For Quick Alerts
ALLOW NOTIFICATIONS  
For Daily Alerts
 

IND vs WI: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ತಿಲಕ್ ವರ್ಮಾ, ಮುಖೇಶ್ ಕುಮಾರ್

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ಪರ ತಿಲಕ್ ವರ್ಮಾ ಮತ್ತು ಮುಖೇಶ್ ಕುಮಾರ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಗುರುವಾರ, ಆಗಸ್ಟ್ 3ರಂದು ಟ್ರಿನಿಡಾಡ್‌ನ ತಾರೌಬಾದ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಎಡಗೈ ಬ್ಯಾಟರ್ ತಿಲಕ್ ವರ್ಮಾ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವಾಡುತ್ತಿದ್ದಾರೆ.

IND vs WI: Tilak Verma And Mukesh Kumar Make T20 International Debut For India

2022ರ ಐಪಿಎಲ್ ಋತುವಿನಲ್ಲಿ 131.02ರ ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ 400 ರನ್‌ಗಳನ್ನು ಗಳಿಸಿದ ತಿಲಕ್ ವರ್ಮಾ ಅವರ ಕ್ರಿಕೆಟ್ ಪ್ರಯಾಣ ಪ್ರಾರಂಭವಾಯಿತು. ಮುಂಬೈ ಇಂಡಿಯನ್ಸ್ ತಂಡದ ನಿರಾಶಾದಾಯಕ ಅಭಿಯಾನದಲ್ಲಿ ಭರವಸೆಯ ಆಟಗಾರ ಉದಯವಾದರು.

ನಂತರದ 2023ರ ಐಪಿಎಲ್ ಪಂದ್ಯಾವಳಿಯಲ್ಲಿ ತಿಲಕ್ ವರ್ಮಾ ಕೇವಲ 11 ಪಂದ್ಯಗಳಲ್ಲಿ 343 ರನ್ ಗಳಿಸಿ ಅದ್ಭುತ ಫಾರ್ಮ್ ಮುಂದುವರೆಸಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 46 ಎಸೆತಗಳಲ್ಲಿ 84 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ತಿಲಕ್ ವರ್ಮಾ ನಿರ್ಣಾಯಕ ಪಾತ್ರ ವಹಿಸಿದರು.

ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಅವರ ಅತ್ಯಂತ ಗಮನಾರ್ಹ ಪ್ರದರ್ಶನವು ಬಂದಿತು. ಆ ಪಂದ್ಯದಲ್ಲಿ ತಿಲಕ್ ವರ್ಮಾ ಕೇವಲ 14 ಎಸೆತಗಳಲ್ಲಿ ಸ್ಫೋಟಕ 43 ರನ್ ಗಳಿಸಿ, ಪ್ರಶಂಸೆಗೆ ಪಾತ್ರರಾದರು.

IND vs WI: Tilak Verma And Mukesh Kumar Make T20 International Debut For India

ಒಂದೇ ಸರಣಿಯಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮುಖೇಶ್ ಕುಮಾರ್

ಯುವ ವೇಗಿ ಮುಖೇಶ್ ಕುಮಾರ್ ಅವರು ಒಂದೇ ಸರಣಿಯ ಎಲ್ಲಾ ಮೂರು (ಟೆಸ್ಟ್, ಏಕದಿನ ಟಿ20) ಮಾದರಿಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು.

ಟಿ ನಟರಾಜನ್ ನಂತರ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗನಾಗುವ ಮೂಲಕ ಮುಖೇಶ್ ಕುಮಾರ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರು ಬರೆದುಕೊಂಡರು.

ತಿಲಕ್ ವರ್ಮಾ ಎಲ್ಲ ಮಾದರಿಯ ಆಟಗಾರನಾಗುತ್ತಾರಾ?

ತಿಲಕ್ ವರ್ಮಾ ಅವರ ಐಪಿಎಲ್ ವೃತ್ತಿಜೀವನವು 55 ಬೌಂಡರಿಗಳು ಮತ್ತು 39 ಸಿಕ್ಸರ್‌ಗಳ ದಾಖಲೆಯೊಂದಿಗೆ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯದಿಂದ ಗುರುತಿಸಲ್ಪಟ್ಟಿದೆ. 2023ರ ಐಪಿಎಲ್ ಹರಾಜಿನಲ್ಲಿ ಮುಂಬೈ ಫ್ರಾಂಚೈಸಿ 1.70 ಕೋಟಿ ರೂಪಾಯಿಗೆ ಖರೀದಿಸಿತು.

ತಿಲಕ್ ವರ್ಮಾ ಅವರ ವೃತ್ತಿಜೀವನ ಐಪಿಎಲ್ ಆಚೆಗೆ, ದೇಶೀಯ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಏರಿಕೆಯಾಗಿದೆ. ತಿಲಕ್ ವರ್ಮಾ ರಣಜಿ ಟ್ರೋಫಿಯ 2018-19 ಆವೃತ್ತಿಯಲ್ಲಿ ಹೈದರಾಬಾದ್‌ ತಂಡದ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದರು.

19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ತಿಲಕ್ ವರ್ಮಾ ಪುಟಿದೆದ್ದರು. ತಮ್ಮ ಆಟವನ್ನು ಸುಧಾರಿಸಿಕೊಂಡು ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.

ಭಾರತದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಅವರು ಅದ್ಭುತ 2023ರ ಐಪಿಎಲ್ ಅಭಿಯಾನದ ನಂತರ, ತಿಲಕ್ ವರ್ಮಾ ಅವರು ಎಲ್ಲ ಮಾದರಿಯಲ್ಲಿ ಭಾರತ ತಂಡದ ಆಟಗಾರನಾಗುವ ಸಾಮರ್ಥ್ಯದ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರ ಹೇಳಿಕೆಯನ್ನು ಪುನರುಚ್ಚಿಸಿದರು.

"ತಿಲಕ್ ವರ್ಮಾ ಅವರು ಭಾರತ ತಂಡಕ್ಕೆ ಎಲ್ಲ ಮಾದರಿಯ ಆಟಗಾರನಾಗಬಹುದು ಎಂದು ರೋಹಿತ್ ಶರ್ಮಾ ಸರಿಯಾಗಿ ಉಲ್ಲೇಖಿಸಿದ್ದಾರೆ. ಆದ್ದರಿಂದ ಈಗ ಉತ್ತಮ ಪ್ರದರ್ಶನ ನೀಡುವುದು, ಅವರ ಫಿಟ್ನೆಸ್ ಕಾಪಾಡಿಕೊಳ್ಳುವುದು ಮುಮದಿನ ಸವಾಲಾಗಿದೆ," ಎಂದು ಸುನಿಲ್ ಗವಾಸ್ಕರ್ ಹೇಳಿದ್ದರು.

Story first published: Thursday, August 3, 2023, 20:41 [IST]
Other articles published on Aug 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+