Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs WI 2nd T20: ವಿಂಡೀಸ್‌ಗೆ ಗೆಲ್ಲಲು 153 ರನ್‌ಗಳ ಗುರಿ ನೀಡಿದ ಭಾರತ

ಭಾರತ ಹಾಗೂ ವೆಸ್ಟ್ ಇಂಡಿಸ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದ ಪ್ರಮುಖ ಬ್ಯಾಟರ್‌ಗಳಿಮದ ರನ್ ಹರಿದು ಬಾರದಿರುವುದು ಭಾರೀ ಈ ಹಿನ್ನಡೆಗೆ ಕಾರಣವಾಯಿತು. ಆದರೆ ಎರಡನೇ ಪಂದ್ಯವನ್ನಾಡುತ್ತಿರುವ ಯುವ ಆಟಗಾರ ತಿಲಕ್ ವರ್ಮಾ ಅದ್ಭುತ ಇನ್ನಿಂಗ್ಸ್ ಆಡಿದ ಪರಿಣಾಮವಾಗಿ ಭಾರತ 150ರ ಗಡಿ ದಾಟಲು ಸಾಧ್ಯವಾಗಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರವಾಗಿ ಶುಬ್ಮನ್ ಗಿಲ್ ಮತ್ತೊಂದು ನೀರಸ ಪ್ರದರ್ಶನ ನೀಡಿದ್ದಾರೆ. ಗಿಲ್ ಈ ಪಂದ್ಯದಲ್ಲಿ ಕೇವಲ 7 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಅದಾದ ಬಳಿಕ ಸೂರ್ಯಕುಮಾರ್ ಯಾದವ್ ರನೌಟ್ ಆಗುವ ಮೂಲಕ ಮತ್ತೊಂದು ಆಘಾತ ನೀಡಿದರು. ನಂತರ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಜವಾಬ್ಧಾರಿಯುತ ಜೊತೆಯಾಟವೊಂದನ್ನು ನೀಡಿ ಗಮನಸೆಳೆದರು. ಆದರೆ ಇಶಾನ್ 27 ರನ್‌ಗಳೀಗೆ ತಮ್ಮ ವಿಕೆಟ್ ಕಳೆದುಕೊಂಡರು.

IND vs WI: West Indies need 153 runs to wi against India in 2nd t20I

ನಂತರ ಸಂಜು ಸ್ಯಾಮ್ಸನ್ ಮುನ್ನುಗ್ಗು ಬಾರಿಸಲು ಹೋಗಿ 7 ರನ್‌ಗೆ ಸ್ಟಂಪ್ ಔಟ್ ಆದರು. ಇನ್ನು ತಿಲಕ್ ವರ್ಮಾ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ಜವಾಬ್ಧಾರಿಯುತ ಆಟ ನೀಡಿದರು. 41 ಎಸೆತ ಎದುರಿಸಿದ ತಿಲಕ್ 51 ರನ್‌ ಬಾರಿಸಿ ತಮ್ಮ ಚೊಚ್ಚಲ ಅರ್ಧ ಶತಕ ಸಿಡಿಸಿ ಗಮನಸೆಳೆದರು. ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್‌ನಿಮದ 24 ರನ್‌ಗಳ ಕೊಡುಗೆ ಬಂದಿತು. ಅಂತಿಮವಾಗಿ ಭಾರತ 7 ವಿಕೆಟ್ ಕಳೆದುಕೊಂಡು 152 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.


ಇನ್ನು ಸರಣಿಯ ಮೊದಲ ಪಂದ್ಯ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದರೆ ಇಂದಿನ ಪಂದ್ಯ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಆಯೋಜನೆಯಾಗಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು 7:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸುವ ಅವಕಾಶವಿದೆ. ಅಲ್ಲದೆ ಫ್ಯಾನ್ ಕೋಡ್ ಹಾಗೂ ಜಿಯೋ ಜಿನಿಮಾದಲ್ಲಿಯೂ ಈ ಪಂದ್ಯದ ಲೈವ್‌ಸ್ಟ್ರೀಮಿಂಗ್ ವೀಕ್ಷಿಸಬಹುದು.

ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್
ಬೆಂಚ್: ಶಾಯ್ ಹೋಪ್, ರೋಸ್ಟನ್ ಚೇಸ್, ಒಶಾನೆ ಥಾಮಸ್, ಓಡಿಯನ್ ಸ್ಮಿತ್

ಟೀಮ್ ಇಂಡಿಯಾ ಆಡುವ ಬಳಗ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್
ಬೆಂಚ್: ಯಶಸ್ವಿ ಜೈಸ್ವಾಲ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಕುಲದೀಪ್ ಯಾದವ್

Story first published: Sunday, August 6, 2023, 21:55 [IST]
Other articles published on Aug 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+