IND vs WI 2nd ODI: ಟೀಂ ಇಂಡಿಯಾ ಪ್ರದರ್ಶನ ನೋಡಿ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?

ಶಿಖರ್ ಧವನ್ ನಾಯಕತ್ವದ ಭಾರತ ತಂಡ ಮೊದಲ 2 ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಪಂದ್ಯ-ವಿಜೇತ ಕೊಡುಗೆ ನೀಡಿದ ಪರಿಣಾಮ 2-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿದೆ.
ಈ ಮೂವರು ಯುವ ಬ್ಯಾಟರ್‌ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಯಶಸ್ವಿಯಾಗಿ 312 ರನ್ ಚೇಸ್ ಮಾಡಿತು ಮತ್ತು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ತನ್ನದಾಗಿಸಿಕೊಂಡಿತು. ಪೋರ್ಟ್ ಆಫ್ ಸ್ಪೇನ್‌ನಲ್ಲಿ ಬುಧವಾರ ನಡೆಯಲಿರುವ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಭಾರತವು ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದೆ.
ಮೂರು ಸ್ವರೂಪಗಳನ್ನು ಆಡುವುದು ಕಷ್ಟ; ನಿವೃತ್ತಿಯ ಸುಳಿವು ನೀಡಿದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ?
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ವೀರಾವೇಶದ ಆಟಕ್ಕಾಗಿ ಸಂತೋಷಗೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆರನೇ ವಿಕೆಟ್‌ಗೆ ದೀಪಕ್ ಹೂಡಾ ಜೊತೆಗೆ 51 ರನ್‌ಗಳ ಜೊತೆಯಾಟ
ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತವು ಭಾನುವಾರ (ಜುಲೈ 25) ಅಕ್ಷರ್ ಅವರ 64 ರನ್‌ಗಳ ಸಹಾಯದಿಂದ ಅಜೇಯ 2-0 ಮುನ್ನಡೆ ಸಾಧಿಸಿ, ಸರಣಿ ತನ್ನದಾಗಿಸಿಕೊಂಡಿತು. ಮೆನ್ ಇನ್ ಬ್ಲೂಗೆ 105 ರನ್‌ಗಳ ಅಗತ್ಯವಿದ್ದಾಗ 28 ವರ್ಷ ವಯಸ್ಸಿನ ಅಕ್ಷರ್ ಪಟೇಲ್ 39ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದು ತಂಡವನ್ನು ಗುರಿ ತಲುಪಿಸಿದರು.
ಅಕ್ಷರ್ ಪಟೇಲ್ ಆರನೇ ವಿಕೆಟ್‌ಗೆ ದೀಪಕ್ ಹೂಡಾ ಜೊತೆಗೆ 51 ರನ್‌ಗಳ ಜೊತೆಯಾಟವಾಡಿದರು. ನಂತರ ದೀಪಕ್ ಹೂಡಾ 33 ರನ್‌ಗಳಿಗೆ ಔಟಾದರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದರೂ, ವೆಸ್ಟ್ ಇಂಡೀಸ್ ಬೌಲರ್‌ಗಳ ಮುಂದೆ ಅಕ್ಷರ್ ಪಟೇಲ್ ಗಟ್ಟಿಯಾಗಿ ನಿಂತು ಭಾರತವನ್ನು ಎರಡು ವಿಕೆಟ್‌ಗಳ ಗೆಲುವಿನೊಂದಿಗೆ ಸರಣಿ ಗೆಲ್ಲಿಸಿಕೊಟ್ಟರು.
ಟೀಮ್ ಇಂಡಿಯಾದಿಂದ ಅತ್ಯುತ್ತಮ ಪ್ರದರ್ಶನವಾಗಿದೆ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ಪಡೆದಿರುವ ಭಾರತ ತಂಡದ ಖಾಯಂ ರೋಹಿತ್ ಶರ್ಮಾ, ಶಿಖರ್ ಧವನ್ ನಾಯಕತ್ವದ ತಂಡವನ್ನು ಶ್ಲಾಘಿಸಿದರು. "ವಾಹ್ ಅದು ಕಳೆದ ರಾತ್ರಿ ಟೀಮ್ ಇಂಡಿಯಾದಿಂದ ಅತ್ಯುತ್ತಮ ಪ್ರದರ್ಶನವಾಗಿದೆ. ಬಾಪು ಬಾದು ಸಾರು ಚೆ," ಎಂದು ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ಸ್ಥಳದಲ್ಲಿ ಜುಲೈ 27ರಂದು ಉಭಯ ತಂಡಗಳು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ಎದುರಿಸುವ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಭಾರತ ಹೊಂದಿದೆ. ಏತನ್ಮಧ್ಯೆ ಖಾಯಂ ನಾಯಕ ರೋಹಿತ್ ಶರ್ಮಾ ಜುಲೈ 29ರಿಂದ ಆಗಸ್ಟ್ 7ರವರೆಗೆ ನಡೆಯಲಿರುವ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ
ರೋಹಿತ್ ಶರ್ಮಾ ಜೊತೆಗೆ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಕೂಡ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲಿದ್ದಾರೆ. ಇಂಗ್ಲೆಂಡ್ ಸರಣಿಯ ಭಾಗವಾಗಿದ್ದ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಟಿ20 ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.
ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಟಿ20 ಅಂತಾರಾಷ್ಟ್ರೀಯ ಸರಣಿಗೆ ಸೇರ್ಪಡೆಗೊಂಡಿದ್ದಾರೆ. ಏತನ್ಮಧ್ಯೆ, ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಅವರನ್ನು ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಕೆಎಲ್ ರಾಹುಲ್‌ಗೆ ಕೊರೊನಾ ವೈರಸ್ ದೃಢಪಟ್ಟಿರುವುದರಿಂದ ಅಲಭ್ಯರಾಗಲಿದ್ದಾರೆ. ಫಿಟ್‌ನೆಸ್‌ನಲ್ಲಿ ತೇರ್ಗಡೆಯಾಗಿರುವ ಕಲದೀಪ್ ಯಾದವ್ ವೆಸ್ಟ್ ಇಂಡೀಸ್ ವಿಮಾನ ಹತ್ತಿದ್ದಾದ್ದು, ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications