ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿಯೇ 150ಕ್ಕೂ ಅಧಿಕ ರನ್‌ಗಳಿಸಿದ ಮೂವರು ಭಾರತೀಯರ ಬ್ಯಾಟರ್‌ಗಳು!
ಕ್ರಿಕೆಟ್‌ನ ಮೂಲ ಮಾದರಿ ಎನಿಸಿಕೊಂಡಿರುವ ಟೆಸ್ಟ್ ಮಾದರಿಯಲ್ಲಿ ಪದಾರ್ಪಣೆ ಮಾಡುವುದು ಎಂದರೆ ಯಾವುದೇ ಕ್ರಿಕೆಟಿಗನಿಗೂ ಕೂಡ ಅದು ಎಷ್ಟು ಖುಷಿ ನೀಡುವು ಕ್ಷಣವೋ ಅಷ್ಟೇ ಆತಂಕದ ಕ್ಷಣವೂ ಆಗಿರುತ್ತದೆ. ಮೊದಲ ಬಾರಿಗೆ ಸುದೀರ್ಘ ಮಾದರಿಯಲ್ಲಿ ದೇಶವನ್ನು ಪ್ರತಿನಿಧಿಸುವ ಅತ್ಯಂತ ವಿಶೇಷ ಸಂದರ್ಭ ಅದು. ಆಟಗಾರನ ಸಂಪೂರ್ಣ ಕೌಶಲ್ಯವನ್ನು ಈ ರೆಡ್ ಬಾಲ್ ಕ್ರಿಕೆಟ್ ಪರೀಕ್ಷಿಸುವ ಕಾರಣ ಇಲ್ಲಿ ಕ್ರಿಕೆಟ್ ಜ್ಞಾನ ಮಾತ್ರವಲ್ಲದೆ ಆಟಗಾರರ ಮನೋಧರ್ಮ, ತಾಳ್ಮೆ, ಸಾಮರ್ಥ್ಯ ಮತ್ತು ಏಕಾಗ್ರಥೆಯನ್ನು ಕೂಡ ಪರೀಕ್ಷಿಸುತ್ತದೆ.
ಹಾಗಾಗಿಯೇ ಟೆಸ್ಟ್ ಮಾದರಿಯ ಪದಾರ್ಪಣಾ ಪಂದ್ಯದಲ್ಲಿ ಆಟಗಾರನೋರ್ವ ಬೃಹತ್ ಮೊತ್ತವನ್ನು ಬಾರಿಸುವುದನ್ನು ನೋಡಲು ದೊರೆಯುವುದು ಅತ್ಯಂತ ಅಪರೂಪ. ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಭಾರತ ಅತ್ಯಂತ ಯಶಸ್ವಿ ತಂಡಗಳ ಪೈಕಿ ಒಂದು ಎನಿಸಿದರೂ ಕೇವಲ ಮೂವರು ಕ್ರಿಕೆಟಿಗರು ಮಾತ್ರವೇ ಟೆಸ್ಟ್‌ನ ಪದಾರ್ಪಣಾ ಪಂದ್ಯದಲ್ಲಿ 150ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಹಾಗಾದರೆ ಆ ಮೂವರು ಆಟಗಾರು ಯಾರು? ಮುಂದೆ ಓದಿ..

ಯಶಸ್ವಿ ಜೈಸ್ವಾಲ್
ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಹೆಸರೇ ಯಶಸ್ವಿ ಜೈಸ್ವಾಲ್. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಜೈಸ್ವಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಡೊಮೆನಿಕಾದಲ್ಲಿ ನಡೆದ ಈ ಪಂದ್ಯದಲ್ಲಿ ಜೈಸ್ವಾಲ್ 387 ಎಸೆತಗಳನ್ನು ಎದುರಿಸಿ 171 ರನ್‌ಗಳನ್ನು ಬಾರಿಸಿದ್ದು 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಈ ಸಾಧನೆ ಮಾಡಿದರು. 150 ರನ್ನುಗಳನ್ನು ಗಳಿಸುವವರೆಗೂ ಅತ್ಯಂತ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಈ ಅವಧಿಯಲ್ಲಿ ಅವರು ಒಂದೇ ಒಂದು ಸಿಕ್ಸರ್ ಕೂಡ ಬಾರಿಸಿರಲಿಲ್ಲ. ಇನ್ನು ಯಶಸ್ವಿ ಜೈಸ್ವಾಲ್ ಪದಾರ್ಪಣಾ ಪಂದ್ಯದಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ರೋಹಿತ್ ಶರ್ಮಾ
ಪ್ರಸ್ತುತ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೂಡ ಭಾರತ ಕ್ರಿಕೆಟ್ ತಂಡದ ಪರವಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ 150ಕ್ಕೂ ಅಧಿಕ ರನ್ ಬಾರಿಸಿದ ಸಾಧನೆ ಮಾಡಿದ ಆಟಗಾರ. 2007ರ T20 ವಿಶ್ವಕಪ್ ಗೆದ್ದುಕೊಂಡ ತಂಡದಲ್ಲಿ ಭಾಗವಾಗಿದ್ದರೂ, ಏಕದಿನ ಕ್ರಿಕೆಟ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದರು ಕೂಡ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದು 2013ರಲ್ಲಿ. ಆದರೆ ತಮ್ಮ ಪದಾರ್ಪಣಾ ಪಂದ್ಯದಲ್ಲಿಯೇ ರೋಹಿತ್ ಅಬ್ಬರಿಸಿದ್ದರು. ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ ನಡೆದ ಪಂದ್ಯದಲ್ಲಿ ರೋಹಿತ್ ಚೊಚ್ಚಲ ಪಂದ್ಯವನ್ನು ಆಡಿ ಅಂದು ಭರ್ಜರಿ 177 ರನ್‌ಗಳನ್ನು ಬಾರಿಸಿದ್ದರು.
ಶಿಖರ್ ಧವನ್
ಚೊಚ್ಚಲ ಪಂದ್ಯದಲ್ಲಿ 150ಕ್ಕೂ ಅಧಿಕ ರನ್ ಬಾರಿಸಿದ ಆಟಗಾರರಲ್ಲಿ ಶಿಖರ್ ಧವನ್ ಪ್ರಪ್ರಥಮ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. 2013 ರಲ್ಲಿ ಪಿಸಿಎ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ಧವನ್ ಈ ಸಾಧನೆ ಮಾಡಿದ್ದಾರೆ. ಎಡಗೈ ಬ್ಯಾಟರ್ ಆ ಪಂದ್ಯದಲ್ಲಿ ಭರ್ಜರಿ 187 ರನ್‌ಗಳನ್ನು ಗಳಿಸಿ ಆ ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದು ಭಾರತದ ಪರವಾಗಿ ಚೊಚ್ಚಲ ಪಂದ್ಯದಲ್ಲಿ ಆಟಗಾರನೋರ್ವ ಅತಿ ಹೆಚ್ಚು ರನ್ ಆಗಿ ದಾಖಳೆಯಾಗಿ ಉಳಿದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications