
ಟೀಮ್ ಇಂಡಿಯಾದ ದಿಗ್ಗಜ ಜೋಡಿಯಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಇಬ್ಬರು ಆಟಗಾರರ ಜೊತೆಯಾಟ ಕೂಡ ಸಾಕಷ್ಟು ವಿಶೇಷ ದಾಖಲೆಗಳನ್ನು ನಿರ್ಮಿಸಿದೆ. ಈಗ ಭಾರತದ ಮತ್ತೊಂದು ದಿಗ್ಗಜ ಜೋಡಿ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಈ ದಿಗ್ಗಜ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು ಭಾರತ ಹಾಲಿ ಆಟಗಾರರು ಸಿದ್ದವಾಗಿದ್ದಾರೆ.
ಆ ಜೋಡಿ ಬೇರೆ ಯಾರೂ ಅಲ್ಲ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಏಕದಿನ ಕ್ರಿಕೆಟ್‌ನಲ್ಲಿ ಗಂಗೂಲಿ ಹಗೂ ತೆಂಡೂಲ್ಕರ್ ಜೋಡಿ 5000 ರನ್‌ಗಳ ಜೊತೆಯಾಟ ನೀಡಿದ ವಿಶೇಷ ದಾಖಲೆ ಹೊಂದಿದ್ದಾರೆ. ಈ ಮೈಲಿಗಲ್ಲನ್ನು ತಲುಪಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಅತ್ಯಂತ ಸನಿಹಕ್ಕೆ ಬಂದಿದ್ದಾರೆ. ಈ ಪಟ್ಟಿಗೆ ಸೇರಲು ಕೊಹ್ಲಿ ಹಾಗೂ ಶರ್ಮಾ ಜೋಡಿ ಕೇವಲ 94 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಬೇಕಿದೆ.
ಹೌದು ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈವರೆಗೆ 4906 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಇನ್ನು 94 ರನ್‌ಗಳ ಜೊಯತೆಯಾಟ ಈ ಜೋಡಿಯಿಂದ ಬಂದರೆ ಈ ಐತಿಹಾಸಿಕ ಸಾಧನೆ ಪೂರ್ಣಗೊಳ್ಳಲಿದೆ. ಈವರೆಗೆ 81 ಇನ್ನಿಂಗ್ಸ್‌ಗಳಲ್ಲಿ ಈ ಜೋಡಿ 18 ಶತಕಗಳ ಜೊತೆಯಾಟವಾಡಿದ್ದು 64.55ರ ಸರಾಸರಿಯನ್ನು ಹೊಂದಿದೆ. ಈ ಮೂಲಕ ಈ ಮಹತ್ವದ ಮೈಲಿಗಲ್ಲನ್ನು ತಲುಪಿದ ಭಾರತದ ಮೂರನೇ ಜೋಡಿ ಎನಿಸಿಕೊಳ್ಳಲಿದೆ.
ಸಚಿನ್ ಗಂಗೂಲಿ ಜೋಡಿಯನ್ನು ಹೊರತುಪಡಿಸಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಕೂಡ ಈ ಸಾಧನೆಯನ್ನು ಮಾಡಿದ್ದು 112 ಇನ್ನಿಂಗ್ಸ್‌ಗಳಲ್ಲಿ 5023 ರನ್‌ಗಳಿಸಿದೆ ಈ ಜೋಡಿ. ಇನ್ನು ಒಟ್ಟಾರೆಯಾಗಿ ಈ ವಿಶೇಷ ಸಾಧನಕರ ಪಟ್ಟಿಗ ಸೇರ್ಪಡೆಯಾಗಲಿರುವ 8ನೇ ಜೋಡಿ ಎನಿಸಲು ಕೊಹ್ಲಿ ಶರ್ಮಾ ಸಜ್ಜಾಗಿದ್ದಾರೆ.
ಇನ್ನು ಏಕದಿನ ಮಾದರಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ಸನಿಹದಲ್ಲಿ ಈ ಜೋಡಿಯಿದೆ. ವೆಸ್ಟ್ ಇಂಡೀಸ್ ವಿರುದ್ಧ ಈವರೆಗೆ ಆಡಿರುವ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ 922 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧ 1000 ರನ್‌ಗಳ ಜೊತೆಯಾಟ ನೀಡಿದ ಮೊದಲ ಭಾರತೀಯ ಜೋಡಿ ಎನಿಸಿಕೊಳ್ಳುವ ಅವಕಾಶವೂ ಈ ಆಟಗಾರರಿಗಿದೆ. ಈ ಮೂಲಕ ಎರಡು ದೇಶಗಳ ವಿರುದ್ಧ 1000 ರನ್‌ಗಳ ಜೊತೆಯಾಟ ನೀಡಿದ ಎರಡನೇ ಭಾರತೀಯ ಜೋಡಿ ಎನಿಸುವ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 20 ಇನ್ನಿಂಗ್ಸ್‌ಗಳಲ್ಲಿ 1128 ರನ್‌ಗಳಿಸಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಎರಡು ದೇಶಗಳ ವಿರುದ್ಧ ಸಹಸ್ರ ರನ್ ಜೊತೆಯಾಟ ನೀಡಿದ ಭಾರತದ ಮೊದಲ ಜೋಡಿ.
ಕಳೆದ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯ ವೇಳೆ ಉಂಟಾದ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ವಿಫಲವಾದ ನಂತರ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ರೋಹಿತ್‌ಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಪೂರ್ಣಕಾಲಿಕ ನಾಯಕನಾಗಿ ಏಕದಿನ ಸರಣಿಯಾಗಿದೆ.