ಭಾರತ vs ವಿಂಡೀಸ್: ಏಕದಿನ ಸರಣಿ, ಕ್ವೀನ್ಸ್ ಪಾರ್ಕ್ ಓವಲ್ ಪಿಚ್ ರಿಪೋರ್ಟ್, ಹವಾಮಾನ ವರದಿ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬಳಿಕ ಭಾರತ ಮತ್ತೊಂದು ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ.
ಮೂರು ಪಂದ್ಯಗಳ ಸರಣಿ ಇದಾಗಿದ್ದು ಎಲ್ಲಾ ಮೂರು ಪಂದ್ಯಗಳು ಕೂಡ ಒಂದೇ ತಾಣದಲ್ಲಿ ನಡೆಯಲಿದೆ. ಜುಲೈ 22, 24 ಹಾಗೂ ಜುಲೈ 27ರಂದು ಈ ಪಂದ್ಯಗಳು ನಡೆಯಲಿದ್ದು ಟ್ರಿನಿಡಾಸ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನ್ಲಲಿ ಈ ಪಂದ್ಯಗಳು ನಡೆಯಲಿದೆ. ಈ ಸರಣಿಯ ಬಳಿಕ ಐದು ಪಂದ್ಯಗಳ ಟಿ20 ಸರಣಿ ಕೂಡ ಆಯೋಜನೆಯಾಗಲಿದೆ. ಇನ್ನು ಈ ಸರಣಿಯಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.
ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ನಡೆಯಲಿರುವ ಕ್ವಿನ್ಸ್ ಪಾರ್ಕ್ ಓವಲ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹಾಗೂ ಇತರ ಕೆಲ ಮಾಹಿತಿಗಳನ್ನು ನೋಡೋಣ

ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಕೂಡ ಪೋರ್ಟ್ ಆಫ್ ಸ್ಪೈನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿಯೇ ನಡೆಯಲಿದೆ. ಈ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾಗಲಿದ್ದು ತಡರಾತ್ರಿವರೆಗೆ ನಡೆಯಲಿದೆ. 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಭಾರತದಲ್ಲಿ ಯಾವುದೇ ಖಾಸಗಿ ವಾಹಿನಿಗಳಲ್ಲಿ ಈ ಪಂದ್ಯದ ನೇರಪ್ರಸಾರವಿರುವುದಿಲ್ಲ. ಆದರೆ ಡಿಡಿ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಲಿದೆ. ಇನ್ನು 'ಫ್ಯಾನ್‌ಕೋಡ್' ಆಪ್‌ನಲ್ಲಿಯೂ ಲೈವ್‌ಸ್ಟ್ರೀಮಿಂಗ್ ಆಗಲಿದೆ.

ಕ್ವೀನ್ಸ್ ಪಾರ್ಕ್‌ನಲ್ಲಿ ಭಾರತ, ವಿಂಡೀಸ್ ಸಾಧನೆ
ಭಾರತವು ಪೋರ್ಟ್ ಆಫ್ ಸ್ಪೇನ್‌ನಲ್ಲಿ 21 ಏಕದಿನ ಪಂದ್ಯಗಳನ್ನು ಈವರೆಗೆ ಆಡಿದೆ. ಇದರಲ್ಲಿ ಭಾರತ ತಂಡ 11 ಏಕದಿನ ಪಂದ್ಯಗಳಲ್ಲಿ ಗೆದ್ದಿದ್ದರೆ 9 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಕಂಡಿದೆ. ಇನ್ನು ವೆಸ್ಟ್ ಇಂಡೀಸ್ ತಂಡ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ 57 ಏಕದಿನ ಪಂದ್ಯಳನ್ನು ಆಡಿದ್ದು ಇದರಲ್ಲಿ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ 25 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 5 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಕಂಡಿದೆ.

ಕ್ವೀನ್ಸ್ ಪಾರ್ಕ್ ಓವಲ್ ಪಿಚ್ ರಿಪೋರ್ಟ್
ಕ್ವೀನ್ಸ್ ಪಾರ್ಕ್ ಓವಲ್‌ನ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳು ಮತ್ತು ಬೌಲರ್ ಎರಡೂ ವಿಭಾಗಕ್ಕೂ ಸಹಕಾರಿಯಾಗಿರುತ್ತದೆ. ಇಲ್ಲಿನ ಪಿಚ್ ಅನ್ನು ಕ್ರಿಕೆಟಿಗರು ಸಾಮಾನ್ಯವಾಗಿ 'ಟ್ಯಾಕಿ' ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಇಲ್ಲಿ ಆಟ ಮುಂದುವರಿದಂತೆ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗುತ್ತಾ ಸಾಗುತ್ತದೆ. ಆದರೆ ಬ್ಯಾಟ್ಸ್‌ಮನ್‌ಗಳಿಗೆ ಕೂಡ ಉತ್ತಮ ಅವಕಾಶ ಇಲ್ಲಿ ದೊರೆಯುತ್ತದೆ. ವಿಶೇಷವಾಗಿ ಉತ್ತಮವಾಗಿ ಆರಂಭವನ್ನು ಪಡೆಯಲು ಸಾಧ್ಯವಾದರೆ ಮಧ್ಯಮ ಓವರ್‌ಗಳಲ್ಲಿ ಎದುರಾಗುವ ಸವಾಲನ್ನು ಮೀರಿ ನಿಲ್ಲಬಹುದು.

ಪೋರ್ಟ್‌ಆಫ್ ಸ್ಪೇನ್ ಹವಾಮಾನ ವರದಿ
ಕೆರಿಬಿಯನ್ ದ್ವೀಪಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ತಾಪಮಾನ, ಉತ್ತಮ ಪ್ರಮಾಣದ ಬಿಸಿಲು ಹೊಂದಿದ್ದರೂ ಹಠಾತ್ ಮಳೆಯಾಗುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಭಾರತ ಹಾಗೂ ವೆಸ್ಟ್ ಇಮಡೀಶ್ ವಿರುದ್ಧದ ಏಕದಿನ ಸರಣಿ ನಡೆಯುವ ಜುಲೈ 22 ರಿಂದ 27 ರವರೆಗಿನ ಅವಧಿಯಲ್ಲಿ ತಾಪಮಾನವು ಮಧ್ಯಮವಾಗಿರುತ್ತದೆ ಎಂದು ಹವಾಮಾನ ಮುನ್ಸೂಚನೆ ಹೇಳುತ್ತಿದೆ. ಕಡಿಮೆ ತಾಪಮಾನವು 25 ಡಿಗ್ರಿಯಾಗಿದ್ದರೆ ಹೆಚ್ಚಿನ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸದ್ಯಕ್ಕೆ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ ಆದರೆ ಮೋಡ ಕವಿಯುವ ನಿರೀಕ್ಷೆಯಿದೆ. ಇದು ಎರಡೂ ಕಡೆಯ ವೇಗಿಗಳಿಗೆ ಅನುಕೂಲವಾಗಬಹುದು.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್ ODI ತಂಡ: ನಿಕೋಲಸ್ ಪೂರನ್ (ನಾಯಕ), ಶಮ್ರಾಹ್ ಬ್ರೂಕ್ಸ್, ಬ್ರೆಂಡನ್ ಕಿಂಗ್, ರೋಮನ್ ಪೊವೆಲ್, ಕೀಸಿ ಕಾರ್ಟಿ, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಶಾಯ್ ಹೋಪ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications