Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ವಿರಾಟ್ ಕೊಹ್ಲಿ ಬ್ಯಾಟಿಂಗ್‌ನ ಎಲ್ಲಾ ದಾಖಲೆ ಮುರಿತಾರಾ?; ವಿಂಡೀಸ್ ಲೆಜೆಂಡ್ ನೀಡಿದ ಉತ್ತರ ಹೀಗಿದೆ

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಒಬ್ಬರು. ಈ ರನ್ ಮಷಿನ್ ಆಟದ ಎಲ್ಲಾ ಸ್ವರೂಪಗಳಲ್ಲಿ ದಾಖಲೆ ಅಳಿಸಿ ಹಾಕುವುದು ಮತ್ತು ಹೊಸ ದಾಖಲೆ ನಿರ್ಮಾಣವನ್ನು ಮುಂದುವರೆಸಿದ್ದಾರೆ.

ಇದೇ ವೇಳೆ ವೆಸ್ಟ್ ಇಂಡೀಸ್‌ನ ಲೆಜೆಂಡ್ ಗ್ಯಾರಿ ಸೋಬರ್ಸ್ ಅವರು ಭಾರತದ ಬ್ಯಾಟಿಂಗ್ ಶ್ರೇಷ್ಠ ವಿರಾಟ್ ಕೊಹ್ಲಿ ಕುರಿತು ಎಚ್ಚರಿಕೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ.

34 ವರ್ಷದ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು ಮತ್ತು ಆತನ ವೃತ್ತಿಜೀವನವು ಮುಂದುವರೆದಂತೆ ಅವರು ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸುತ್ತಾರೆ ಎಂದಿದ್ದಾರೆ.

ind-vs-wi-will-virat-kohli-break-all-batting-records

ವಿರಾಟ್ ಕೊಹ್ಲಿ ಪ್ರಸ್ತುತ 76 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ ಮತ್ತು ಸಾರ್ವಕಾಲಿಕ ಶತಕಗಳ ಪಟ್ಟಿಯಲ್ಲಿ ಭಾರತ ಇನ್ನೊಬ್ಬ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನ ಅಂತ್ಯಗೊಳಿಸುವ ಹೊತ್ತಿಗೆ ಕ್ರಿಕೆಟ್‌ನ ಅನೇಕ ದಾಖಲೆಗಳನ್ನು ಮುರಿಯುತ್ತಾರೆ ಎಂದು ಈಗಾಗಲೇ ಅನೇಕ ಕ್ರಿಕೆಟ್ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ, ಗ್ಯಾರಿ ಸೋಬರ್ಸ್ ಮಾತ್ರ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ.

ವೆಸ್ಟ್ ಇಂಡೀಸ್‌ನ ಮಾಜಿ ಎಡಗೈ ಬ್ಯಾಟರ್ ಕೊಹ್ಲಿ ಅವರಿಗೆ ಸರಿಯಾದ ಬ್ಯಾಟಿಂಗ್ ವಿಧಾನ ಸಿಕ್ಕಿದೆ ಎಂದು ಭಾವಿಸಿದ್ದು, ಆದರೂ ಆತ ಯಾವಾಗಲೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಗ್ಯಾರಿ ಸೋಬರ್ಸ್ ತಿಳಿಸಿದರು.

"ವಿರಾಟ್ ಕೊಹ್ಲಿ ಉತ್ತಮ ಆಟಗಾರ ಎಂದು ನಾನು ಭಾವಿಸುತ್ತೇನೆ. ಆತ ಸರಿಯಾದ ವಿಧಾನ ಮತ್ತು ಸರಿಯಾದ ಮನೋಭಾವದಲ್ಲಿ ಸಾಗುತ್ತಿದ್ದರಿಂದ ಚೆನ್ನಾಗಿ ಆಡುತ್ತಾರೆ. ಅವರು ಗಳಿಸುವ ರನ್‌ಗಳಿಂದ ನಾನು ಎಂದಿಗೂ ಆಶ್ಚರ್ಯಪಡಲಿಲ್ಲ," ಎಂದು ಗ್ಯಾರಿ ಸೋಬರ್ಸ್ ರೆವ್‌ಸ್ಪೋರ್ಟ್ಜ್‌ಗೆ ತಿಳಿಸಿದರು.

ವಿರಾಟ್ ಕೊಹ್ಲಿ ಕ್ರಿಕೆಟ್‌ನಲ್ಲಿ ಎಲ್ಲಾ ಅತಿದೊಡ್ಡ ದಾಖಲೆಗಳನ್ನು ಮುರಿಯಲು ಸಾಧ್ಯವೇ ಎಂದು ಪ್ರಶ್ನಿಸಿದಾಗ, ಅದಕ್ಕೆ ಗ್ಯಾರಿ ಸೋಬರ್ಸ್ ಎಚ್ಚರಿಕೆಯ ಪದವನ್ನು ಬಳಿಸಿದರು.

"ನಾನು ಹೌದು ಎಂದು ಹೇಳುವುದಿಲ್ಲ. ಏಕೆಂದರೆ ಕೆಲವೊಮ್ಮೆ ಕ್ರಿಕೆಟ್‌ನಲ್ಲಿ ತುಂಬಾ ತಮಾಷೆಯಾಗಬಹುದು. ಆಟದಲ್ಲಿ ಕೆಲವು ಉತ್ತಮ ಬೌಲರ್‌ಗಳನ್ನು ಎದುರಿಸಬೇಕಾಗುತ್ತದೆ," ಎಂದರು.

"ನೀವು ಯೋಚಿಸದ ರೀತಿಯಲ್ಲಿ ಚೆಂಡಿನೊಂದಿಗೆ ಆಟವಾಡುವ ಬೌಲರ್‌ಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿಯ ಬೌಲರ್‌ಗಳ ವಿರುದ್ಧ ಆಗಾಗ್ಗೆ ಆಡುತ್ತಿದ್ದೀರಿ, ಹೀಗಾಗಿ ಎಲ್ಲಾ ಸಮಯದಲ್ಲೂ ಉತ್ತಮ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ," ಎಂದು ಗ್ಯಾರಿ ಸೋಬರ್ಸ್ ಹೇಳಿದರು.

ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಸರಣಿಯು ಈಗಾಗಲೇ 1-1 ಅಂತರದಿಂದ ಸಮಬಲಗೊಂಡಿದೆ.

ವೆಸ್ಟ್ ಇಂಡೀಸ್ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಆಡುವ 11ರ ಬಳಗಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

Story first published: Tuesday, August 1, 2023, 12:58 [IST]
Other articles published on Aug 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+