For Quick Alerts
ALLOW NOTIFICATIONS  
For Daily Alerts
 

Ind vs WI: ಟೀಮ್ ಇಂಡಿಯಾದ ಗೆಲುವಿನ ಜೊತೆಗೆ ಮುರಿದ ಮೂರು ದಾಖಲೆಗಳಿದು!!

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭರ್ಜರಿಯಾಗಿ ಆರಂಭಿಸಿದೆ. ಬಾರ್ಬರೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ್ದು ವಿಂಡೀಸ್ ತಂಡವನ್ನು 114 ರನ್‌ಗಳಿಗೆ ಆಲೌಟ್ ಮಾಡಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ ಐದು ವಿಕೆಟ್ ಕಳೆದುಕೊಂಡು 23 ಓವರ್‌ಗಳಲ್ಲಿ ಗೆಲುವು ಸಾಧಿಸಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಬೌಲಿಂಗ್‌ನಲ್ಲಿ ಕುಲ್‌ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಮಿಂಚಿದ್ದರೆ ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ ಅರ್ಧ ಶತಕ ಸಿಡಿಸಿ ಗಮನಸೆಳೆದರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಈ ಪಂದ್ಯದ ಗೆಲುವಿನ ಜೊತೆಗೆ ಮೂರು ದಾಖಲೆಗಳು ಕೂಡ ಮುರಿದಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ..

Ind vs WI: These 3 records broken during Indias win in the first ODI against West Indies

ವಿಂಡೀಸ್ ವಿರುದ್ಧ ತವರಿನಾಚೆ ಭಾರತದ ಬೃಹತ್ ಗೆಲುವು(ಉಳಿದ ಎಸೆತಗಳ ಆಧಾರದಲ್ಲಿ)

ಟೀಮ್ ಇಂಡಿಯಾ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 22.5 ಓವರ್‌ಗಳಲ್ಲಿಯೇ ಮಣಿಸಿದೆ. ಈ ಮೂಲಕ ಚೆಂಡು ಉಳಿದುಕೊಂಡ ಆಧಾರದಲ್ಲಿ ವೆಸ್ಟ್ ಇಂಡಿಸ್ ತಂಡದ ವಿರುದ್ಧ ಭಾರತ ತವರಿನಾಚೆ ಸಾಧಿಸಿದ ಅತ್ಯಂತ ದೊಡ್ಡ ಗೆಲುವು ಇದಾಗಿದೆ. ಈ ಪಂದ್ಯದಲ್ಲಿ 163 ಎಸೆತಗಳು ಬಾಕಿಯಿರುವಂತೆಯೇ ಭಾರತ ಗೆಲುವು ಸಾಧಿಸಿತು. ಇದಕ್ಕೂ ಮುನ್ನ 1997ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ 101 ಎಸೆತಗಳು ಬಾಕಿಯಿವಂತೆ ಗೆಲುವು ಸಾಧಿಸಿದ್ದು ತಂಡದ ಅತ್ಯಂತ ದೊಡ್ಡ ಗೆಲುವು ಎನಿಸಿಕೊಂಡಿದೆ.

ವಿಂಡೀಸ್ ವಿರುದ್ಧ ಜಡೇಜಾ ದಾಖಲೆ

ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ರವೀಂದ್ರ ಜಡೇಜಾ ವಿಶೇಷ ದಾಖಲೆ ಬರೆದಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ವಿಮಡೀಸ್ ದಾಂಡಿಗರನ್ನು ಕ್ರೀಸ್‌ನಲ್ಲಿ ನೆಲೆನಿಲ್ಲದಂತೆ ಮಾಡಿವಲ್ಲಿ ಯಶಸ್ವಿಯಾದ ಜಡ್ಡು ಮೂರು ವಿಕೆಟ್ ಸಂಪಾದಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಇದೀಗ ವೆಸ್‌ಟ ಇಂಡೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಒಟ್ಟು 44 ವಿಕೆಟ್‌ಗಳನ್ನು ಪಡೆದುಕೊಂಡು ಈ ದಾಖಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ದಿಗ್ಗಜ ಕ್ರಿಕೆಟಿಗ ಕಪಿಲ್‌ದೇವ್ ಹೆಸರಿನಲ್ಲಿದ್ದು ವಿಂಡೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಕಪಿಲ್ 43 ವಿಕೆಟ್ ಪಡೆದುಕೊಂಡಿದ್ದರು.

ಭಾರತದ ವಿರುದ್ಧ ವಿಂಡೀಸ್ ತಂಡದ ಎರಡನೇ ಕನಿಷ್ಠ ಸ್ಕೋರ್

ಸದ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ಅತ್ಯಂತ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಅದರಲ್ಲೂ ಏಕದಿನ ಮಾದರಿಯಲ್ಲಿ ವಿಂಡೀಸ್ ಅತ್ಯಂತ ದುರ್ಬಲವಾಗಿದೆ. ಈಗಾಗಲೇ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ತಂಡ ಭಾರತದ ವಿರುದ್ಧ ಮತ್ತೊಂದು ಕಳಪೆ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ 114 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ ಎರಡನೇ ಅತ್ಯಂತ ಕನಿಷ್ಠ ಮೊತ್ತಕ್ಕ ಆಲೌಟ್ ಆದಂತಾಗಿದೆ. ತಿರುವನಂತಪುರಂನಲ್ಲಿ 2018ರಲ್ಲಿ 104 ರನ್‌ಗೆ ಆಲೌಟ್ ಆಗಿದ್ದು ಭಾರತದ ವಿರುದ್ಧದ ವಿಂಡೀಸ್ ತಂಡದ ಅತ್ಯಂತ ಕನಿಷ್ಠ ಮೊತ್ತ ಎನಿಸಿಕೊಂಡಿದೆ,

Story first published: Friday, July 28, 2023, 17:17 [IST]
Other articles published on Jul 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+