ತಿಗಳಲ್ಲಿ ಅಮೋಘ ಪ್ರದರ್ಶನ ನಿಡಿಕೊಂಡೇ ಬರುತ್ತಿದ್ದಾರೆ. ಆದರೆ ಇಂಥಾ ಅದ್ಭುತ ಪ್ರತಿಭೆಗೆ ರಾಷ್ಟ್ರೀಯ ತಂಡದಲ್ಲಿ ಈವರೆಗೆ ಒಮ್ಮೆಯೂ ಅವಕಾಶ ದೊರೆತಿಲ್ಲ ಎಂಬುದು ವಿಪರ್ಯಾಸ. 2021-22ರ ಆವೃತ್ತಿಯಲ್ಲಿ ಸರ್ಫರಾಜ್ ಕೇವಲ 6 ಪಂದ್ಯಗಳಲ್ಲಿ ಬರೊಬ್ಬರಿ 122.75ರ ಸರಾಸರಿಯಲ್ಲಿ 982 ರನ್‌ಗಳನ್ನು ಗಳಿಸಿದ್ದಾರೆ. 2022-23ರಲ್ಲಿಯೂ 92.66ರ ಸರಾಸರಿಯಲ್ಲಿ 556 ರನ್‌ಗಳನ್ನು ಗಳಿಸಿದ್ದಾರೆ ಸರ್ಫರಾಜ್ ಖಾನ್. ಆದರೆ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ತಂಡದಲ್ಲಿಯೂ ಸರ್ಫರಾಜ್‌ಗೆ ಅವಕಾಶ ದೊರೆತಿಲ್ಲ.

Story first published: Friday, June 23, 2023, 19:18 [IST]
Other articles published on Jun 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+